ಬೆಂಗಳೂರು: ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಇತಿಹಾಸ ಕೈ ಬಿಡುವ ವಿಚಾರವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಇತಿಹಾಸವನ್ನು ಕೈ ಬಿಡುವಂತೆ ಅಪ್ಪಚ್ಚು ರಂಜನ್ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ ಎಂಬ ಮಾತು ಕಳೆದ ಎರಡು ಮೂರು ದಿನಗಳಿಂದ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಈ ಪತ್ರದ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು ಅಪ್ಪಚ್ಚು ರಂಜನ್ ಪತ್ರ ಇನ್ನು ನನಗೆ ತಲುಪಿಲ್ಲ. ಬೆಳಗ್ಗೆ ನಾನು ಪತ್ರಿಕೆಯಲ್ಲಿ ನೋಡಿದೆ. ಅದರ ಬಗ್ಗೆ ಚಿಂತನೆ ಇದೆ, ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೊಡಗು, ಮಡಿಕೇರಿ ಹಾಗು ದಕ್ಷಿಣ ಕನ್ನಡದ ಟಿಪ್ಪುವಿನಿಂದ ನೊಂದವರಿಂದ ಮೊದಲಿನಿಂದ ಈ ಕೂಗು ಕೇಳಿ ಬರುತ್ತಿದೆ. ಈ ವಿಚಾರವಾಗಿ ಪಠ್ಯಪುಸ್ತಕ ಸಮಿತಿ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೋಳ್ಳುತ್ತೇವೆ ಎಂದರು.