ಕರ್ನಾಟಕ

karnataka

ETV Bharat / state

ಸತತ ಮೂರನೇ ಬಾರಿ ಸರ್ಕಾರದ ಜನೋತ್ಸವ ಮುಂದೂಡಿಕೆ: ಮುಂದಿನ ದಿನಾಂಕ ನಿಗದಿ

ನಾಳೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮಕ್ಕೆ ಅದ್ದೂರಿ ವೇದಿಕೆ ಸಿದ್ಧವಾಗಿತ್ತು. ಆದರೆ, ಮಂಗಳವಾರ ಸಚಿವ ಉಮೇಶ್ ಕತ್ತಿಯವರ ನಿಧನದಿಂದ ಮೂರನೇ ಬಾರಿ ಕಾರ್ಯಕ್ರಮ ಮುಂದೂಡಲಾಗಿದೆ.

minister-umesh-katti-death-janotsava-program-postponed
ಸತತ ಮೂರನೇ ಬಾರಿ ಸರ್ಕಾರದ ಜನೋತ್ಸವ ಮುಂದೂಡಿಕೆ: ಮುಂದಿನ ದಿನಾಂಕ ನಿಗದಿ

By

Published : Sep 7, 2022, 4:27 PM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) :ರಾಜ್ಯ ಬಿಜೆಪಿ ಸರ್ಕಾರದಜನೋತ್ಸವ ಕಾರ್ಯಕ್ರಮ ಮತ್ತೆ ಅಂತಿಮ ಕ್ಷಣದಲ್ಲಿ ಮತ್ತೆ ಮುಂದೂಡಲಾಗಿದೆ. ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11ಕ್ಕೆ ಜನೋತ್ಸವದ ದಿನಾಂಕ ನಿಗದಿ ಮಾಡಲಾಗಿದೆ.

ಬಿಜೆಪಿ ರಾಜ್ಯ ಸರ್ಕಾರ ಮೂರು ವರ್ಷ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಸರ್ಕಾರ ಸಾಧನೆಯನ್ನು ಜನರಿಗೆ ತಿಳಿಸುವ ಕಾರಣಕ್ಕೆ ಜನೋತ್ಸವ ಕಾರ್ಯಕ್ರಮ ಆಯೋಜನೆ ಮುಂದಾಗಿದೆ. ಆದರೆ, ಈ ಜನೋತ್ಸವ ಕಾರ್ಯಕ್ರಮಕ್ಕೆ ಘಳಿಗೆ ಕೂಡಿ ಬರುತ್ತಿಲ್ಲ.

ಸತತ ಮೂರನೇ ಬಾರಿ ಸರ್ಕಾರದ ಜನೋತ್ಸವ ಮುಂದೂಡಿಕೆ: ಮುಂದಿನ ದಿನಾಂಕ ನಿಗದಿ

ನಾಳೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮಕ್ಕೆ ಅದ್ಧೂರಿ ವೇದಿಕೆ ಸಿದ್ಧವಾಗಿತ್ತು. ಆದರೆ, ಮಂಗಳವಾರ ಸಚಿವ ಉಮೇಶ್ ಕತ್ತಿಯವರ ನಿಧನದಿಂದ ಮೂರನೇ ಬಾರಿ ಕಾರ್ಯಕ್ರಮ ಮುಂದೂಡಲಾಗಿದೆ. ಸೆಪ್ಟೆಂಬರ್ 11ಕ್ಕೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಿದ್ದು, ಸಿದ್ಧವಾಗಿರುವ ವೇದಿಕೆಯನ್ನು ಹಾಗೆಯೇ ಬಿಡಲಾಗಿದೆ.

ಊಟದ ವ್ಯವಸ್ಥೆ ಇನ್ನೂ ಪ್ರಾರಂಭವಾಗಿಲ್ಲದೆ ಇರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಪೊಲೀಸ್ ನಿಯೋಜನೆ ಸಹ ಆಗಿಲ್ಲ. ಹೀಗಾಗಿ ಕಾರ್ಯಕ್ರಮ ಮುಂದೂಡಿಕೆಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಈ ಹಿಂದೆ ಬಿಜೆಪಿ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಿಂದಾಗಿ ಕೊನೆ ಕ್ಷಣದಲ್ಲಿ ಮುಂದೂಡಲಾಗಿತ್ತು.

ಇದನ್ನೂ ಓದಿ:ಉಮೇಶ ಕತ್ತಿ ನಿಧನ ಹಿನ್ನೆಲೆ 3 ದಿನ ರಾಜ್ಯಾದ್ಯಂತ ಶೋಕಾಚರಣೆ: ಸಿಎಂ ಬೊಮ್ಮಾಯಿ

ABOUT THE AUTHOR

...view details