ಕರ್ನಾಟಕ

karnataka

ETV Bharat / state

ಈ ವರ್ಷವನ್ನು 'ಕಲಿಕಾ ‌ರಹಿತ' ವರ್ಷ ಎನ್ನಲು‌‌ ಸಾಧ್ಯವಿಲ್ಲ: ಸಚಿವ ಸುರೇಶ್ ಕುಮಾರ್ - Minister Suresh Kumar clarifies about learning year

ಯಾವ ವಿದ್ಯಾರ್ಥಿಗೂ ಕಲಿಕೆಯ ಅವಕಾಶ ವಂಚನೆಯಾಗದ ಕಾರಣ ಈ ವರ್ಷವನ್ನು ಕಲಿಕಾ‌ ರಹಿತ ವರ್ಷ ಎನ್ನಲು‌‌ ಸಾಧ್ಯವಿಲ್ಲ ಎಂದು ಶಿಕ್ಷಣ‌ ಸಚಿವ‌‌ ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

minister-suresh-kumar-clarifies-about-zero-year
ಸಚಿವ ಸುರೇಶ್ ಕುಮಾರ್

By

Published : Nov 23, 2020, 9:27 PM IST

ಬೆಂಗಳೂರು: ಕಲಿಕಾ‌‌ ರಹಿತ ವರ್ಷದ ಪ್ರಸ್ತಾವನೆ‌ ಸರ್ಕಾರದ‌ ಮುಂದೆ‌ ಸದ್ಯಕ್ಕಿಲ್ಲ ಎಂದು ಶಿಕ್ಷಣ‌ ಸಚಿವ‌‌ ಸುರೇಶ್ ‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಯಾವುದೇ ತರಗತಿಯ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಶಿಕ್ಷಣ‌ ಇಲಾಖೆಯು‌ ಪರ್ಯಾಯ ಬೋಧನಾ‌ ಕ್ರಮಗಳನ್ನು ಚಾಲನೆಯಲ್ಲಿಡಲಾಗಿದೆ. ಇಂದಿನಿಂದ‌ ಚಂದನ ವಾಹಿನಿಯಲ್ಲಿ ಪ್ರಾರಂಭವಾಗಿರುವ ಐದರಿಂದ‌ ಏಳನೇ‌ ತರಗತಿಯ ಬೋಧನಾ ತರಗತಿಗಳು ಈ ಪ್ರಯತ್ನದ ಭಾಗವಾಗಿವೆ‌ ಎಂದು ತಿಳಿಸಿದ್ದಾರೆ.

ಎಲ್ಲಾ‌ ತರಗತಿಗಳ ಮಕ್ಕಳಿಗೆ ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. ಶಾಲೆಗಳಲ್ಲಿ ಶಿಕ್ಷಕರು ಹಾಜರಾಗುವ ಮೂಲಕ ವಿದ್ಯಾರ್ಥಿಗಳ‌‌ ಕಲಿಕೆಯನ್ನು ಪರಾಮರ್ಶಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಖಚಿತ ಜವಾಬ್ದಾರಿಯನ್ನು ನಿರ್ವಹಿಸಿ, ಎಲ್ಲಾ ತರಗತಿಗಳ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಲಿದ್ದಾರೆ.

ಖಾಸಗಿ ಶಾಲೆಗಳು ಅನುಸರಿಸುತ್ತಿರುವ ಪರ್ಯಾಯ ಕ್ರಮಗಳೂ ಸಹ ವಿದ್ಯಾರ್ಥಿಗಳ‌ ಕಲಿಕೆಯನ್ನು ಪ್ರೇರೇಪಿಸುವಂತಹವುಗಳೇ ಆಗಿವೆ. ಯಾವ ವಿದ್ಯಾರ್ಥಿಗೂ ಕಲಿಕೆಯ ಅವಕಾಶ ವಂಚನೆಯಾಗದ ಕಾರಣ ಈ ವರ್ಷವನ್ನು ಕಲಿಕಾ ‌ರಹಿತ ವರ್ಷ ಎನ್ನಲು‌‌ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಶಾಲಾ ವಾತಾವರಣದಲ್ಲಿ‌ ಶೈಕ್ಷಣಿಕ‌ ಚಟುವಟಿಕೆಗಳನ್ನು‌ ನಡೆಸಲು ಸರ್ಕಾರ‌ ಮುಕ್ತ ಮನಸ್ಸು ಹೊಂದಿದೆ‌ ಎಂದು ತಿಳಿಸಿದರು.

ABOUT THE AUTHOR

...view details