ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಶೇ.78 ರಷ್ಟು ಕೊರೊನಾ ಬೆಡ್ ಖಾಲಿ ಇವೆ... ಆತಂಕ ಬೇಡವೆಂದು ಸಚಿವ ಡಾ.ಸುಧಾಕರ್ ಟ್ವೀಟ್ - ಆಸ್ಪತ್ರೆಗಳ ಬೆಡ್​ ಸುದ್ದಿ

ನಗರದಾದ್ಯಂತ ಇರುವ ಒಟ್ಟು 72 ಖಾಸಗಿ ಆಸ್ಪತ್ರೆಗಳಲ್ಲಿ 3331 ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಶನಿವಾರ ಸಂಜೆ ವೇಳೆಗೆ 733 ಹಾಸಿಗೆಗಳು ಭರ್ತಿಯಾಗಿದ್ದು, ಇನ್ನೂ 2598 ಹಾಸಿಗೆಗಳು ಖಾಲಿ ಇವೆ. ಶೇ.78 ರಷ್ಟು ಹಾಸಿಗೆಗಳು ಖಾಲಿ ಇವೆ ಎನ್ನುವ ಮಾಹಿತಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಸಚಿವ ಡಾ.ಸುಧಾಕರ್ ಟ್ವೀಟ್.
ಸಚಿವ ಡಾ.ಸುಧಾಕರ್ ಟ್ವೀಟ್.

By

Published : Jul 5, 2020, 1:03 PM IST

ಬೆಂಗಳೂರು: ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಇಲ್ಲವೆಂದು ಅಂಕಿ ಅಂಶಗಳ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ.

ನಗರದಾದ್ಯಂತ ಇರುವ ಒಟ್ಟು 72 ಖಾಸಗಿ ಆಸ್ಪತ್ರೆಗಳಲ್ಲಿ 3331 ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಶನಿವಾರ ಸಂಜೆ ವೇಳೆಗೆ 733 ಹಾಸಿಗೆಗಳು ಭರ್ತಿಯಾಗಿದ್ದು, ಇನ್ನೂ 2598 ಹಾಸಿಗೆಗಳು ಅಂದ್ರೆ ಶೇ.78 ರಷ್ಟು ಹಾಸಿಗೆಗಳು ಖಾಲಿ ಇವೆ ಎನ್ನುವ ಮಾಹಿತಿಯನ್ನು ಸಚಿವ ಸುಧಾಕರ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಯಾವ ಯಾವ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ, ಆ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ, ಅದರಲ್ಲಿ ಕೊರೊನಾ ರೋಗಿಗಳಿಗೆ ಮೀಸಲಿರುವ ಹಾಸಿಗೆ ಎಷ್ಟು, ಎಷ್ಟು ಕೊರೊನಾ ರೋಗಿಗಳು ದಾಖಲಾಗಿದ್ದಾರೆ ಎನ್ನುವ ವಿಸ್ತೃತ ವಿವರನ್ನು ಪ್ರಕಟಿಸಿದ್ದಾರೆ. ಈ ಮೂಲಕ ಮಹಾನಗರದಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಸಿಗುವುದಿಲ್ಲ ಎನ್ನುವ ಆತಂಕ ಬೇಡ ಎನ್ನುವ ಸಂದೇಶವನ್ನು ಸಚಿವರು ನೀಡಿದ್ದಾರೆ.

ABOUT THE AUTHOR

...view details