ಬೆಂಗಳೂರು: ಕಿಮ್ಸ್ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಆಕ್ಸಿಜನ್ ಪ್ಲಾಂಟ್ ಮತ್ತು ಲ್ಯಾಬೊರೇಟರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಲೋಕಾರ್ಪಣೆಗೊಳಿಸಿದ್ದಾರೆ. ಕೋವಿಡ್ ಸಮಯದಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ರೋಗಿಗಳು ಪರದಾಟ ಅನುಭವಿಸಿದ್ದರು. ಆಗ ಸಕಾಲಕ್ಕೆ ಸರ್ಕಾರಿ ಆಸ್ಪತ್ರೆ ಸಹಕಾರ ಕೊಟ್ಟು ತಾತ್ಕಾಲಿಕವಾಗಿ ಸಹಾಯ ಮಾಡಿತ್ತು.
ಕಿಮ್ಸ್ ಆವರಣದಲ್ಲಿ ನೂತನ ಆಕ್ಸಿಜನ್ ಪ್ಲಾಂಟ್ ಲೋಕಾರ್ಪಣೆ ಮಾಡಿದ ಸಚಿವ ಸುಧಾಕರ್
ಕೊರೊನಾ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ ಸಮಸ್ಯೆ ಎದುರಿಸಿದ್ದ ಕಿಮ್ಸ್ ಆವರಣದಲ್ಲೀಗ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆಯಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಉದ್ಘಾಟಿಸಿದ್ದಾರೆ.
ಕಿಮ್ಸ್ ಆವರಣದಲ್ಲಿ ನೂತನ ಆಕ್ಸಿಜನ್ ಪ್ಲಾಂಟ್ ಲೋಕಾರ್ಪಣೆ ಮಾಡಿದ ಸಚಿವ ಸುಧಾಕರ್
ಇದೇ ವೇಳೆ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಡಾ. ಕೆ. ಸುಧಾಕರ್ ಪಾಲ್ಗೊಂಡು ಪದವಿ ಹಸ್ತಾಂತರಿಸಿದರು. ಇವರಿಗೆ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎನ್.ಕೆ ಶಂಕರಲಿಂಗೇಗೌಡ, ಸಿಇಒ ಶಂಕರನಾರಾಯಣ, ಡೀನ್ ಡಾ. ಬಿ.ಟಿ. ವೆಂಕಟೇಶ್ ಮತ್ತು ಶೈಕ್ಷಣಿಕ ಕುಲಸಚಿವ ಡಾ. ಎ.ಎಸ್. ನಂದಿನಿ ಸಾಥ್ ನೀಡಿದರು.
ಇದನ್ನು ಓದಿ:'ಲಾಲ್ಬಾಗ್ -ಸುಲ್ತಾನ್ಸ್ ಗಾರ್ಡನ್ ಟು ಪಬ್ಲಿಕ್ ಪಾರ್ಕ್' ಕೃತಿ ಲೋಕಾರ್ಪಣೆ ಮಾಡಿದ ಸಿಎಂ