ಕರ್ನಾಟಕ

karnataka

ETV Bharat / state

ನೈಟ್ ಕರ್ಫ್ಯೂ ನಿರ್ಬಂಧ ಜನರ ಒಳಿತಿಗಾಗಿ ಅಷ್ಟೇ.. ಇದರಿಂದ ನಮ್ಗೇನು ಲಾಭವಿಲ್ಲ : ಸಚಿವ ಸುಧಾಕರ್​

ಕರ್ನಾಟಕ ಜನರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ವರದಿ ಮೇಲೆ ಕ್ರಮಗಳನ್ನ ಜಾರಿ ಮಾಡಲೇಬೇಕಾಗುತ್ತೆ. ಎಲ್ಲರೂ ಇದಕ್ಕೆ ಸಹಕರಿಸಬೇಕು..

ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಕುರಿತು ಸಚಿವ ಸುಧಾಕರ್ ಹೇಳಿಕೆ
ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಕುರಿತು ಸಚಿವ ಸುಧಾಕರ್ ಹೇಳಿಕೆ

By

Published : Dec 27, 2021, 3:21 PM IST

ಬೆಂಗಳೂರು :ಒಮಿಕ್ರಾನ್ ಹೊಸ ರೂಪಾಂತರಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ಆದೇಶಿಸಿದೆ. ಈ ಬೆನ್ನಲ್ಲೇ ಪರ- ವಿರೋಧಗಳು ಕೇಳಿ ಬರುತ್ತಿವೆ. ಈ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಕುರಿತು ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿರುವುದು..

ತಾಂತ್ರಿಕ ಸಲಹಾ ಸಮಿತಿ ನೀಡಿದ ಶಿಫಾರಸ್ಸಿನ ಮೇರೆಗೆ ನಿರ್ಬಂಧ ಹೇರಲಾಗಿದೆಯೇ ಹೊರತು, ಯಾವುದೇ ವ್ಯಾಪಾರ ಚಟುವಟಿಕೆಗೆ ಕಡಿವಾಣ ಹಾಕುವುದರಿಂದ ನಮಗೇನು ಸಂತೋಷ ತರೋದಿಲ್ಲ. ಕಡಿವಾಣ ಹಾಕಿದರೆ, ನಿಷೇಧಿಸಿದರೆ ನಮಗೇನಾದರೂ ಲಾಭ ಇದ್ಯಾ, ಬದಲಿಗೆ ಜನರ ಒಳಿತಿಗಾಗಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಜನರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ವರದಿ ಮೇಲೆ ಕ್ರಮಗಳನ್ನ ಜಾರಿ ಮಾಡಲೇಬೇಕಾಗುತ್ತೆ. ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದರು.

ನೈಟ್ ಕರ್ಫ್ಯೂ ಸದ್ಯ 10 ದಿವಸಕ್ಕೆ ಮಾಡಿದ್ದೇವೆ, 10-14 ದಿನಗಳ ಸೈಕಲ್ ಕಳೆದ ಮೇಲೆ ಸ್ಥಿತಿಗತಿಯಲ್ಲಿ ಬದಲಾವಣೆ ಆಗುತ್ತಾ? ಸೋಂಕು ಯಾವ ರೀತಿ ಹರಡುತ್ತೆ ಎಂಬುದನ್ನ ನೋಡಬೇಕಿದೆ. ವಿದೇಶದಲ್ಲಿ ಹೆಚ್ಚು ಹರಡುತ್ತಿದೆ, ಯಾವಾಗ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತೆ, ಆಗ ಆಸ್ಪತ್ರೆಯಲ್ಲಿ ಹಾಗೂ ಮೂಲಸೌಕರ್ಯಗಳ ಮೇಲೆ ಒತ್ತಡ ಬೀಳುತ್ತೆ. ಸೌಮ್ಯ ಲಕ್ಷಣಗಳು ಇದೆ ಅಂತಾ ತಜ್ಞರು ಹೇಳುತ್ತಿದ್ದಾರೆ. ಆದರೆ, ಕೇಸ್‌ಗಳು ಹೆಚ್ಚಾದಾಗ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತೆ. ಇದನ್ನ ತಪ್ಪಿಸುವ ಅವಶ್ಯಕತೆ ಇದೆ ಎಂದರು.

