ಬೆಂಗಳೂರು:ಮಹಾಮಾರಿ ಕೊರೊನಾ ಹಾವಳಿಯಿಂದಾಗಿ ಶಾಲೆಗಳು ಇಲ್ಲಿಯವರೆಗೆ ಬಂದ್ ಆಗಿದ್ದವು. ಇದರಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿತ್ತು. ಇದೀಗ ಜುಲೈ 1 ರಿಂದ ಚಂದನ ವಾಹಿನಿ ಮೂಲಕ ಎಲ್ಲಾ ತರಗತಿಗಳಿಗೆ ಪಾಠ ಆರಂಭಿಸುತ್ತೇವೆ. ಕನ್ನಡದ ಜತೆ ಆಂಗ್ಲ ಮಾಧ್ಯಮದಲ್ಲೂ ಪಾಠಗಳಿರಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ದೀಕ್ಷಾ ಪೋರ್ಟಲ್ನಲ್ಲಿ ಆಡಿಯೋ, ವಿಡಿಯೋ ನೀಡುತ್ತೇವೆ. 22 ಸಾವಿರ ವಿಷಯಗಳು ಇದರಲ್ಲಿವೆ. ಗ್ರಾಮೀಣ ಭಾಗದ ಶಿಕ್ಷಕರಿಗೆ ವಿಸ್ತೃತ ವಿವರ ಕಳುಹಿಸಲಾಗಿದೆ. ಒಂದು ತಿಂಗಳ ಸೇತುಬಂಧ ತರಗತಿ ಮಾಡುತ್ತೇವೆ. ಕಳೆದ ವರ್ಷ ತರಗತಿಯಲ್ಲಿ ಭಾಗವಹಿಸಲು ಆಗದವರಿಗೆ ಇಲ್ಲಿ ಹಿಂದಿನ ವರ್ಷದ ತರಗತಿಯ ಸಣ್ಣ ವಿವರ ನೀಡುತ್ತೇವೆ ಎಂದು ಸಚಿವರು ಹೇಳಿದರು.
ಜುಲೈ 1 ರಿಂದ ಆನ್ಲೈನ್ ಕ್ಲಾಸ್; ಸಿಬಿಎಸ್ಸಿ ಮಾದರಿ ತರಗತಿ
ಸಿಬಿಎಸ್ಸಿ ಮಾದರಿಯಲ್ಲಿ ತರಗತಿ ಮಾಡಲು ತೀರ್ಮಾನಿಸಿದ್ದೇವೆ. ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಜುಲೈ 1 ರಿಂದ ಎಲ್ಲಾ ಶಾಲೆಯಲ್ಲಿ ಆನ್ಲೈನ್ ತರಗತಿ ಆರಂಭವಾಗಲಿದೆ. ಆನ್ಲೈನ್ ಸಾಧನ ಇಲ್ಲದವರು ಡೌನ್ಲೋಡ್ ಮಾಡಿಕೊಳ್ಳುವ ಅವಕಾಶಗಳನ್ನು ನೀಡುತ್ತೇವೆ. ಇನ್ನಷ್ಟು ಉನ್ನತೀಕರಣಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಶಿಕ್ಷಕರ ವರ್ಗಾವಣೆ:
ರಾಜ್ಯದ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಬಹಳ ನಿರೀಕ್ಷೆಯಲ್ಲಿತ್ತು. ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಕಾಯ್ದೆ ತಂದಿದ್ದೇವೆ. ಅಧಿಸೂಚನೆ ಮುಂದಿನ ಬುಧವಾರ ಪ್ರಕಟವಾಗಲಿದೆ. ಅಂದಿನಿಂದಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಆನ್ಲೈನ್ ತರಗತಿ, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕುರಿತು ಸಚಿವರ ವಿವರಣೆ ಶಿಕ್ಷಕ ಮಿತ್ರ ಆ್ಯಪ್ ಮೂಲಕ ಕೌನ್ಸೆಲಿಂಗ್ ಪ್ರಕ್ರಿಯೆ
75 ಸಾವಿರ ಅರ್ಜಿಗಳು ಬಂದಿದ್ದು, ಇವರ ಮೂಲಕ ಪ್ರಕ್ರಿಯೆ ಆರಂಭವಾಗಲಿದೆ. ಉಳಿದ ಅರ್ಹರದ್ದು ಎರಡನೇ ಹಂತದಲ್ಲಿ ಆರಂಭವಾಗಲಿದೆ. ಪಾರದರ್ಶಕ, ಶಿಕ್ಷಕ ಸ್ನೇಹಿ ಆಗಿ ವರ್ಗಾವಣೆ ಆಗಲಿದೆ. ಬಿಇಒ ಕಚೇರಿಗೆ ತೆರಳಬೇಕಿಲ್ಲ. ಶಿಕ್ಷಕ ಮಿತ್ರ ಆಪ್ ಮೂಲಕ ಮನೆಯಲ್ಲೇ ಕುಳಿತು ವರ್ಗಾವಣೆ ಕೌನ್ಸಿಲಿಂಗ್ನಲ್ಲಿ ಭಾಗವಹಿಸಬಹುದು ಎಂದರು.
ಶಾಲೆ ಆರಂಭದ ಚರ್ಚೆ ಇನ್ನಷ್ಟು ನಡೆಯುತ್ತಿದೆ. ಜೂ.25 ರಂದು ತಜ್ಞರ ಸಭೆ ನಡೆಸಿದ್ದೇನೆ. ಡಾ.ದೇವಿಶೆಟ್ಟಿ ಸಮಿತಿ ಮಧ್ಯಂತರ ವರದಿ ನೀಡಿದೆ. ಹಳ್ಳಿ ವಿದ್ಯಾರ್ಥಿಗಳು ಶಾಲೆಯಿಂದ ವಂಚಿತರಾಗಬಾರದು, ವಿದ್ಯಾಗಮ ಮರು ಆರಂಭಿಸಿ ಎಂದು ಹೇಳಿದ್ದಾರೆ. ಇಂದು ಆರೋಗ್ಯ ಇಲಾಖೆ ತಜ್ಞರ ಜತೆ ಸಭೆ ಮಾಡಿದ್ದೇವೆ. ಇನ್ನೆರಡು ದಿನದಲ್ಲಿ ಮತ್ತೆ ಸಭೆ ಮಾಡ್ತೇವೆ. ವಿಷಯ ಪರಿಣತರು, ತಾಂತ್ರಿಕ ಸಮಿತಿ ಸದಸ್ಯರು, ಮಕ್ಕಳ ತಜ್ಞರನ್ನು ಒಳಗೊಂಡ ಕಾರ್ಯಕಡೆ ರಚಿಸುತ್ತೇವೆ ಎಂದು ಸಚಿವರು ತಿಳಿಸಿದರು.