ಕರ್ನಾಟಕ

karnataka

ETV Bharat / state

ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ವಿಧಿವಶ - ಉಮೇಶ್ ಕತ್ತಿ ಹೃದಯಾಘಾತ

ರಾಜ್ಯದ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್​ ಕತ್ತಿ (61) ಹೃದಯಾಘಾತದಿಂದ ನಿನ್ನೆ ತಡರಾತ್ರಿ ವಿಧಿವಶರಾಗಿದ್ದಾರೆ.

ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ವಿಧಿವಶ
ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ವಿಧಿವಶ

By

Published : Sep 7, 2022, 6:06 AM IST

Updated : Sep 7, 2022, 10:43 AM IST

ಬೆಂಗಳೂರು:ಆಹಾರ ಮತ್ತು ನಾಗರಿಕ ಪೂರೈಕೆ ಹಾಗು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಭೋಜನ ಸೇವಿಸಿದ ಬಳಿಕ ಬಾತ್​ ರೂಂನಲ್ಲಿ ಸಚಿವರು ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಸಮೀಪದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ವಿಧಿವಶ

ಇದನ್ನೂ ಓದಿ:Umesh Katti| ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲಿ ಸಂಜೆ ಉಮೇಶ್‌ ಕತ್ತಿ ಅಂತ್ಯಸಂಸ್ಕಾರ

ಈ ಹಿಂದೆ ಎರಡು ಬಾರಿ ಕತ್ತಿ ಅವರಿಗೆ ಹೃದಯ ಸಮಸ್ಯೆ ಆಗಿತ್ತು. ಆದರೆ, ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ಸ್ಟೆಂಟ್ ಕೂಡ ಅಳವಡಿಸಲಾಗಿತ್ತು.

ಸಚಿವ ಕತ್ತಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಹದೇವಪುರದಲ್ಲಿ ಮಳೆ ಹಾನಿ ಪರಿಶೀಲನೆಯಲ್ಲಿದ್ದ ಸಿಎಂ ಬೊಮ್ಮಾಯಿ ಆಸ್ಪತ್ರೆಗೆ ದೌಡಾಯಿಸಿದ್ದರು. ಆರೋಗ್ಯ ಸಚಿವ ಸುಧಾಕರ್, ಕಂದಾಯ ಸಚಿವ ಆರ್‌.ಅಶೋಕ್ ಕೂಡಾ ಆಸ್ಪತ್ರೆಗೆ ಭೇಟಿ ನೀಡಿದ್ದರು.

Last Updated : Sep 7, 2022, 10:43 AM IST

ABOUT THE AUTHOR

...view details