ಬೆಂಗಳೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಾಡ ಹಬ್ಬ ಮೈಸೂರು ದಸರಾಗೆ ಜಿಲ್ಲಾಡಳಿತದ ವತಿಯಿಂದ ಆಹ್ವಾನ ಪತ್ರಿಕೆ ನೀಡಿದರು.
ಸಿಎಂ ಭೇಟಿಯಾಗಿ ನಾಡ ಹಬ್ಬ ದಸರಾಗೆ ಆಹ್ವಾನ ನೀಡಿದ ಸಚಿವ ಸೋಮಶೇಖರ್ - Minister S.T. Somashekhar invited CM
ಸಚಿವ ಎಸ್.ಟಿ.ಸೋಮಶೇಖರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಾಡ ಹಬ್ಬ ಮೈಸೂರು ದಸರಾಗೆ ಜಿಲ್ಲಾಡಳಿತದ ವತಿಯಿಂದ ಆಹ್ವಾನ ಪತ್ರಿಕೆ ನೀಡಿದರು.
![ಸಿಎಂ ಭೇಟಿಯಾಗಿ ನಾಡ ಹಬ್ಬ ದಸರಾಗೆ ಆಹ್ವಾನ ನೀಡಿದ ಸಚಿವ ಸೋಮಶೇಖರ್ Minister S.T. Somashekhar invited CM](https://etvbharatimages.akamaized.net/etvbharat/prod-images/768-512-9144412-388-9144412-1602487015107.jpg)
ಬಳಿಕ ಮಾತನಾಡಿದ ಎಸ್.ಟಿ.ಸೋಮಶೇಖರ್, 17ರಂದು ದಸರಾ ಉದ್ಘಾಟನೆ ಇದೆ. ಇಂದು ಸಿಎಂ ಅವರಿಗೆ ಆಹ್ವಾನ ಕೊಟ್ಟಿದ್ದೇವೆ. ನಂತರ ಸಿ.ಟಿ.ರವಿ, ಸಿಎಸ್ ವಿಜಯ್ ಭಾಸ್ಕರ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೂ ಆಹ್ವಾನ ಕೊಡುತ್ತೇವೆ ಎಂದರು.
ಮುನಿರತ್ನ ಅವರಿಗೆ ಆರ್.ಆರ್ ನಗರ ಕ್ಷೇತ್ರಕ್ಕೆ ಟಿಕೆಟ್ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಬಿಹಾರ್ ಚುನಾವಣೆ ಹಿನ್ನೆಲೆಯಲ್ಲಿ ನಾಯಕರು ಬ್ಯುಸಿಯಾಗಿದ್ದಾರೆ. ಟಿಕೆಟ್ ವಿಚಾರದಲ್ಲಿ ಯಾವುದೇ ಸಂಘರ್ಷ ಇಲ್ಲ. ನಾಮಪತ್ರ ಸಲ್ಲಿಸಲು ಇನ್ನೂ 16ರವರೆಗೆ ಸಮಯ ಇದೆ. ಮುನಿರತ್ನರಿಗೆ ಟಿಕೆಟ್ ಕೊಡುವ ಭರವಸೆ ಇದೆ ಎಂದರು.