ಕರ್ನಾಟಕ

karnataka

ETV Bharat / state

ಅಭಿವೃದ್ಧಿ, ದೇಶದ ಹಿತ ಕಾಯುವ ಚುನಾವಣಾ ಫಲಿತಾಂಶ ಇದಾಗಿದೆ: ಸಚಿವ ವಿ.ಸೋಮಣ್ಣ - ವಸತಿ ಸಚಿವ ವಿ. ಸೋಮಣ್ಣ

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ವಿಚಾರವಾಗಿ ಸಚಿವ ವಿ. ಸೋಮಣ್ಣ, ಆರ್.ಅಶೋಕ್, ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​ಗೆ ಜನ ಪಾಠ ಕಲಿಸಿದ್ದಾರೆ ಎಂದು ಟಾಂಗ್​ ನೀಡಿದ್ದಾರೆ.

ಸಚಿವ ವಿ.ಸೋಮಣ್ಣ
ಸಚಿವ ವಿ.ಸೋಮಣ್ಣ

By

Published : Mar 10, 2022, 12:43 PM IST

ಬೆಂಗಳೂರು: ಅಭಿವೃದ್ಧಿ, ದೇಶದ ಹಿತ ಕಾಯುವ ಚುನಾವಣಾ ಫಲಿತಾಂಶ ಇದಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜನಾಭಿಪ್ರಾಯದ ಪಂಚ ರಾಜ್ಯಗಳ ಚುನಾವಣೆ ಇದಾಗಿದೆ. ಮೋದಿ, ಯೋಗಿ ಅವರ ಪರವಾದ ಮುಂದಿನ ಅಭ್ಯುದಯಕ್ಕೆ ನಿದರ್ಶನವಾದ ಚುನಾವಣಾ ಫಲಿತಾಂಶ ಇದಾಗಿದೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಬಿಜೆಪಿ ಸಚಿವರು

ಚುನಾವಣೆ ಫಲಿತಾಂಶದಿಂದ ರಾಜ್ಯದಲ್ಲಾಗುವ ಬದಲಾವಣೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿ ಪರವಾಗಿ, ಬಹಳ ಬುದ್ಧಿವಂತಿಕೆಯಿಂದ ಬೊಮ್ಮಾಯಿ ಆಡಳಿತ ನೀಡುತ್ತಿದ್ದಾರೆ. ಬೊಮ್ಮಾಯಿ ಸರ್ಕಾರ ಸ್ಥಿರವಾಗಿದೆ. ಪಂಚ ರಾಜ್ಯಗಳ ಚುನಾವಣೆ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಬೊಮ್ಮಾಯಿ ಆಡಳಿತ ಸ್ಥಿರ ಹಾಗೂ ಗಟ್ಟಿಯಾಗಿದೆ. ಮುಂದಿನ ಚುನಾವಣೆಯೂ ಬೊಮ್ಮಾಯಿ ಅವರ ನಾಯಕತ್ವದಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:Manipur Result: 18 ಸಾವಿರ ಮತಗಳ ಅಂತರದಿಂದ ಸಿಎಂ ಬಿರೇನ್ ಸಿಂಗ್ ಗೆಲುವು

ಪಾದಯಾತ್ರೆ ಬಿಡಿ, ತೀರ್ಥಯಾತ್ರೆ ಮಾಡಿ:ಪಂಚರಾಜ್ಯಗಳ ಫಲಿತಾಂಶ ಹೊರ ಬೀಳುತ್ತಿರುವ ಬೆನ್ನಲ್ಲೇ ಅಭಿಪ್ರಾಯ ವ್ಯಕ್ತಪಡಿಸಿದ ಸಚಿವ ಆರ್.ಅಶೋಕ್, ಪಾದಯಾತ್ರೆ ಬೇಡ, ತೀರ್ಥಯಾತ್ರೆ ಮಾಡಿ ಎಂದು ಕಾಂಗ್ರೆಸ್​ಗೆ ಟಾಂಗ್​ ನೀಡಿದರು. ಬಿಜೆಪಿ ಮತ್ತೆ ಜಯಬೇರಿ ಸಾಧಿಸುತ್ತಿದೆ. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಹುಮತ ಸಿಗುತ್ತಿದೆ. ಉತ್ತರ ಪ್ರದೇಶದಲ್ಲಿ ನೆಕ್ ಟು ನೆಕ್ ಪೈಟ್ ಅಂತಾ ಇದ್ರು. ಆದರೆ, ಕಳೆದ ಬಾರಿಯಂತೆ ಬಿಜೆಪಿ ಈ ಬಾರಿ ಭರ್ಜರಿ ಗೆಲುವು ಸಾಧಿಸುವತ್ತಾ ಹೋಗುತ್ತಿದೆ. ಇಡೀ ದೇಶದಲ್ಲಿ ಪಂಜಾಬ್​ನಲ್ಲಿ ಮಾತ್ರ ಕಾಂಗ್ರೆಸ್ ಇದ್ದಿದ್ದು. ಈಗ ಅಲ್ಲೂ ಹೀನಾಯ ಸೋಲು ಕಾಣುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್​ಗೆ ಜನ ಪಾಠ ಕಲಿಸಿದ್ದಾರೆ: ಯಾವ ಯಾವ ರಾಜ್ಯದಲ್ಲಿ ಬಿಜೆಪಿಯ ಆಡಳಿತ ಇದೆಯೋ ಅದನ್ನು ಬಿಟ್ಟು ಕೊಡುವುದಿಲ್ಲ ಎನ್ನುವುದು ಕಾಂಗ್ರೆಸ್​ಗೆ ಗೊತ್ತಾಗಿದೆ. ಕರ್ನಾಟಕದಲ್ಲೂ ಬಿಟ್ಟು ಕೊಡುವುದಿಲ್ಲ. 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್​ಗೆ ಜನ ಪಾಠ ಕಲಿಸಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಾಲ್ಕು ರಾಜ್ಯಗಳನ್ನು ಉಳಿಸಿಕೊಂಡಿದ್ದೇವೆ. ಅಮೃತ ಕಾಲದ ಆಯವ್ಯಯ ಕೊಟ್ಟಿದ್ದಾರೆ. ಅದು ಪುನರಾವರ್ತನೆ ಆಗಿದೆ. ನಾಲ್ಕು ರಾಜ್ಯಗಳ ಜನತೆ ಉತ್ತಮ ಆಡಳಿತಕ್ಕೆ ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ತೀರ್ಮಾನಿಸಿದ್ದಾರೆ. ಪಂಜಾಬ್​ನಲ್ಲಿ ನಿರೀಕ್ಷೆ ಇರಲಿಲ್ಲ. ಆದರೆ, ಜಾತಿ ಓಲೈಕೆ ಮಾಡುವ ಕಾಂಗ್ರೆಸ್​ಗೆ ಜನರು ಪಾಠ ಕಲಿಸಿದ್ದಾರೆ ಎಂದರು.

ಇದನ್ನೂ ಓದಿ:ತಂದೆಯ ಕ್ಷೇತ್ರದಿಂದ ರಾಜಕೀಯ ಅದೃಷ್ಟ ಪರೀಕ್ಷೆಗಿಳಿದು ಸೋತ ಪರಿಕ್ಕರ್​​ ಮಗ.. ಪಣಜಿಯಲ್ಲಿ ಅರಳಿದ ಕಮಲ

ABOUT THE AUTHOR

...view details