ಕರ್ನಾಟಕ

karnataka

ETV Bharat / state

ಗೃಹ ಮಂಡಳಿ ಆಯುಕ್ತರನ್ನು ಹೆಚ್ಚುವರಿ ಜವಾಬ್ದಾರಿಯಿಂದ ಮುಕ್ತಗೊಳಿಸಿ: ಸಿಎಂಗೆ ಸಚಿವ ಸೋಮಣ್ಣ ಮನವಿ - KHB Commissioner Issue

ಗೃಹ ಮಂಡಳಿ ಆಯುಕ್ತರನ್ನು ಹೆಚ್ಚುವರಿ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ವಸತಿ ಸಚಿವ ವಿ.ಸೋಮಣ್ಣ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಖುದ್ದು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದ ವಿ.ಸೋಮಣ್ಣ, ನಂತರ ಕೆಲಕಾಲ ಸಿಎಂ ಜೊತೆ ಚರ್ಚಿಸಿದರು.

Minister V Somanna Visits CM Regarding KHB Commissioner Issue
ವಸತಿ ಸಚಿವ ವಿ.ಸೋಮಣ್ಣ ಹಾಗೂ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

By

Published : Nov 6, 2020, 5:06 PM IST

ಬೆಂಗಳೂರು:ಗೃಹ ಮಂಡಳಿ ಆಯುಕ್ತರಿಗೆ ವಹಿಸಲಾಗಿರುವ ಹೆಚ್ಚುವರಿ ಇಲಾಖೆಗಳ ಜವಾಬ್ದಾರಿಯಿಂದ ಮುಕ್ತಗೊಳಿಸಿ ಕೇವಲ ಗೃಹ ಮಂಡಳಿಗೆ ಸೀಮಿತವಾದ ಜವಾಬ್ದಾರಿ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ವಸತಿ ಸಚಿವ ವಿ.ಸೋಮಣ್ಣ ಮನವಿ ಸಲ್ಲಿಸಿದರು.

ಸಿಎಂ ಗೃಹಕಚೇರಿ ಕೃಷ್ಣಾಗೆ ಭೇಟಿ ನೀಡಿದ ವಸತಿ ಸಚಿವ ವಿ.ಸೋಮಣ್ಣ, ಕೆಹೆಚ್​ಬಿ ಆಯುಕ್ತರಾಗಿರುವ ಐಎಎಸ್ ಅಧಿಕಾರಿ ರಮೇಶ್ ಅವರಿಗೆ ಹೆಚ್ಚುವರಿ ಇಲಾಖೆಗಳ ಜವಾಬ್ದಾರಿ ಇರುವ ಕುರಿತು ಸಿಎಂ ಗಮನಕ್ಕೆ ತಂದರು.

ಗೃಹ ಮಂಡಳಿ ಆಯುಕ್ತರಿಗೆ ಎರಡು ಮೂರು ಇಲಾಖೆಗಳ ಜವಾಬ್ದಾರಿ ವಹಿಸಿರುವುದರಿಂದ ಅವರಿಗೆ ಎಲ್ಲೂ ನ್ಯಾಯ ಸಲ್ಲಿಸಲು ಆಗುವುದಿಲ್ಲ. ಹೌಸಿಂಗ್ ಬೋರ್ಡ್‌ ಆಯುಕ್ತ ಜವಾಬ್ದಾರಿ ಮಾತ್ರ ಇರಲಿ. ಅವರಿಗೆ ವಹಿಸಿರುವ ಇತರೆ ಜವಾಬ್ದಾರಿಗಳಿಗೆ ಬೇರೆ ಅಧಿಕಾರಿಗಳನ್ನು ನಿಯೋಜಿಸಿ ಎಂದು ಸಿಎಂಗೆ ವಸತಿ ಸಚಿವ ವಿ.ಸೋಮಣ್ಣ ಮನವಿ ಮಾಡಿದರು. ಖುದ್ದು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿ ನಂತರ ಕೆಲಕಾಲ ಸಿಎಂ ಜೊತೆ ಚರ್ಚಿಸಿದರು.

ABOUT THE AUTHOR

...view details