ಬೆಂಗಳೂರು:ರಾಜ್ಯಕ್ಕೆ ಮತ್ತಷ್ಟು ಕೋವ್ಯಾಕ್ಸಿನ್ ಪೂರೈಕೆ ಕೇಂದ್ರ ಸರ್ಕಾರದಿಂದ ಆಗಿದ್ದು, ಈ ಬಗ್ಗೆ ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇಂದು 1,64,770 ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದ್ದು, ಒಟ್ಟು 17.8 ಲಕ್ಷ ಕೋವ್ಯಾಕ್ಸಿನ್ ಲಸಿಕೆ ರಾಜ್ಯಕ್ಕೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಈವರೆಗೆ ಕೇಂದ್ರ ಸರ್ಕಾರ ಪೂರೈಸಿದ 15,86,000 ಡೋಸ್ ವ್ಯಾಕ್ಸಿನ್ ಪಡೆದಿದ್ದೇವೆ. 1,94,000 ಕೋವ್ಯಾಕ್ಸಿನ್ ಡೋಸ್ ರಾಜ್ಯ ಸರ್ಕಾರ ಖರೀದಿಸಿದೆ.ಲಭ್ಯವಿರುವ ಸ್ಟಾಕ್ ನಲ್ಲಿ 2ನೇ ಡೋಸ್ ನೀಡಲು ಆದ್ಯತೆ ನೀಡಲಾಗುತ್ತದೆ ಎಂದು ಟ್ವೀಟ್ ಮೂಲಕ ಆರೋಗ್ಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯ ಲಸಿಕಾ ಅಭಿಯಾನದ ಅಂಕಿ ಸಂಖ್ಯೆ:ಸಚಿವ ಸುಧಾಕರ್ ಹೇಳಿಕೆ ಬೆನ್ನಲ್ಲೆ ಕರ್ನಾಟಕ ರಾಜ್ಯದ ವ್ಯಾಕ್ಸಿನೆಷನ್ ಡ್ರೈವ್ ಇತ್ತೀಚಿನ ಮಾಹಿತಿ ಗಮನಿಸಿದರೆ ರಾಜ್ಯದಲ್ಲಿ ಇಲ್ಲಿಯವರೆಗೆ 7,19,003 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 2ನೆಯ ಡೋಸ್ 4,71,574 ಜನ ಆರೋಗ್ಯ ಸಿಬ್ಬಂದಿ ತೆಗೆದುಕೊಂಡಿದ್ದಾರೆ.