ಸಂಕ್ರಾಂತಿ ಬಳಿಕ ರಾಜಕಾರಣದಲ್ಲಿ ಬದಲಾವಣೆ :ಬಸವರಾಜ ಬೊಮ್ಮಾಯಿಯವರ ನಾಯಕತ್ವದಲ್ಲಿ ಮತ್ತಷ್ಟು ರಾಜ್ಯದಲ್ಲಿ ಅಭಿವೃದ್ಧಿ ಯಾಗಲಿದೆ. ಇವರು ಬಂದಮೇಲೆ ಅಭಿವೃದ್ಧಿ ಶಕೆ ಶುರುವಾಗಿದ್ದು, ಇದು ಇನ್ನಷ್ಟು ಗಟ್ಟಿಯಾಗಲಿದೆ. ವಿರೋಧ ಪಕ್ಷಗಳು ನಮ್ಮ ಸಾಧನೆ, ಆಡಳಿತ ಪರಿ ನೋಡಿ ಹತಾಶರಾಗುತ್ತಿದ್ದಾರೆ. ಬದಲಾವಣೆ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು. ಯಾರು ತಂಡದಲ್ಲಿ ಇರಬೇಕು, ಯಾರು ಇರಬಾರದು ಅನ್ನೋದನ್ನ ಅವರು ನಿರ್ಧಾರ ಮಾಡುತ್ತಾರೆ. ಇದು ಅವರ ಪರರ್ವೋಚ್ಚ ಅಧಿಕಾರವಾಗಿದ್ದು, ಕ್ಯಾಪ್ಟನ್ ತೀರ್ಮಾನ ಮಾಡಬೇಕು, ನಾವು ಪ್ಲೇಯರ್ಸ್ ಅಷ್ಟೇ ಅಂದರು.‌

ಅಪೌಷ್ಟಿಕತೆ ಕೊರತೆಯಿಂದ ಶಿಶುಗಳ ಮರಣ ಪ್ರಮಾಣ ಏರಿಕೆ :ಅಪೌಷ್ಟಿಕತೆ, ಕಡಿಮೆ ತೂಕ, ಹೆರಿಗೆ ಸಂದರ್ಭದಲ್ಲಿ ತೊಂದರೆ, ಇನ್ಸ್ಪೆಕ್ಷನ್‌ನಿಂದ ಶಿಶುಗಳು ಮರಣ ಹೊಂದುತ್ತಿರುವುದು ವರದಿಯಾಗಿದೆ. ಪ್ರೆಗ್ನೆನ್ಸಿ ಸಮಯದಲ್ಲಿ ತಾಯಂದಿರ ಆರೈಕೆಯಲ್ಲಿ ನಿರ್ಲಕ್ಷ್ಯವಹಿಸಿರುವ ಆರೋಪ ಕೇಳಿ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅಪೌಷ್ಟಿಕತೆಯಿಂದ ಅನೀಮಿಯಾ, ಕಡಿಮೆ ತೂಕ, ವ್ಯಾದಿಗಳಿಗೆ ತುತ್ತಾಗುತ್ತಿದ್ದಾರೆ.

ಆದರಲ್ಲೂ ರಾಯಚೂರು, ಬಳ್ಳಾರಿ, ಹೊಸಪೇಟೆ, ಬೀದರ್ ಸೇರಿದಂತೆ ಹಲವು ಜಿಲ್ಲೆಯನ್ನ ಪತ್ತೆ ಮಾಡಿದ್ದೇವೆ‌. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ತಾಯಿ ಹಾಗೂ ಮಗುವಿಗೆ ಯಾವ ರೀತಿಯ ಪೌಷ್ಟಿಕಾಹಾರ ನೀಡಬೇಕು ಎಂಬುದರ ಕುರಿತು ಸರ್ಕಾರ ವಿಶೇಷ ಒತ್ತು ಕೊಡುತ್ತಿದೆ. ಮಾಹಿತಿ ಪ್ರಕಾರ ಒಂದು ಜಿಲ್ಲೆಯಲ್ಲಿ ಸುಮಾರು 358 ಮಕ್ಕಳು ಮರಣ ಹೊಂದಿರುವ ವರದಿಯಾಗಿದೆ ಎಂದರು.

For All Latest Updates

TAGGED:

ABOUT THE AUTHOR

...view details