ಕರ್ನಾಟಕ

karnataka

CD ಮಾಡಿಸಿದ್ದು "ಅವರೇ": ಸಹಕಾರ ಸಚಿವ ಸೋಮಶೇಖರ್

ನಾನು 20 ವರ್ಷ ಕಾಂಗ್ರೆಸ್ ನಲ್ಲೇ ಇದ್ದೆ ಅವರು ಏನೇನು ಮಾಡ್ತಾರೆ ಅಂತ ನನಗೆ ಗೊತ್ತಿದೆ. ಸಿಡಿ ಪ್ರಕರಣ ಸಿಬಿಐಗೆ ಕೊಡಲಿ ಅನ್ನೋದು ನಮ್ಮ ಒತ್ತಾಯ. ಸಿಬಿಐ‌ ತನಿಖೆಯಿಂದ ಎಲ್ಲ ಆಚೆ ಬರುತ್ತೆ'' ಎಂದು ಸಿಡಿ ಮಾಡಿಸಿದ್ದು ಕಾಂಗ್ರೆಸ್ ಪಕ್ಷದವರಾ ಎಂಬ ಪ್ರಶ್ನೆಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದರು.

By

Published : Mar 10, 2021, 1:58 PM IST

Published : Mar 10, 2021, 1:58 PM IST

minister ST Somashekhar pressmeet
ಎಸ್ ಟಿ ಸೋಮಶೇಖರ್

ಬೆಂಗಳೂರು: ಸಿಡಿ ಮಾಡಿಸಿದ್ದು, ಅವರೇ, ಅವರೇ ಅಂದ್ರೆ ಯಾರು ಕಾಂಗ್ರೆಸ್ ನವರಾ? ಎಂಬ ಪ್ರಶ್ನೆಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಗೊಂದಲದ ಉತ್ತರ ನೀಡಿದ್ದಾರೆ.

ಎಸ್ ಟಿ ಸೋಮಶೇಖರ್ ಸುದ್ದಿಗೋಷ್ಠಿ
ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 'ಅವರೇ ಮಾಡಿಸಿದ್ದು, ಶೇ100ರಷ್ಟು ಸಿಡಿ ಮಾಡಿದ್ದೇ ಅವರು ಎಂದರು. ಅವರೇ ಇನ್ಯಾರು ಮಾಡಿರ್ತಾರೆ? ಇಂಥ ಮನೆಹಾಳ ತೇಜೋವಧೆ ಕೆಲಸ ಅವ್ರೇ ಮಾಡೋದು. ನಾನು 20 ವರ್ಷ ಕಾಂಗ್ರೆಸ್ ನಲ್ಲೇ ಇದ್ದೆ. ಅವರು ಏನೇನು ಮಾಡ್ತಾರೆ ಅಂತ ನನಗೆ ಗೊತ್ತಿದೆ. ಸಿಡಿ ಪ್ರಕರಣ ಸಿಬಿಐಗೆ ಕೊಡಲಿ ಅನ್ನೋದು ನಮ್ಮ ಒತ್ತಾಯ. ಸಿಬಿಐ‌ ತನಿಖೆಯಿಂದ ಎಲ್ಲ ಆಚೆ ಬರುತ್ತೆ'' ಎಂದು ಸಿಡಿ ಮಾಡಿಸಿದ್ದು ಎಂದರು.
ರಾಜಕೀಯವಾಗಿ ಸವಾಲು ಹಾಕಲಿ ಎದುರಿಸ್ತೇವೆ:ತಾಕತ್ತಿದ್ರೆ ನನ್ ವಿರುದ್ಧ, ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ. ಅದನ್ನು ಬಿಟ್ಟು ಸಿಡಿ ರಾಜಕಾರಣ ಮಾಡೋದು ಸರಿಯಲ್ಲ. ಶಾಸಕರನ್ನು ಅವರು ಟಾರ್ಗೆಟ್ ಮಾಡಿಲ್ಲ, ಬಾಂಬೆ ಟೀಂನವರನ್ನು ಟಾರ್ಗೆಟ್ ಮಾಡ್ತಾರೆ ಎಂಬ ಖಚಿತ ಮಾಹಿತಿ ನಮಗಿತ್ತು. ಸಚಿವರನ್ನು ಟಾರ್ಗೆಟ್ ಮಾಡಿದ್ದಾರೆ, ಸಚಿವರಿಗೆ ಟಾರ್ಗೆಟ್ ಮಾಡಿದ್ರೆ ರಾಜೀನಾಮೆ ಕೊಡಿಸಬಹುದು ಅನ್ನೋದು ಅವ್ರ ಉದ್ದೇಶ ಎಂದರು. ಮೈತ್ರಿ ಸರ್ಕಾರ ತೆಗೆದ್ರು ಅಂತ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ನಾವು ನಮ್ ವಿರುದ್ಧ ಸಿಡಿ ಬಿಡ್ತಾರೆ ಅಂತ ಕೋರ್ಟ್‌ಗೆ ಹೋಗಿಲ್ಲ. ಸಿಡಿ‌‌ ಇಟ್ಕೊಂಡಿರೋರು ಅವರು, ಅದಕ್ಕೆ ಮುಂದೆ ತಕ್ಕ ಉತ್ತರ ಕೊಡ್ತೇವೆ. ನಾನೂ ಕಾಂಗ್ರೆಸ್​ನಲ್ಲಿದ್ದವನು, ಇವರ ನೈತಿಕತೆ, ಅನೈತಿಕತೆ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದರು.

