ಬೆಂಗಳೂರು: ಅನಿವಾರ್ಯ ಕಾರಣಗಳಿಂದ ನಿಂತಿದ್ದ ಮನೆ ಹಂಚಿಕೆ ಕಾರ್ಯ ಮತ್ತೆ ಚಾಲನೆ ಪಡೆಯಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮನೆಗಳ ಹಂಚಿಕೆ ಕುರಿತಂತೆ ವಸತಿ ಸಚಿವ ವಿ.ಸೋಮಣ್ಣ ಮಾಹಿತಿ.. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಮುಖ್ಯಮಂತ್ರಿಗಳ ಬಹುಮಹಡಿ ಕಟ್ಟಡ ಯೋಜನೆ' ಬಗ್ಗೆ ಬೆಂಗಳೂರಿಗೆ ಸಂಬಂಧಿಸಿದಂತೆ ಬೆಂಗಳೂರು ಶಾಸಕರ ಜೊತೆ ಸಹ ಚರ್ಚಿಸಿದ್ದೇವೆ. ಈ ಯೋಜನೆ ಲಾಜಿಕಲ್ ಎಂಡ್ಗೆ ಕೊಂಡೊಯ್ಯುತ್ತೇವೆ. 46,496 ಮನೆಗಳು ನಿರ್ಮಾಣವಾಗಿವೆ.
10 ಸಾವಿರ ಮನೆಗಳನ್ನ ಹಂಚಬೇಕಿತ್ತು, ಕೆಲವು ಕಾರಣಗಳಿಂದ ಅದು ಆಗಿರಲಿಲ್ಲ. ಈಗ ಮನೆ ಹಂಚಿಕೆಗೆ ದರ ನಿಗದಿ ಮಾಡಿದ್ದೇವೆ. ಪರಿಶಿಷ್ಟರಿಗೆ 2 ಲಕ್ಷ ಮನೆಗಳ ನಿರ್ಮಾಣಕ್ಕೆ ಕೊಡ್ತೇವೆ. ಕೇಂದ್ರ 500 ಕೋಟಿ ನೀಡಿದೆ. ಒಂದು ಮನೆಗೆ 9 ಲಕ್ಷ ರೂ. ಬೀಳಲಿದೆ.
ಪರಿಶಿಷ್ಟ ಜಾತಿ,ಪಂಗಡಕ್ಕೆ 5 ಲಕ್ಷ ನಿಗದಿ ಮಾಡಿದ್ದೇವೆ. ಇತರರಿಗೆ 5.5 ಲಕ್ಷ ಹಣ ನಿಗದಿ ಮಾಡಿದ್ದೇವೆ. ಬಡವರಿಗಾಗಿ ಈ ಯೋಜನೆ ತಂದಿದ್ದೇವೆ. 46 ಸಾವಿರ ಮನೆಗಳನ್ನ ಏಳೆಂಟು ತಿಂಗಳಲ್ಲಿ ಹಂಚಿಕೆ ಮಾಡ್ತೇವೆ. ಅವಶ್ಯಕತೆ ಇರುವವರಿಗೆ ಮಾತ್ರ ವಿತರಿಸುತ್ತೇವೆ ಎಂದರು.
ಸ್ವಾತಂತ್ರ್ಯ ದಿನಾಚರಣೆಯಂದೇ ಹಂಚಬೇಕಿತ್ತು. ಎಂಟು ಕಡೆಗಳಲ್ಲಿ ಈ ವಸತಿ ಯೋಜನೆ ನಡೆದಿದೆ. ಸ್ಥಳೀಯ ಬಡವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೈಗೆಟಕುವ ದರದಲ್ಲಿ ಬಡವರಿಗೆ ಹಂಚಿಕೆ ಮಾಡ್ತೇವೆ. ಹಿಂದೆ ಇದ್ದ ಸರ್ಕಾರವೇನು ಮಾಡಿಲ್ಲ. ಈವರೆಗೂ 3,800 ಕೋಟಿ ಖರ್ಚು ಮಾಡಿ, 2.58 ಲಕ್ಷ ಮನೆ ಹಂಚಿಕೆ ಮಾಡಲಾಗಿದೆ.
ಕೊಳಚೆ ಅಭಿವೃದ್ಧಿ ಮಂಡಳಿಯಿಂದ 35ಸಾವಿರ ಮನೆ ಹಂಚಿಕೆ ಮಾಡ್ತೀವಿ. ಈ ಇಲಾಖೆ ಆದ್ಯತೆ ಮೇಲೆ ಕೆಲಸ ಮಾಡ್ತಿದ್ದೀವಿ. ಕೋವಿಡ್ ಬಂದು ಕೆಲಸಗಾರರಿಲ್ಲದ ಪರಿಸ್ಥಿತಿ ಬಂತು. ಸಿಎಂ ಕೂಡ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದರು.
ಇನ್ಮುಂದೆ ಪ್ರತಿ ತಿಂಗಳು ಮನೆ ಹಂಚಿಕೆ ಮಾಡುತ್ತೇವೆ. ನಾವು ಮನೆಗಳನ್ನ ನಿಜವಾಗಿ ಹಂಚಿಕೆ ಮಾಡಿದ್ದೇವೆ. ಮೈತ್ರಿ ಸರ್ಕಾರದ ಅವಧಿಯಲ್ಲಿ 2 ಸಾವಿರ ಕೋಟಿ ಹಣ ಹಿಂದೆ ಇಟ್ಟಿದ್ದರು. ಅವರು ಒಟ್ಟು ಕಟ್ಟಿದ ಮನೆ 6 ಲಕ್ಷ ಮಾತ್ರ. ಮೈತ್ರಿ ಸರ್ಕಾರ ಇಳಿಯುವಾಗ 16 ಲಕ್ಷ ಮನೆ ಘೋಷಿಸಿದ್ರು. ಸಿಕ್ಕ ಸಿಕ್ಕವರಿಗೆ ಮನೆ ಘೋಷಣೆ ಮಾಡಿ ಹೋದ್ರು. ಆದ್ರೆ, ನಾವು ಬಂದ ಮೇಲೆ ಎಲ್ಲವನ್ನ ಪರಿಶೀಲನೆ ಮಾಡಿ ಅವಶ್ಯಕತೆ ಇದ್ದವರಿಗೆ ಮಾತ್ರ ಕೊಡ್ತಿದ್ದೇವೆ ಎಂದರು.
ಉಪ ಚುನಾವಣೆಯನ್ನ ನಾವು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಹೋಗುತ್ತೇವೆ. ಅಮಿತ್ ಶಾ ಅದೇಶದಂತೆ ನಾವು ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಯಡಿಯೂರಪ್ಪ ನಮ್ಮ ನಾಯಕರು, ಬೊಮ್ಮಾಯಿ ನಮ್ಮ ಸಿಎಂ. ಹೀಗಾಗಿ, ಅಮಿತ್ ಶಾ ಅದೇಶದಂತೆ ನಡೆಯುತ್ತೇವೆ ಎಂದು ವಿವರಿಸಿದರು.