ಬೆಂಗಳೂರು: 7ನೇ ತರಗತಿವರೆಗೆ ಆನ್‌ಲೈನ್ ತರಗತಿಗಳನ್ನು ರದ್ದು ಮಾಡುವ ಸಂಬಂಧ ಸಚಿವ ಸಂಪುಟದಲ್ಲಿ ಕೆಲವು ಸಚಿವರು ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲಾಗಿದೆಯೇ ಹೊರತು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಅಂತ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
7ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ರದ್ದತಿ ಬಗ್ಗೆ ನಿರ್ಧಾರವಾಗಿಲ್ಲ: ಸುರೇಶ್ ಕುಮಾರ್ ಯೂಟರ್ನ್ - ಟ್ವೀಟ್
7ನೇ ತರಗತಿವರೆಗೆ ಆನ್‌ಲೈನ್ ತರಗತಿಗಳನ್ನು ರದ್ದು ಮಾಡುವ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಕೇವಲ ಚರ್ಚೆ ಆಗಿದೆ ಅಷ್ಟೇ ಎಂದು ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಸರ್ಕಾರ ತಮ್ಮ ಹಳೆಯ ನಿರ್ಧಾರದಿಂದ ಹಿಂದೆ ಸರಿದು ಯೂಟರ್ನ್ ಹೊಡೆದಿದೆ.
7ನೇ ತರಗತಿ ವರಗೆ ಆನ್‌ಲೈನ್ ಶಿಕ್ಷಣ; ಸಚಿವ ಸುರೇಶ್ ಕುಮಾರ್ ಯುಟರ್ನ್
ಇದಕ್ಕೂ ಮೊದಲು ಸಚಿವ ಸಂಪುಟದ ಸಭೆ ಬಳಿಕ ಮಾಹಿತಿ ನೀಡಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಎಲ್‌ಕೆಜಿ, ಯುಕೆಜಿ ಮತ್ತು 1 ರಿಂದ 5ನೇ ತರಗತಿಯ ಆನ್‌ಲೈನ್ ತರಗತಿಯ ರದ್ದು ಮಾಡಿರುವುದನ್ನು 7ನೇ ತರಗತಿವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದರು.
ಆದ್ರೆ ಇದಕ್ಕೆ ತದ್ವಿರುದ್ಧವಾಗಿ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿ ಇದೀಗ ಯೂಟರ್ನ್ ಹೊಡೆದಿದ್ದಾರೆ. ಹೀಗಾಗಿ ಸಚಿವರಲ್ಲಿಯೇ ಹೊಂದಾಣಿಕೆ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.
Last Updated : Jun 11, 2020, 6:15 PM IST