ಬೆಂಗಳೂರು:ಲಾಕ್ಡೌನ್ ಜಾರಿಯಲ್ಲಿದ್ದು, ಇನ್ನೂ ಶೈಕ್ಷಣಿಕ ವರ್ಷ ಆರಂಭವಾಗಿಲ್ಲ. ಇಂತಹ ಸಮಯದಲ್ಲಿ ಆನ್ಲೈನ್ ಕ್ಲಾಸ್ ಮಾಡುವುದಿಲ್ಲ ಎಂದು ಖಾಸಗಿ ಶಾಲೆಗಳು ಬೆದರಿಕೆ ಹಾಕುತ್ತಿವೆ. ಈ ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಕಂತೆ ಕಂತೆ ಹಣ ಎಲ್ಲಿಂದ ತರೋದು ಎಂದು ಪೋಷಕರು, ವಿದ್ಯಾರ್ಥಿಗಳು ತಮ್ಮ ಅಳಲನ್ನು ಸಾಕಷ್ಟು ಬಾರಿ ತೋಡಿಕೊಂಡಿದ್ದಾರೆ.
ಇದರಿಂದ ಕೊನೆಗೂ ಎಚ್ಚೆತ್ತ ಶಿಕ್ಷಣ ಸಚಿವರು ಖಾಸಗಿ ಶಾಲೆಗಳು ಪೋಷಕರಿಂದ ಹಣ ವಸೂಲಿ ಯಾಕೆ ಮಾಡುತ್ತಿವೆ? ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಮಾತನಾಡಿ ಫೈನಾನ್ಸ್ಗಳ ಜೊತೆ ಖಾಸಗಿ ಶಾಲೆಗಳು ಶಾಮೀಲಾಗಿವೆ. ತಾತ್ವಿಕವಾಗಿ ಈ ವಿಚಾರ ಯಾರು ಒಪ್ಪಿಕೊಳ್ಳಲಾಗುತ್ತಿಲ್ಲ. ಎಲ್ಲೂ ಮುಂಚೆ ಕೇಳಿರಲಿಲ್ಲ. ಇದು ಆಗಬಾರದಿತ್ತು ಎಂದರು.
ಪೋಷಕರಿಗೆ ಫೈನಾನ್ಸ್ ಸಾಲ ಕೊಡಿಸುತ್ತಿರುವುದು ಗೊತ್ತಾಗಿದ್ದು, ನಿನ್ನೆ ಮುಖ್ಯಮಂತ್ರಿಗಳಿಗೆ ಈ ವಿಚಾರ ತಿಳಿಸಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಬಹಳ ನಿಷ್ಠುರವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಕ್ರಿಯಿಸುವುದಕ್ಕಿಂತ ಸಂಬಂಧ ಪಟ್ಟವರಿಗೆ ನೋಟಿಸ್ ಕೊಡುತ್ತೇವೆ. ಕೆಲವೊಂದು ಖಾಸಗಿ ಶಾಲೆಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ನಿಟ್ಟಿನಲ್ಲಿ ಗಲಾಟೆ ಮಾಡದೇ ಪೋಷಕರು ಖಾಸಗಿ ಶಾಲೆಗಳು ಕುಳಿತು ಸಮಸ್ಯೆ ಬಗೆಹರಿಸಿಕೊಂಡರೆ ಒಳ್ಳೆಯದು ಎಂದರು.
ಖಾಸಗಿ ಶಾಲೆಗಳಿಂದ ಶುಲ್ಕ ಕಟ್ಟುವಂತೆ ಒತ್ತಾಯ: