ಬೆಂಗಳೂರು:ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಕಾದಾಟದ ನಂತರ ಏಪ್ರಿಲ್ 3 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿದಿನ ಸಂಜೆ ಕೋವಿಡ್ 19 ರ ಮಾಹಿತಿಯನ್ನು ನೀಡುವ ಜವಾಬ್ದಾರಿಯನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ವಹಿಸಿದ್ದರು. ಪ್ರತಿನಿತ್ಯ ಮಾಧ್ಯಮಗಳಿಗೆ ಮಾಹಿತಿ ಕೊಡುವ ಬ್ರೀಫಿಂಗ್ ಕಾರ್ಯ ಮಾಡಲು ಸೂಚನೆ ನೀಡಿದ್ದರು. ಅದರಂತೆ ಈವರೆಗೆ ಕಾರ್ಯನಿರ್ವಹಿಸುತ್ತಾ ಬಂದಿದ್ದ ಸಚಿವರು ಇದೀಗ ಮುಕ್ತರಾಗಿದ್ದಾರೆ.
ಇನ್ಮುಂದೆ ಸಚಿವ ಸುರೇಶ್ ಕುಮಾರ್ ಕೊರೊನಾ ಜವಾಬ್ದಾರಿಯಿಂದ ಮುಕ್ತ: ಕಾರಣ? - ಶಿಕ್ಷಣ ಇಲಾಖೆ ಜೊತೆ ಕೊರೊನಾ ಬುಲೆಟಿನ್
ಶಿಕ್ಷಣ ಇಲಾಖೆ ಜೊತೆ ಕೊರೊನಾ ಬುಲೆಟಿನ್ ನಿಭಾಯಿಸೋದು ಕಷ್ಟ ಎಂದು ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ನಾನು ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತಾ ಕಾರ್ಯ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿರುವುದರಿಂದ ಮುಖ್ಯಮಂತ್ರಿಗಳ ಅನುಮತಿ ಪಡೆದು ಬ್ರೀಫಿಂಗ್ ಕಾರ್ಯದಿಂದ ಮುಕ್ತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಜೊತೆ ಕೊರೊನಾ ಬುಲೆಟಿನ್ ನಿಭಾಯಿಸೋದು ಕಷ್ಟವೆಂದು ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ನಾನು ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತಾ ಕಾರ್ಯ ನಿಮಿತ್ತ ರಾಜ್ಯದ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿರುವುದರಿಂದ ಮುಖ್ಯಮಂತ್ರಿಗಳ ಅನುಮತಿ ಪಡೆದು ಬ್ರೀಫಿಂಗ್ ಕಾರ್ಯದಿಂದ ಮುಕ್ತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರತಿದಿನ ವರದಿಗಾಗಿ ನಡೆಸುತ್ತಿದ್ದ ಸಿದ್ಧತೆ, ಆರೋಗ್ಯ ಇಲಾಖೆಯ ಕರ್ತವ್ಯನಿಷ್ಠ ಅಧಿಕಾರಿಗಳ ಒಡನಾಟ, ಅನೇಕ ಸಂಗತಿಗಳನ್ನು ತಿಳಿದುಕೊಳ್ಳುವ ಅವಕಾಶ, ಬಹಳ ಅನುಭವಿ ಪತ್ರಕರ್ತರ ಪ್ರಶ್ನೆಗಳು ಇವೆಲ್ಲಾ ನನಗೆ ಹೊಸ ಅನುಭವ ನೀಡಿವೆ. ನಾವೆಲ್ಲಾ ಒಂದೇ ತಂಡ. ಆದರೆ ವಿವಿಧ ಕಾರ್ಯ ಮಾಡುತ್ತಿರುವ ಸದಸ್ಯರು ಎಂಬ ಭಾವನೆ ತಂದುಕೊಟ್ಟಿದೆ ಅಂತ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.
ಒಟ್ಟಾರೆ, ಎಸ್ ಎಸ್ ಎಲ್ ಸಿ ಪರೀಕ್ಷೆಯು ಜೂನ್ನಲ್ಲಿ ನಡೆಯಲಿದ್ದು, ಇದರ ಜೊತೆ ಕೊರೊನಾ ಬುಲೆಟಿನ್ ಜವಾಬ್ದಾರಿ ವಹಿಸಿಕೊಳ್ಳುವುದು ಕಷ್ಟ. ಹೀಗಾಗಿ ಕೊರೊನಾ ಹೆಲ್ತ್ ಬುಲೆಟಿನ್ ರಿಲೀಸ್ ಜವಾಬ್ದಾರಿ ತ್ಯಜಿಸಿದ್ದು, ನಾಳೆಯಿಂದ ಬುಲೆಟಿನ್ ಜವಾಬ್ದಾರಿ ಆರೋಗ್ಯ ಇಲಾಖೆಯ ಹೆಗಲೇರಿದೆ.