ಕರ್ನಾಟಕ

karnataka

ETV Bharat / state

ಸಿ.ವಿ.ರಾಮನ್ ನಗರದಲ್ಲಿರುವ ಡಿಆರ್​ಡಿಒ ಸಂಸ್ಥೆಗೆ ಸಚಿವ ಸುಧಾಕರ್​ ಭೇಟಿ, ಸಮಾಲೋಚನೆ - minister sudhakar visits DRDO office

ಡಿಆರ್​ಡಿಒ ಸಂಸ್ಥೆ ಕೋವಿಡ್ ಚಿಕಿತ್ಸೆಗೆ ಅಭಿವೃದ್ಧಿಪಡಿಸಿರುವ 2-ಡಿಜಿ ಔಷಧ, ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಮೇಕ್ ಶಿಫ್ಟ್ ಹಾಸ್ಪಿಟಲ್ ಮತ್ತು ಆಕ್ಸಿಜನರೇಷನ್ ಪ್ಲಾಂಟ್ ಅಳವಡಿಕೆಗೆ ಸಂಬಂಧಿಸಿದಂತೆ ಸಚಿವ ಡಾ. ಕೆ.ಸುಧಾಕರ್ ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಂಡ್ರು.

minister sudhakar visits DRDO office
ಡಿಆರ್​ಡಿಒ ಸಂಸ್ಥೆಗೆ ಸಚಿವ ಡಾ. ಸುಧಾಕರ್​ ಭೇಟಿ, ಸಮಾಲೋಚನೆ

By

Published : May 14, 2021, 12:47 PM IST

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಬೆಂಗಳೂರಿನ ಸಿ.ವಿ.ರಾಮನ್ ನಗರದಲ್ಲಿರುವ ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸಿಎಸ್ ನಿರ್ದೇಶಕರ ಕಾರ್ಯಾಲಯಕ್ಕೆ ಭೇಟಿ ನೀಡಿದರು.

ಡಿಆರ್​ಡಿಒ ಸಂಸ್ಥೆಗೆ ಸಚಿವ ಡಾ. ಸುಧಾಕರ್​ ಭೇಟಿ, ಸಮಾಲೋಚನೆ

ಸಂಸ್ಥೆ ಕೋವಿಡ್ ಚಿಕಿತ್ಸೆಗೆ ಅಭಿವೃದ್ಧಿಪಡಿಸಿರುವ 2-ಡಿಜಿ ಔಷಧ, ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಮೇಕ್ ಶಿಫ್ಟ್ ಹಾಸ್ಪಿಟಲ್ ಮತ್ತು ಆಕ್ಸಿಜನರೇಷನ್ ಪ್ಲಾಂಟ್ ಅಳವಡಿಕೆಗೆ ಸಂಬಂಧಿಸಿದಂತೆ ನಿರ್ದೇಶಕಿ ಮಂಜುಳಾ, ಡಿಇಬಿಇಎಲ್ ನಿರ್ದೇಶಕ ಡಾ. ಯು.ಕೆ.ಸಿಂಗ್, ಎಲ್​ಆರ್​ಡಿಇ ನಿರ್ದೇಶಕ ಪಿ.ರಾಧಾಕೃಷ್ಣ, ಎಸ್ಟೇಟ್ ಮ್ಯಾನೇಜರ್ ಜೆ.ಡಿ.ಜಿ.ಪ್ರಸಾದ್ ರಾಜು ಜತೆ ಸಮಾಲೋಚನೆ ನಡೆಸಿದರು.

ಇದನ್ನೂ ಓದಿ:ಚಿಕ್ಕಮಗಳೂರು: ಸಾವಿನ ಮನೆಗೆ ತೆರಳಿದ್ದ 22 ಜನರಿಗೆ ಕೊರೊನಾ

ಹೊಸದಿಲ್ಲಿಯ ಕೇಂದ್ರ ಕಚೇರಿಯಿಂದ ಐಎನ್​ಎಂಎಎಸ್​ನ ಡಾ. ಅನಂತ ಭಟ್, ಸಿಸಿ ಅಂಡ್ ಆರ್ ಅಂಡ್ ಡಿ ವಿಭಾಗದ ಡಾ. ರಾಧಾಕೃಷ್ಣ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಾದ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ, ನಿರ್ದೇಶಕ ಓಂಪ್ರಕಾಶ್ ಪಾಟೀಲ್, ಡ್ರಗ್ಸ್ ಕಂಟ್ರೋಲ್ ಇಲಾಖೆಯ ಅಮರೇಶ್ ತುಂಬಗಿ, ನಗರ ಜಿಲ್ಲೆಯ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಪಾಲ್ಗೊಂಡಿದ್ದರು.

ABOUT THE AUTHOR

...view details