ದಿನೇಶ್ ಕಲ್ಲಳ್ಳಿ ದೂರು ವಾಪಸ್ ತಗೊಂಡಿದಾರೆ, ಆದ್ರೆ ರಮೇಶ್ ಜಾರಕಿಹೊಳಿಗೆ, ಅವ್ರ ಕುಟುಂಬಕ್ಕೆ ಆದ‌ ನೋವು ವಾಪಸಾಗುತ್ತಾ? ರಾಜಕೀಯ ಮಾನ ಮರ್ಯಾದೆ ಹೋಯ್ತು, ಅದು ವಾಪಸ್ ಬರಲ್ಲ. ನಾವು ಮೈತ್ರಿ ಸರ್ಕಾರ ತೆಗೆದ್ವಿ ಅಂತಾ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ಏನೇನೋ ಸಂಚು ಮಾಡಿದಾರೆ ನಮ್ ವಿರುದ್ಧ. ಹೀಗಾಗಿ ನಾವು ಕೋರ್ಟ್ ಗೆ ಹೋಗಿದ್ದೇವೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ಕೋರ್ಟ್​ನಲ್ಲಿ ಯಾಕೆ ಎಲ್ರೂ ಬೇಲ್ ತಗೋತಾರೆ? ಇವ್ರೆಲ್ಲ ನೆಟ್ಟಗಿದ್ರೆ ಬೇಲ್ ಯಾಕೆ ತಗೋತಾರೆ? ತೇಜೋವಧೆಯಿಂದ ರಕ್ಷಣೆಗೆ ಕಾನೂನಿನಲ್ಲಿ ಅವಕಾಶ ಇದೆ. ತೇಜೋವಧೆ ಮಾಡ್ತಾರೆ ಅಂತ ಕೋರ್ಟಿಗೆ ಹೋಗಿದ್ದೇವೆ ಎಂದು ಕೋರ್ಟ್‌ಗೆ ಅರ್ಜಿ ಹಾಕಿದ ಬಗ್ಗೆ ಎಸ್ ಟಿ ಸೋಮಶೇಖರ್ ಸಮರ್ಥನೆ ನೀಡಿದ್ರು.

ಎಪಿಎಂಸಿ ಸೆಸ್ ರದ್ದು ಮಾಡಲ್ಲ:
ಸರ್ಕಾರ ಎ ಪಿ ಎಂ ಸಿ ವರ್ತಕರಿಗೆ ವಿಧಿಸಲಾಗುತ್ತಿರುವ ಸೆಸ್ ಈಗ ಕಡಿಮೆ ಮಾಡಲಾಗಿದೆ. ಸದ್ಯ ಶೇ 6ರಷ್ಟು ಸೆಸ್ ಇದೆ, ಇದನ್ನ ರದ್ದು ಮಾಡುವ ಯಾವುದೇ ಚಿಂತನೆ ಇಲ್ಲ ಎಂದರು.

ಅಡುಗೆ ಸಿದ್ಧವಿತ್ತು, ಸಿದ್ದರಾಮಯ್ಯ ಬಂದು ಊಟ ಮಾಡಿದ್ರು:71,324 ಕೋಟಿ ರೂ ಸಾಲ‌ ಬಜೆಟ್ ನಲ್ಲಿ ಉಲ್ಲೇಖದ ಬಗ್ಗೆ ಮಾತನಾಡಿದ ಅವರು, ಸಾಲ ತಗೊಳ್ಳೋದು ಹೊಸದಲ್ಲ, ಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲೂ ಸಾಲ ತಗೊಂಡಿದ್ರು. ಕೊರೊನಾ ಹಿನ್ನೆಲೆ ಸಾಲ ತಗೊಳ್ಳೋದು ಅನಿವಾರ್ಯ ಇತ್ತು. ನಮ್ಮ ಅವಧಿಯಲ್ಲಿ ನೆರೆ, ಅತಿವೃಷ್ಟಿ ಇತ್ತು. ಸಿದ್ದರಾಮಯ್ಯ ಅವಧಿಯಲ್ಲಿ ನೆರೆ, ಅತಿವೃಷ್ಟಿ ಇತ್ತಾ? ಅಡುಗೆ ಸಿದ್ಧವಿತ್ತು, ಸಿದ್ದರಾಮಯ್ಯ ಬಂದು ಊಟ ಮಾಡಿದ್ರು. ನಮ್ಮ ಅವಧಿಯಲ್ಲಿ ನಾವೇ ಅಡುಗೆ ಮಾಡಬೇಕು, ನಾವೇ ಊಟ ಮಾಡಬೇಕು ಎಂದರು.

ABOUT THE AUTHOR

...view details