ಬೆಂಗಳೂರು : ಈಗಾಗಲೇ ನಗರಕ್ಕೆ ಕೋವಿಡ್ ವ್ಯಾಕ್ಸಿನ್ ಬಂದಿರುವ ಹಿನ್ನೆಲೆಯಲ್ಲಿ ಆನಂದ್ ರಾವ್ ಸರ್ಕಲ್ ಬಳಿಯ ಆರೋಗ್ಯ ಇಲಾಖೆಯಲ್ಲಿರೋ ಉಗ್ರಾಣಕ್ಕೆ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಕೆ. ಸುಧಾಕರ್ ಭೇಟಿ ನೀಡಿದರು.
ಬಳಿಕ ಮಾತನಾಡಿದ ಅವರು, ಇವತ್ತು ಆರು ಲಕ್ಷದ 48 ಸಾವಿರ ಡೋಸ್ಗಳು ಬಂದಿವೆ. ಉತ್ತಮ ರೀತಿಯಲ್ಲಿ ಪ್ಯಾಕೇಜ್ ಮಾಡಿ, ಬೇಕಾದ ತಾಪಮಾನದಲ್ಲಿ ತಂದು ನಮ್ಮ ಸ್ಟೋರೇಜ್ ನಲ್ಲಿಟ್ಟಿದ್ದೇವೆ. ನಾಳೆ ಬೆಳಗಾವಿಗೆ 1 ಲಕ್ಷ 90 ಸಾವಿರ ಕಳುಹಿಸಲಾಗುತ್ತೆ ಎಂದು ತಿಳಿಸಿದರು.
ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಬಹಳಷ್ಟು ಮಂದಿ ನನಗೆ ಫೋನ್ ಮಾಡಿ ನಾವು ಯಾವಾಗ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಅಂತಾ ಕೇಳ್ತಿದ್ದಾರೆ. ಇದೀಗ ಎರಡು ಸಂಸ್ಥೆಗಳಿಂದ ಲಸಿಕೆ ಬಂದಿದ್ದು, ಮುಂದೆ ನಾಲ್ಕು ಸಂಸ್ಥೆಗಳಿಂದ ಲಸಿಕೆ ಬರಲಿವೆ.
ಇಡೀ ವಿಶ್ವದಲ್ಲಿ ಯಾರು ಕೂಡ ಇಷ್ಟು ಕಡಿಮೆ ದರದಲ್ಲಿ ಲಸಿಕೆ ಕೊಟ್ಟಿಲ್ಲ. ನಮ್ಮ ಪ್ರಧಾನಿ ವಿಜ್ಞಾನಿಗಳಿಗೆ ಕೊಟ್ಟಂತಹ ಸಹಕಾರದಿಂದಾಗಿ ಕೇವಲ 210 ರೂಪಾಯಿಯಲ್ಲಿ ಲಸಿಕೆ ಸಿಕ್ಕಿದೆ ಎಂದರು. ನಮ್ಮ ಹೆಲ್ತ್ ವಾರಿಯರ್ಸ್ ಇದನ್ನು ತೆಗೆದುಕೊಳ್ಳಬೇಕು. ಇದು ತುಂಬಾ ಸುರಕ್ಷಿತವಾಗಿದೆ. ನೀವು ಎಲ್ಲರೂ ಇದೇ ಜನವರಿ 16ರಂದು ಲಸಿಕೆ ಪಡೆಯಬೇಕು. ಲಸಿಕೆ ಕೊಡಲು ಸಿಬ್ಬಂದಿ ಇದ್ದು, ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ಲಸಿಕೆಗೆ ಝೀರೋ ಟ್ರಾಫಿಕ್ ಮಾಡುವ ಅವಶ್ಯಕತೆ ಇಲ್ಲ :ಲಸಿಕೆಗಳನ್ನ ಸುರಕ್ಷಿತವಾಗಿ ತಂದು ನಮ್ಮ ಸ್ಟೋರೇಜ್ಗಳಲ್ಲಿ ಶೇಖರಿಸಬೇಕು. ನಾವು ವೈಜ್ಞಾನಿಕವಾಗಿ ವ್ಯಾಕ್ಸಿನ್ ತರಿಸಿದ್ದೇವೆ. ನಮಗೆ ಅರಿವಿದೆ, ಅದೇ ರೀತಿ ವ್ಯಾಕ್ಸಿನ್ ತರಿಸ್ತಿದ್ದೇವೆ. ಎಲ್ಲ ಜಿಲ್ಲೆಗಳಿಗೂ ಹಂತ ಹಂತವಾಗಿ ಹಂಚುತ್ತೇವೆ. ಲಸಿಕೆಗೆ ಝೀರೋ ಟ್ರಾಫಿಕ್ ಮಾಡುವ ಅವಶ್ಯಕತೆ ಇಲ್ಲ ಎಂದರು.
ಓದಿ:ನಾನು ಕುರುಬರ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ, ಅದು ಯಶಸ್ವಿ ಆಗಲ್ಲ : ಸಿದ್ದರಾಮಯ್ಯ
ಲಸಿಕೆಯಿಂದ ಅಡ್ಡಪರಿಣಾಮಗಳಾಗಲು ಯಾವುದೇ ಅವಕಾಶವಿಲ್ಲ. ವ್ಯಾಕ್ಸಿನ್ ಪಡೆದವರ ಮೇಲೆ ತೀವ್ರ ನಿಗಾ ಇಡುತ್ತೇವೆ. ಬಾಕ್ಸ್ ಬಿದ್ದು ಹೋಗಿದೆ. ಆದ್ರೆ, ಯಾವುದೇ ನಷ್ಟವಿಲ್ಲ. ಮೂರು ಲೇಯರ್ನಲ್ಲಿ ಪ್ಯಾಕ್ ಮಾಡಿದ್ದಾರೆ. ಇಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ನಮ್ಮ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ತಿಳಿಸಿದರು.