ಬೆಂಗಳೂರು:ಕಳೆದ ಹಲವು ದಿನಗಳ ಹಿಂದೆ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಒಂದು ಕೊರೊನಾ ವೈರಸ್ ಪ್ರಕರಣ ಇದೆ ಎಂದು ಹೇಳಲಾಗಿತ್ತು.
ಇಎಸ್ಐ ಆಸ್ಪತ್ರೆಯಲ್ಲಿ ಕೊರೊನಾ ಪ್ರಕರಣ ಇಲ್ಲ ಎಂದ ಸಚಿವ ಸುರೇಶ್ ಕುಮಾರ್ - ರಾಜಾಜಿನಗರದ ಇಎಸ್ಐ ಆಸ್ಪತ್ರೆ
"ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಒಂದು ಕೊರೊನಾ ವೈರಸ್ ಪ್ರಕರಣ ಇದೆ ಎಂಬುದು ಸತ್ಯವಲ್ಲ. ಈ ಆಸ್ಪತ್ರೆಯಲ್ಲಿ ಆ ರೀತಿ ಯಾವುದೇ ಪ್ರಕರಣ ಇಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ" ಎಂದು ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಕೇರಳ ಮೂಲದ ಫಾರ್ಮಸಿ ವಿದ್ಯಾರ್ಥಿನಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದು, ಆಕೆಯನ್ನು ಕೊರೊನಾ ತಪಾಸಣೆಗಾಗಿ ರಾಜಾಜಿನಗರ ಇಎಸ್ಐ ಅಸ್ಪತ್ರೆಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಅಂತ ಹೇಳಲಾಗಿತ್ತು.
ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿ, "ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಒಂದು ಕೊರೋನಾ ವೈರಸ್ ಪ್ರಕರಣ ಗೊತ್ತಾಗಿದೆ ಎಂಬುದು ಸತ್ಯವಲ್ಲ. ಈ ಆಸ್ಪತ್ರೆಯಲ್ಲಿ ಆ ರೀತಿಯ ಯಾವುದೇ ಪ್ರಕರಣವಾಗಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ" ಎಂದು ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಹೆಚ್ಚಿದ್ದ ಆತಂಕ ಕಡಿಮೆಯಾಗಿದೆ.