ಕರ್ನಾಟಕ

karnataka

ETV Bharat / state

ಮೊದಲ ಹಂತದಲ್ಲಿ ಪ್ರೌಢಶಾಲಾ ತರಗತಿ ಆರಂಭ; ಮುಂದಿನ ಸೋಮವಾರ ನಡೆಯಲಿದೆ ಸಭೆ - High school classroom

ಸದ್ಯಕ್ಕೆ 8,9,10ನೇ ತರಗತಿ ಆರಂಭಿಸಬೇಕೆಂಬ ಚರ್ಚೆ ನಡೆಯುತ್ತಿದೆ.‌ ಈ ಕುರಿತು ಮುಂದಿನ ಸೋಮವಾರ ಅಥವಾ ಮಂಗಳವಾರ ಸಭೆ ನಡೆಸಿ ತಿಳಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

suresh kumar
ಶಿಕ್ಷಣ ಸಚಿವ ಸುರೇಶ್ ಕುಮಾರ್

By

Published : Jul 22, 2021, 9:33 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕನ್ನು ಹೆಚ್ಚು ಹರಡದಂತೆ ಕಟ್ಟಿ ಹಾಕಲು ಲಾಕ್​ಡೌನ್​ ಅಸ್ತ್ರ ಪ್ರಯೋಗ ಮಾಡಲಾಗಿತ್ತು. ಇದೀಗ ಹಂತ ಹಂತವಾಗಿ ಅನ್​ಲಾಕ್​ ಮಾಡಲಾಗಿದ್ದು, ಇತರೆ ಚಟುವಟಿಕೆಗಳು ಚುರುಕುಗೊಂಡಿದೆ. ಆದರೆ ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಕಡಿವಾಣ ಹಾಕಲಾಗಿದೆ.

ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ 20 ಸದಸ್ಯರನ್ನೊಳಗೊಂಡ ಕಾರ್ಯಪಡೆಯನ್ನ ರಚನೆ ಮಾಡಲಾಗಿದೆ. ಭೌತಿಕ ತರಗತಿ ಹೇಗೆ ಆರಂಭ ಮಾಡಬೇಕು, ವಿದ್ಯಾಗಮ ನಡೆಸಬೇಕಾ?, ಬೇಡ್ವಾ? ವಿದ್ಯಾರ್ಥಿಗಳ ಸುರಕ್ಷತೆ ಹೇಗೆ? ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿ ಜುಲೈ ಒಂದರಿಂದ ದಾಖಲಾತಿ ಪ್ರಕ್ರಿಯೆ ಹಾಗೂ ಶೈಕ್ಷಣಿಕ ಚಟುವಟಿಕೆಯೂ ಶುರುವಾಗಿದೆ.

ಇತ್ತ ಐಸಿಎಂಆರ್ ಪ್ರಾಥಮಿಕ ತರಗತಿಗೂ ಅವಕಾಶ ಕೊಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ಸದ್ಯಕ್ಕೆ 8,9,10ನೇ ತರಗತಿಯನ್ನ ಆರಂಭಿಸಬೇಕೆಂಬ ಚರ್ಚೆ ನಡೆಯುತ್ತಿದೆ.‌ ಈ ಕುರಿತು ಮುಂದಿನ ಸೋಮವಾರ ಅಥವಾ ಮಂಗಳವಾರ ಸಭೆ ನಡೆಸಿ ತಿಳಿಸಲಾಗುವುದು. ಎಲ್ಲ ಆಯಾಮಗಳಲ್ಲಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನ ತೆಗೆದುಕೊಳ್ಳಲಾಗುವುದೆಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಮಕ್ಕಳ ಸುರಕ್ಷತೆಗಾಗಿ ಆದ್ಯತೆಯ ಮೇರೆಗೆ ಶಾಲಾ ಸಿಬ್ಬಂದಿಗೆ ಕೋವಿಡ್ ಲಸಿಕೆ: ಡಾ.ಕೆ.ಸುಧಾಕರ್

ABOUT THE AUTHOR

...view details