ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ನಡೆಯಲಿ ಎಂದು ಸವಾಲು ಹಾಕಿದ್ದಾರೆ.
ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್, ಬಿ.ಮುನಿಯಪ್ಪ, ಸಿದ್ದರಾಮಯ್ಯ ಮತ್ತು ನಮ್ಮ ಕುಮಾರಣ್ಣ ಹೀಗೆ ಎಲ್ಲರೂ ಸತ್ಯಹರಿಶ್ಚಂದ್ರರಲ್ಲವೇ? ಏಕಪತ್ನಿವ್ರತಸ್ಥರಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಲ್ಲವೇ? ಇವರೆಲ್ಲರೂ ಒಪ್ಪಿಕೊಳ್ಳಲಿ. ಎಲ್ಲ 224 ಶಾಸಕರ ಮೇಲೆ ತನಿಖೆ ನಡೆಯಲಿ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಮುಂದುವರೆದ ‘ಸಿಡಿ’ ವಾರ್.. ‘ಬ್ಲ್ಯೂ ಬಾಯ್ಸ್’ ಎಂದು ಧಿಕ್ಕಾರ ಕೂಗಿದ ವಿಪಕ್ಷ ಸದಸ್ಯರು
ಸಿಡಿ ಪ್ರಕರಣ ಸಂಬಂಧ ಸದನದಲ್ಲಿ 6 ಜನ ಸಚಿವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯ ಮಾಡಿದ್ದವು. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಚಿವ ಸುಧಾಕರ್, ಮುಖ್ಯಮಂತ್ರಿ ಆಗಿದ್ದವರು, ಎಂಎಲ್ಗಳು ಎಲ್ಲ ಶಾಸಕರ ಮೇಲೆ ಈ ಬಗ್ಗೆ ತನಿಖೆಯಾಗಲಿ, ರಾಜ್ಯದ ಜನಕ್ಕೆ ಗೊತ್ತಾಗಲಿ ಎಂದಿದ್ದಾರೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಯಾರು ಇವತ್ತು ಮರ್ಯಾದಾ ಪುರುಷರು, ಸತ್ಯಹರಿಶ್ಚಂದ್ರರು ಯಾರ್ಯಾರು ಇದ್ದಾರೆ ಗೊತ್ತಾಗಿ ಹೋಗಲಿ, ತಾವು ಶ್ರೀರಾಮಚಂದ್ರರು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಾತನಾಡುತ್ತಿದ್ದಾರಲ್ಲ. ಅವರಿಗೆ ಒಂದು ಸವಾಲ್ ಹಾಕುತ್ತೇನೆ. ಈ ಬಗ್ಗೆ 224 ಜನ ಕೂಡ ತನಿಖೆಗೆ ಒಳಪಡಲಿ. ನಿಮ್ಮ ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂಬುದು ಸಾಬೀತಾಗಿ ಹೋಗಲಿ. ತನಿಖೆಯಾದ್ರೆ ಎಲ್ಲರ ಚರಿತ್ರೆ ಬಂಡವಾಳ ಜನಕ್ಕೆ ತಿಳಿಯುತ್ತದೆ. ಇದನ್ನು ನಾನು ಎದುರಿಸಲು ಸಿದ್ಧನಿರುವೆ ಎನ್ನುವ ಮೂಲಕ ಜೇನುಗೂಡಿಗೆ ಕಲ್ಲು ಹೊಡೆಯುವ ಪ್ರಯತ್ನ ಮಾಡಿದ್ದಾರೆ.