ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಲು ಸಚಿವ ಸುರೇಶ್‌ಕುಮಾರ್‌ ನೆರವು.. - ಕಾರ್ಮಿಕರಿಂದ ಡಬಲ್ ಟಿಕೆಟ್ ದರ ವಸೂಲಿ

ಸಚಿವ ಸುರೇಶ್​ ಕುಮಾರ್​ ಇಂದು ಯಶವಂತಪುರದ ಬಳಿ ಇರುವ ಎಪಿಎಂಸಿ ಕಾರ್ಮಿಕರು ಹಾಗೂ ಮಾಗಡಿ ರಸ್ತೆ ಬಳಿಯ ಕಟ್ಟಡ ಕಾರ್ಮಿಕರನ್ನು ಭೇಟಿ ಮಾಡಿ ಅವರನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು.

Minister suresh kumar
suresh kumar

By

Published : May 2, 2020, 3:10 PM IST

ಬೆಂಗಳೂರು :ಕೆಎಸ್ಆರ್​ಟಿಸಿ ಬಸ್​ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ "ಕಾರ್ಮಿಕ" ರಿಗೆ Single Fare ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು‌ ನಿಶಾನೆ ತೋರಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಟೀಟ್ವ್ ಮಾಡಿದ್ದಾರೆ.

ಸಾರಿಗೆ ಇಲಾಖೆಗೆ ಸಿಎಂ ಬಿಎಸ್​ವೈ ಸೂಚನೆ ನೀಡಿದ್ದು, ಒಂದು ಕಡೆಯ ದರವನ್ನ ಮಾತ್ರ ವಿಧಿಸುವಂತೆ ತಿಳಿಸಲಾಗಿದೆ.‌ ಮತ್ತೊಂದು ಕಡೆಯ ದರವನ್ನ ಕಾರ್ಮಿಕ ಇಲಾಖೆ ಭರಿಸಲಿದೆ. ಕಾರ್ಮಿಕರಿಂದ ಡಬಲ್ ದರ ವಸೂಲಿ ಮಾಡುತ್ತಿದ್ದ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ವಲಸೆ ಕಾರ್ಮಿಕರ ಸ್ಥಳಾಂತರ ಕುರಿತಂತೆ ಸಚಿವ ಸುರೇಶ್‌ಕುಮಾರ್ ಹೇಳಿಕೆ..​

ಇಂದು ಯಶವಂತಪುರದ ಬಳಿ ಎಪಿಎಂಸಿ ಕಾರ್ಮಿಕರು ಹಾಗೂ ಮಾಗಡಿ ರಸ್ತೆ ಬಳಿ ಕಟ್ಟಡ ಕಾರ್ಮಿಕರನ್ನು (ಎರಡೂ ಕಡೆ ಹೊರ ರಾಜ್ಯದ ಕಾರ್ಮಿಕರು) ಸಚಿವ ಸುರೇಶ್ ಕುಮಾರ್ ಭೇಟಿ ಮಾಡಿದರು. ಅವರ ಸಮಸ್ಯೆಗಳನ್ನು ಆಲಿಸಿ ವಲಸೆ ಕಾರ್ಮಿಕರನ್ನ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು‌‌‌. ಇವರಿಗೆ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಾದ ಕುಮಾರ ನಾಯ್ಕ್ ಸಾಥ್ ನೀಡಿದರು.

ABOUT THE AUTHOR

...view details