ಬೆಂಗಳೂರು:ನಾವ್ಯಾರು ಕೂಡ ಕಾಂಗ್ರೆಸ್ಗೆ ಮತ್ತೆ ವಾಪಸ್ ಬರುತ್ತೇವೆಂದು ಅರ್ಜಿ ಹಾಕಿಲ್ಲ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಡಿಕೆಶಿ-ಸಿದ್ದರಾಮಯ್ಯ ಒಳಜಗಳ ಬಚ್ಚಿಡಲು ನಮ್ಮ ಹೆಸರು ಬಳಸ್ತಾರೆ: ಎಸ್.ಟಿ.ಸೋಮಶೇಖರ್ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಚಿವರು, ಕಾಂಗ್ರೆಸ್ಗೆ ಬರುತ್ತೇವೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಬಳಿ ನಾವು ಮಾತನಾಡಿಲ್ಲ. ನಾವು ಅವರ ಬಳಿ ಮಾತನಾಡಿದಾಗ ಅಥವಾ ಅರ್ಜಿ ಹಾಕಿದಾಗ ಅವರು ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಪದೇ ಪದೆ ನಮ್ಮ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ನಾವ್ಯಾರು ಅರ್ಜಿ ಸಲ್ಲಿಸದಿದ್ದಾಗ, ಅವರಿಬ್ಬರ ಒಳಜಗಳವನ್ನು ಮುಚ್ಚಿಟ್ಟುಕೊಳ್ಳಲು ನಮ್ಮನ್ನು ಪದೇ ಪದೆ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದರು.
ಕೊರೊನಾದಿಂದ ಮೃತಪಟ್ಟ ರೈತರ ಸಾಲಮನ್ನಾಗೆ ತೀರ್ಮಾನ :
ಕೊರೊನಾ ಸೋಂಕಿನಿಂದ ಮೃತಪಟ್ಟ ರೈತರ ಸಾಲ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಇನ್ನೆರಡು-ಮೂರು ದಿನಗಳೊಳಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಕೋವಿಡ್ನಿಂದ ಮೃತಪಟ್ಟ ರೈತರ ಮಾಹಿತಿ ನೀಡಲು ಎಲ್ಲಾ ಸಹಕಾರ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎಲ್ಲಾ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ಗಳಿಗೆ ಮಾಹಿತಿ ನೀಡಲಾಗಿದೆ. ಎಷ್ಟು ಜನ ಸಾಲ ತೆಗೆದುಕೊಂಡಿದ್ದರು. ಅದರಲ್ಲಿ ಎಷ್ಟು ಜನ ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು. ಅದರ ಆಧಾರದ ಮೇಲೆ ಬ್ಯಾಂಕುಗಳಲ್ಲಿ ಎಷ್ಟು ಲಾಭ ಬರುತ್ತಿದೆ ಎಂಬುದರ ಬಗ್ಗೆ ಮಾಹಿತಿ ತೆಗೆದುಕೊಂಡು ಎಷ್ಟು ಸಾಲ ಮನ್ನಾ ಮಾಡಬೇಕೆಂಬುದನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್ಗಳಿದ್ದು, ಅದರಲ್ಲಿ 15 ರಿಂದ 16 ಡಿಸಿಸಿ ಬ್ಯಾಂಕ್ಗಳು ಲಾಭದಲ್ಲಿವೆ. ಆಯಾ ಜಿಲ್ಲೆಯಲ್ಲಿ ಸಾಲ ಕೊಡಲು ಸಮರ್ಥವಾಗಿವೆ. ಕೆಲವು ಬ್ಯಾಂಕುಗಳು ಅಷ್ಟೊಂದು ಲಾಭದಲ್ಲಿಲ್ಲ. ಸಬಲವಾಗಿರದ ಡಿಸಿಸಿ ಬ್ಯಾಂಕ್ಗಳಿಗೆ ಅಪೆಕ್ಸ್ ಬ್ಯಾಂಕ್ಗಳಿಂದ ಆರ್ಥಿಕ ನೆರವು ನೀಡಲಾಗುವುದು. ಎಲ್ಲ ಬ್ಯಾಂಕ್ಗಳಿಂದ ಎರಡು ಮೂರು ದಿನದಲ್ಲಿ ಮಾಹಿತಿ ಬರುತ್ತದೆ. ಚರ್ಚೆ ಮಾಡಿ ರೈತರ ಸಾಲಮನ್ನಾ ಕುರಿತು ಅಂತಿಮಗೊಳಿಸಲಾಗುವುದು ಎಂದರು.
ಇದನ್ನೂ ಓದಿ:ಸಿಎಂ ವಿರುದ್ಧ ಮಾತನಾಡ್ತಿರುವ ಯತ್ನಾಳ್ ಮೊದಲು ರಾಜೀನಾಮೆ ಕೊಡಲಿ: ರೇಣುಕಾಚಾರ್ಯ ಗರಂ
ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ಮೂಲಕ ಒಂದು ಲಕ್ಷ ರೂ.ವರೆಗೆ ಸಾಲಮನ್ನಾ ಮಾಡುವ ಸಾಧ್ಯತೆ ಇದೆ.