ಕರ್ನಾಟಕ

karnataka

ETV Bharat / state

ಡಿಜಿಟಲ್ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಕಳೆದ ಏಳು ವರ್ಷಗಳಿಂದ ಉದ್ಘಾಟನೆಗೆ ಸಿದ್ಧವಿದ್ದರೂ ಉದ್ಘಾಟನೆ ಭಾಗ್ಯ ಸಿಗದೆ ಭೂತ ಬಂಗಲೆಯಾಗಿದ್ದ ಡಿಜಿಟಲ್​​ ಗ್ರಂಥಾಲಯಕ್ಕೆ ಸಚಿವ ಸುರೇಶ್ ಕುಮಾರ್ ಅವರು ಚಾಲನೆ ನೀಡಿದರು. ಬಳಿಕ ದೇಶದಲ್ಲೇ ಅತ್ಯಂತ ಉತ್ತಮ ಡಿಜಿಟಲ್ ಗ್ರಂಥಾಲಯ ಇಲಾಖೆ ನಮ್ಮದು ಎಂದು ಸಂತಸ ವ್ಯಕ್ತಪಡಿಸಿದರು.

Minister Suresh Kumar inaugurated the digital library at bangalore
ಡಿಜಿಟಲ್ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

By

Published : Nov 19, 2020, 6:57 AM IST

Updated : Nov 19, 2020, 7:25 AM IST

ಬೆಂಗಳೂರು:ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡನೆಕ್ಕುಂದಿ ವಾರ್ಡ್​ನ ತೂಬರಹಳ್ಳಿಯಲ್ಲಿ ಪಂಡಿತ್​​ ದೀನ​ದಯಾಳ ಡಿಜಿಟಲ್ ಗ್ರಂಥಾಲಯದ ನೂತನ ಕಟ್ಟಡ ಮತ್ತು ಪುಸ್ತಕ ಪ್ರದರ್ಶನದ ಉದ್ಘಾಟನೆ ನೆರವೇರಿಸಲಾಯಿತು.

ಶಾಸಕ ಅರವಿಂದ ಲಿಂಬಾವಳಿ ಅವರೊಂದಿಗೆ ಡಿಜಿಟಲ್ ಲ್ರೈಬ್ರರಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಮತ್ತು‌ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮಹದೇವಪುರ ಕ್ಷೇತ್ರದ ಶಾಸಕರಾದ ಅರವಿಂದ ಲಿಂಬಾವಳಿ ಛಲ ಬಿಡದ ತ್ರಿವಿಕ್ರಮ. ಕಸದ ರಾಶಿಯಿದ್ದ ಈ ಸ್ಥಳವನ್ನು ಸ್ವಚ್ಛಗೊಳಿಸಿ ಜ್ಞಾನದ ದೇಗುಲವಾಗಿ ಮಾಡಿರುವ ಲಿಂಬಾವಳಿ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಜಿಟಲ್ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟನೆ

ಕೋವಿಡ್​ನಿಂದ ಹೆಚ್ಚು ಹೊಡೆತ ಬಿದ್ದದ್ದು ಶಿಕ್ಷಣ ಕ್ಷೇತ್ರಕ್ಕೆ. ಶಾಲೆ ಆರಂಭಿಸಬೇಕೆಂದು ಒಂದು ವರ್ಗ, ಬೇಡ ಅನ್ನೋದು ಮತ್ತೊಂದು ವರ್ಗ. ಇವರ ನಡುವೆ ಇದ್ದು ತೀರ್ಮಾನ ತೆಗೆದುಕೊಳ್ಳುವುದು ಒಂದು ರೀತಿಯಲ್ಲಿ ಹರಸಾಹಸ ಪಡುವಂತಾಗಿದೆ ಎಂದು ಸಚಿವರು ತಿಳಿಸಿದರು.

ಗ್ರಂಥಾಲಯ ಲಾಕ್​​ಡೌನ್ ಸಂದರ್ಭದಲ್ಲಿ ಮುಚ್ಚಿತ್ತು. ಗ್ರಂಥಾಲಯಕ್ಕೆ ಜನರು ಬರುವುದು ಬೇಡ, ಗ್ರಂಥಾಲಯವನ್ನೇ ಜನರ ಬಳಿ ಹೋಗವಂತೆ ಮಾಡೋಣ ಎಂದು ಡಿಜಿಟಲ್ ಲೈಬ್ರರಿ ಆರಂಭಿಸಿದ್ದೇವೆ. ಈವರೆಗೆ ನಾಲ್ಕು ಲಕ್ಷ ಪುಸ್ತಕಗಳು ಈ ಡಿಜಿಟಲ್ ವ್ಯವಸ್ಥೆಯಲ್ಲಿ ಲಭ್ಯವಿದೆ. ಆರು ಲಕ್ಷದ ನಲವತ್ತೈದು ಜನರು ಈಗಾಗಲೇ‌ ನೋಂದಣಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚು ಗ್ರಂಥಾಲಯಗಳಿರುವು ಸಂತಸ ತಂದಿದೆ. ಎಲ್ಲಾ ವರ್ಗದ ಜನರನ್ನು‌ ಮನಸ್ಸಿನಲ್ಲಿಟ್ಟುಕೊಂಡು ಎಲ್ಲಾ ಸೌಲಭ್ಯದೊಂದಿಗೆ ಸುಂದರ ಗ್ರಂಥಾಲಯ ನಿರ್ಮಾಣವಾಗಿದೆ. ಈ ಡಿಜಿಟಲ್ ಗ್ರಂಥಾಲಯ ಬಿಬಿಎಂಪಿ ಅಥವಾ ಸರ್ಕಾರ ಯಾರದ್ದೂ ಅಲ್ಲ. ಬದಲಾಗಿ ವಿದ್ಯಾರ್ಥಿಗಳು ಹಾಗೂ ನಾಗರೀಕರ ಗ್ರಂಥಾಲಯವಾಗಿದ್ದು, ಇಲ್ಲಿಂದ ಹೆಚ್ಚಿನ ಜ್ಞಾನ ಪಡೆದು ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ತೂಬರಹಳ್ಳಿ ಡಿಜಿಟಲ್ ಗ್ರಂಥಾಲಯಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಡಿಜಿಟಲ್ ಗ್ರಂಥಾಲಯ ಎಂದು ನಾಮಕರಣ ಮಾಡಲಾಗುವುದು. ಇದರ ಉಪಯೋಗವನ್ನು ಮಹದೇವಪುರ ಕ್ಷೇತ್ರದ ಜನರು‌ ಪಡೆದುಕೊಳ್ಳಬೇಕು. ಡಿಜಿಟಲ್ ಗ್ರಂಥಾಲಯವಾಗಿರುವುದರಿಂದ ಆನ್​ಲೈನ್ ಸೌಲಭ್ಯ ಪಡೆಯಬಹುದು ಎಂದು ಹೇಳಿದರು. ಬಿಬಿಎಂಪಿ ಕಟ್ಟಡ ಕಟ್ಟಿಕೊಟ್ಟಿದೆ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅನುದಾನ ಕೊಡಿಸಿದ್ದಾರೆ. ಎಲ್ಲಾ ಸೌಲಭ್ಯಗಳೊಂದಿಗೆ ಇಂದು ಕಟ್ಟಡ ಉದ್ಘಾಟನೆ ಮಾಡಲಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Last Updated : Nov 19, 2020, 7:25 AM IST

ABOUT THE AUTHOR

...view details