ಕರ್ನಾಟಕ

karnataka

ETV Bharat / state

ಸಿಎಂ ಬಿಎಸ್‌ವೈ ನಿವಾಸಕ್ಕೆ‌ ಸಚಿವರ ದಂಡು.. ಪ್ರಮುಖ ಖಾತೆಗಾಗಿ ಲಾಬಿ ಜೋರು? - ಸಿಎಂ ನಿವಾಸಕ್ಕೆ‌ ಸಚಿವರ

ದೆಹಲಿಯಿಂದ ಸಿಎಂ ಬಿಎಸ್​ವೈ ಹಿಂದಿರುಗುತ್ತಿದ್ದಂತೆ ಖಾತೆ ಹಂಚಿಕೆ ವಿಚಾರವಾಗಿ ರಾಜಕೀಯ ಲಾಬಿ ನಡೆಸಲು ನೂತನ ಸಚಿವರು ಸಿಎಂ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಸಿ ಎಂ ನಿವಾಸ

By

Published : Aug 24, 2019, 11:19 AM IST

ಬೆಂಗಳೂರು : ಖಾತೆಗಳ ಹಂಚಿಕೆ ಸಂಬಂಧ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಹಿಂದಿರುಗುತ್ತಿದ್ದಂತೆ ಸಿಎಂ ಬಿ ಎಸ್‌ ಯಡಿಯೂರಪ್ಪ ನಿವಾಸಕ್ಕೆ ಸಚಿವರು ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಸಿಎಂ ನಿವಾಸಕ್ಕೆ‌ ಸಚಿವರ ದಂಡು..
ರಾತ್ರಿ ದೆಹಲಿಯಿಂದ ಸಿಎಂ ಬಿಎಸ್​ವೈ ಹಿಂದಿರುಗುತ್ತಿದ್ದಂತೆ ಮುಂಜಾನೆ ನೂತನ ಸಚಿವರಾದ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಸೇರಿದಂತೆ ಹಲವು ಸಚಿವರು ಭೇಟಿ ನೀಡಿ ಸಿಎಂ ಜೊತೆ ಚರ್ಚೆ ನಡೆಸಿದರು. ಮಧ್ಯಾಹ್ನ ಖಾತೆಗಳ ಹಂಚಿಕೆ ಮಾಡುವುದಾಗಿ ಸಿಎಂ ಹೇಳಿಕೆ ನೀಡಿರುವ ಬೆನ್ನಲ್ಲೇ ಖಾತೆಗಳಿಗಾಗಿ ಹಿರಿಯ ಸಚಿವರು ಕೊನೆ ಹಂತದ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಕೂಡ ಸಿಎಂ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ವಿಶ್ವನಾಥ್‌ಗೆ ಸಚಿವ ಸ್ಥಾನ ಸಿಗದ ಸಂಬಂಧ ಚರ್ಚೆ ನಡೆಸಿದರು ಎನ್ನಲಾಗಿದೆ. ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಂತರ ಅಂತರ ಕಾಯ್ದುಕೊಂಡಿದ್ದ ಕೆ ಜಿ ಬೋಪಯ್ಯ ಅಸಮಾಧಾನದ ನಂತರ ಮೊದಲ ಬಾರಿಗೆ ಸಿಎಂ ನಿವಾಸಕ್ಕೆ ಭೇಟಿ ನೀಡಿ ಬಿಎಸ್​ವೈ ಜತೆಗೆ ಮಾತುಕತೆ ನಡೆಸಿ ತಮ್ಮ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details