ಕರ್ನಾಟಕ

karnataka

ETV Bharat / state

ಸಚಿವ ಸಂಪುಟ ಸಭೆಯಲ್ಲಿ ಭಾವುಕರಾದ ಸಚಿವ ವಿ ಸೋಮಣ್ಣ: ಕಮಿಷನ್ ಆರೋಪದ ಬಗ್ಗೆ ಗಂಭೀರ ಚರ್ಚೆ - ಕಮಿಷನ್ ಆರೋಪಕ್ಕೆ ಕೌಂಟರ್

ನಮ್ಮ ಮಾತಿಗೆ ಯಾವುದೇ ಬೆಲೆ ಇಲ್ಲ. ಹೀಗಾದರೆ ಕೆಲಸ ಮಾಡುವುದು ಕಷ್ಟವಾಗುತ್ತದೆ. ಬೆಂಗಳೂರು‌ ನಗರದಲ್ಲಿ ನಾವು ಹೇಳಿದ ಕೆಲಸ ಆಗಲ್ಲ ಎನ್ನುವ ಮೂಲಕ ಸಚಿವ ಆರ್ ಅಶೋಕ್ ವಿರುದ್ಧ ಸಚಿವ ವಿ ಸೋಮಣ್ಣ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.

Minister V Somanna
ಸಚಿವ ವಿ ಸೋಮಣ್ಣ

By

Published : Aug 25, 2022, 5:29 PM IST

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ವಸತಿ ಸಚಿವ ವಿ ಸೋಮಣ್ಣ ತಮ್ಮ ಅಸಮಾಧಾನ ತೋಡಿಕೊಂಡು, ಭಾವುಕರಾದರು. ಸಚಿವ ಆರ್ ಅಶೋಕ್​​, ಸಂಪುಟ ಸಹದ್ಯೋಗಿಗಳ ವಿರುದ್ಧ ಸೋಮಣ್ಣ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ. ಬೆಂಗಳೂರು‌ ನಗರದಲ್ಲಿ ನಾವು ಹೇಳಿದ ಕೆಲಸ ಆಗಲ್ಲ. ಇಷ್ಟು ವರ್ಷ ರಾಜಕಾರಣದಲ್ಲಿದ್ರೂ, ನಮ್ಮ ಮಾತು ಇಲ್ಲಿ‌ ನಡೆಯಲ್ಲ ಎಂದು ನೋವು ತೋಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಭಾವುಕರಾದ ಸೋಮಣ್ಣ: ಬೆಂಗಳೂರು ವಿಚಾರದಲ್ಲಿ ಒಬ್ಬರದ್ದೇ ನಿರ್ಧಾರ ನಡೀತಿದೆ. ಅವರು ಹೇಳಿದಂತೆಯೇ ತೀರ್ಮಾನಗಳಾಗ್ತಿವೆ ಎಂದು ಅಶೋಕ್ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಮಾತಿಗೆ ಯಾವುದೇ ಬೆಲೆ ಇಲ್ಲ. ಹೀಗಾದರೆ ಕೆಲಸ ಮಾಡುವುದು ಕಷ್ಟವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದಲ್ಲಿ ನನಗೆ ಬೆಲೆ ಇಲ್ಲ ಎಂದರೆ ಬೇರೆ ಮಾರ್ಗವಿಲ್ಲ ಎಂದು ಸೂಚ್ಯವಾಗಿ ಅಳಲು ತೋಡಿಕೊಂಡರು. ಈ ವೇಳೆ ಕೆಲ ಸಚಿವರು ಸೋಮಣ್ಣ ಅವರಿಗೆ ಸಮಾಧಾನ ಮಾಡಿದರು. ಈ ಸಂದರ್ಭ ಸಚಿವ ವಿ ಸೋಮಣ್ಣ ಭಾವುಕರಾದರು ಎಂದು ಮೂಲಗಳು ತಿಳಿಸಿವೆ.

ಸಂಪುಟ ಸಭೆಯಲ್ಲಿ ಕಮಿಷನ್ ಚರ್ಚೆ: ಸಚಿವರ ವಿರುದ್ಧ ಟೆಂಡರ್ ಕಮಿಷನ್ ಆರೋಪ ವಿಚಾರವೂ ಇಂದು ನಡೆದ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚೆಯಾಯಿತು. ಸಚಿವ ಸಂಪುಟ ಸಭೆಯಲ್ಲಿ ಸಚಿವರ ಜತೆ ಸಿಎಂ ಬೊಮ್ಮಾಯಿ ಈ ವಿಷಯವಾಗಿ ಗಂಭೀರ ಚರ್ಚೆ ನಡೆಸಿದರು. ಕೆಂಪಣ್ಣ ಮಾಡಿರುವ ಆರೋಪಗಳ ಸಂಬಂಧ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಯಿತು.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಬದಲಾವಣೆ ವದಂತಿ : ಕಾಂಗ್ರೆಸ್ ವಿರುದ್ಧ ಸಚಿವರು ಗರಂ

ಲೋಕಾಯುಕ್ತಕ್ಕೆ ದೂರು ಕೊಡುವಂತೆ ಸವಾಲ್​​: ಯಾವ ರೀತಿ ಕಮಿಷನ್ ಆರೋಪಕ್ಕೆ ಕೌಂಟರ್ ಕೊಡಬೇಕು ಎಂಬ ಬಗ್ಗೆ ಸಿಎಂ ಚರ್ಚೆ ನಡೆಸಿದ್ದಾರೆ. ಆರೋಪ ಸಂಬಂಧ ಲೋಕಾಯುಕ್ತಕ್ಕೆ ದೂರು ಕೊಡುವಂತೆ ಸವಾಲು ಹಾಕಬೇಕು. ಇದು ಸಿದ್ದರಾಮಯ್ಯ ಪ್ರಚೋದಿತ ಆರೋಪ. ಸಿದ್ದರಾಮಯ್ಯ ವಿರುದ್ಧ ಮತ್ತು ಕೆಂಪಣ್ಣ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂಬ ಬಗ್ಗೆ ಸಚಿವರು ಕೌಂಟರ್ ಮುಂದುವರೆಸುವಂತೆ ಸೂಚನೆ ನೀಡಲಾಯಿತು.

ಸಿದ್ದರಾಮಯ್ಯ ಪ್ರಚೋದಿತ ಈ ಹೊಸ ಡ್ರಾಮಾಕ್ಕೆ ಇತರೇ ಕಾಂಗ್ರೆಸ್ ನಾಯಕರು ಸಾತ್ ಕೊಡ್ತಿಲ್ಲ. ಇದು ನಮಗೆ ದೊಡ್ಡ ಪ್ಲಸ್‌ ಪಾಯಿಂಟ್. ಇದನ್ನೂ ಸಚಿವರ ಕೌಂಟರ್ ಅಟ್ಯಾಕ್​ನಲ್ಲಿ ಪ್ರಸ್ತಾಪಿಸಲು ಸೂಚನೆ ನೀಡಲಾಗಿದೆ.

ABOUT THE AUTHOR

...view details