ಕರ್ನಾಟಕ

karnataka

ETV Bharat / state

ಇನ್ನೂ ಟೆಂಡರ್ ಆಗಿಲ್ಲ, ಭ್ರಷ್ಟಾಚಾರ ಹೇಗೆ ಸಾಧ್ಯ? : ಸಚಿವ ಸುಧಾಕರ್

ಆರೋಗ್ಯ ಇಲಾಖೆಯ ಡ್ರಗ್ಸ್ ಮತ್ತು ಲಾಜಿಸ್ಟಿಕ್ಸ್ ಕುರಿತ ಟೆಂಡರ್​ನಲ್ಲಿ ಅಕ್ರಮ ನಡೆದಿದೆ ಎಂದು ಎಎಪಿ ಪಕ್ಷದ ನಗರ ಅಧ್ಯಕ್ಷ ಮೋಹನ್ ದಾಸರಿ ಇಂದು ಆರೋಪ ಮಾಡಿದ್ದರು. ಇದಕ್ಕೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದರು.

minister-sudhakar-talk
ಸಚಿವ ಸುಧಾಕರ್

By

Published : Mar 4, 2021, 3:17 PM IST

ಬೆಂಗಳೂರು: ಆರೋಗ್ಯ ಇಲಾಖೆ ಟೆಂಡರ್​ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆಮ್ ಆದ್ಮಿ ಪಕ್ಷದ ಆರೋಪಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ಸಚಿವ ಸುಧಾಕರ್

ಓದಿ: ಸದನದಲ್ಲಿ ಶರ್ಟ್ ಬಿಚ್ಚಿ ಅಶಿಸ್ತು: ಒಂದು ವಾರಗಳ ಕಾಲ ಶಾಸಕ ಸಂಗಮೇಶ್ ಅಮಾನತು

ವಿಧಾನ ಸೌಧದಲ್ಲಿ ಮಾತನಾಡಿದ ಅವರು, ನಾನು ನೈತಿಕವಾಗಿ ಸರಿ ಇದ್ದೇನೆ, ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಪ್ರಕರಣ ಹೈಕೋರ್ಟ್​ನಲ್ಲಿದೆ. ಇನ್ನೂ ಟೆಂಡರ್ ಆಗಿಲ್ಲ, ಅದರಲ್ಲಿ ಭ್ರಷ್ಟಾಚಾರ ಹೇಗೆ ಬಂತು? ಮೊದಲು ಮ್ಯಾಪಿಂಗ್ ಆಗಿರಲಿಲ್ಲ, ಈಗ ನಾವು ಮ್ಯಾಪಿಂಗ್ ಮಾಡಿದೀವಿ ಎಂದರು.

ಇಸ್ರೋ ಅಧ್ಯಕ್ಷ, ನಿಮ್ಹಾನ್ಸ್ ನಿರ್ದೇಶಕರು, ಸೇರಿದಂತೆ ಹಲವು ಪರಿಣಿತರ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ತಾಂತ್ರಿಕ ಸಲಹಾ ಸಮಿತಿ ಇದೆ. ನಾನು ಆರೋಗ್ಯ ಸಚಿವನಾಗಿ ಇಂಥ ಆರೋಪಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಈ ಬಗ್ಗೆ ಕಾನೂನು ಹೋರಾಟಕ್ಕೂ ರೆಡಿ ಎಂದರು.

ಆರೋಗ್ಯ ಇಲಾಖೆಯ ಡ್ರಗ್ಸ್ ಮತ್ತು ಲಾಜಿಸ್ಟಿಕ್ಸ್ ಕುರಿತ ಟೆಂಡರ್ನ​ಲ್ಲಿ ಅಕ್ರಮ ನಡೆದಿದೆ ಎಂದು ಎಎಪಿ ಪಕ್ಷದ ನಗರ ಅಧ್ಯಕ್ಷ ಮೋಹನ್ ದಾಸರಿ ಇಂದು ಆರೋಪ ಮಾಡಿದ್ದರು.

ABOUT THE AUTHOR

...view details