ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಪ್ರತಿಕ್ರಿಯೆ ನೀಡಲ್ಲ: ಸಚಿವ ಸುಧಾಕರ್ - minister sudhakar reaction about cd lady

ಸಿಡಿ ಲೇಡಿಯಿಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಹೆಸರು ಪ್ರಸ್ತಾಪ ವಿಚಾರವಾಗಿ ಸರ್ಕಾರದ ಯಾವುದೇ ಸಚಿವರು ಹೇಳಿಕೆ ಕೊಡುವುದು ಸಮಂಜಸವಲ್ಲ ಎಂದು ಸಚಿವ ಸುಧಾಕರ್​ ಅಭಿಪ್ರಾಯ ಪಟ್ಟರು.

minister sudhakar reaction about dks name cd lady  video
ಸಚಿವ ಸುಧಾಕರ್​ ಹೇಳಿಕೆ

By

Published : Mar 27, 2021, 12:34 PM IST

ಬೆಂಗಳೂರು: ಸಿಡಿ ಲೇಡಿಯಿಂದ ಡಿಕೆಶಿ ಹೆಸರು ಪ್ರಸ್ತಾಪ ವಿಚಾರವಾಗಿ ಆರೋಗ್ಯ ಸಚಿವ ಸುಧಾಕರ್ ತಮ್ಮ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಪ್ರಕರಣ ಎಸ್​ಐಟಿ ತನಿಖೆ ಹಂತದಲ್ಲಿರುವುದರಿಂದ ಸಚಿವನಾಗಿ ಹೇಳಿಕೆ ಕೊಡುವುದು ಸಮಂಜಸ ಅಲ್ಲ ಎಂದು ಅಭಿಪ್ರಾಯಪಟ್ಟರು.

ಸಚಿವ ಸುಧಾಕರ್​ ಹೇಳಿಕೆ
ನಾನೊಬ್ಬನೇ ಅಲ್ಲ, ಸರ್ಕಾರದ ಯಾವುದೇ ಸಚಿವರು ಈ ವಿಷಯದಲ್ಲಿ ಹೇಳಿಕೆ ಕೊಡಬಾರದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸತ್ಯ ಅಸತ್ಯಗಳನ್ನು ಸದ್ಯ ಎಸ್​ಐಟಿ ಪೊಲೀಸರು ಸ್ಫಷ್ಟಪಡಿಸಬೇಕು. ಆರೂವರೆ ಕೋಟಿ‌ ಜನರಿಗೂ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಜಾರಕಿಹೊಳಿಯವರಿಗೆ ನೈತಿಕ ಬೆಂಬಲ ಸೂಚಿಸಬಹುದೇ ಹೊರತು, ನಾವು ತನಿಖೆ ಸಂದರ್ಭದಲ್ಲಿ ಯಾವ ರೀತಿ ಬೆಂಬಲ ಕೊಡಲು ಸಾಧ್ಯ? ನಮ್ಮ ಪಕ್ಷ ಹಾಗೂ ಮಂತ್ರಿಗಳು ಎಲ್ಲರಿಂದಲೂ ನೈತಿಕ ಬೆಂಬಲ ಇದ್ದೇ ಇದೆ. ಆದರೆ ಸತ್ಯಾಸತ್ಯತೆ ಹೊರಗೆ ಬರುವವರೆಗೆ ಯಾರಿಗೇ ಆಗಲಿ ಬೆಂಬಲ ಸೂಚಿಸಲು ಕಷ್ಟವಾಗುತ್ತದೆ ಎಂದರು.

ABOUT THE AUTHOR

...view details