ಬೆಂಗಳೂರು: ಪ್ರತಿ ವರ್ಷ (ಫೆಬ್ರವರಿ 21)ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರು, ನಾನು ಮನೆಯಲ್ಲಿ ಕನ್ನಡ ಮಾತನಾಡುವ ಹೆಮ್ಮೆಯ ಕನ್ನಡಿಗ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ವಿಸ್ತೃತವಾಗಿ ಪೋಸ್ಟ್ ಮಾಡಿರುವ ಸಚಿವರು, ನಾನು ಮನೆಯಲ್ಲಿ ಕನ್ನಡ ಮಾತನಾಡುವ ಹೆಮ್ಮೆಯ ಕನ್ನಡಿಗ. ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತೀರಿ?, ನಿಮ್ಮ ಮಾತೃಭಾಷೆಯಲ್ಲಿ ಕೆಳಗೆ ಕಾಮೆಂಟ್ ಮಾಡಿ ಎಂದು ಕೇಳಿದ್ದಾರೆ.