ಬೆಂಗಳೂರು:ರಾಜ್ಯದಲ್ಲಿರುವ ಎಲ್ಲ 21 ಡಿಸಿಸಿ ಬ್ಯಾಂಕ್ ಸಾಧನೆಗಳ ಪರಾಮರ್ಶೆ ಮಾಡುವಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂಬಂಧ ಆಯಾ ಬ್ಯಾಂಕ್ಗಳ ಪ್ರತ್ಯೇಕ ಶ್ರೇಣಿಗಳನ್ನು ಅಳೆಯುವ ಅಧ್ಯಯನವನ್ನು ಖಾಸಗಿ ತನಿಖಾ ಸಂಸ್ಥೆಗಳು ಇಲ್ಲವೇ ನಬಾರ್ಡ್ ಸಮಿತಿಗಳ ಮೂಲಕ ಮಾಡಿಸಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ವಿಕಾಸೌಧದಲ್ಲಿ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ಗಳ ಸಮಸ್ಯೆಗಳು ಹಾಗೂ ಅವುಗಳ ಕಾರ್ಯನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಈ ಸೂಚನೆ ನೀಡಿದರು.
ಎಲ್ಲ ಡಿಸಿಸಿ ಬ್ಯಾಂಕ್ಗಳ ವಿಭಾಗೀಯವಾರು ಸಭೆ ಕರೆದು, ಒಂದೊಂದೇ ಬ್ಯಾಂಕ್ಗಳ ಪ್ರಗತಿ ಪರಿಶೀಲನೆ ಮಾಡಬೇಕಿದೆ. ಆ ಮೂಲಕ ಬ್ಯಾಂಕ್ಗಳ ಹಾಲಿ ಸ್ಥಿತಿಗತಿಗಳ ಬಗ್ಗೆ ಅರಿಯುವುದಲ್ಲದೇ, ಯಾವ ಬ್ಯಾಂಕ್ಗಳು ಉತ್ತಮ ಸ್ಥಿತಿಯಲ್ಲಿವೆ? ಯಾವುದು ತುಂಬಾ ಹದಗೆಟ್ಟಿದೆ? ರೈತರಿಗೆ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯಕ್ಕೆ ಸಾಲ ಸಿಗುತ್ತಿದೆಯೇ? ಕೃಷಿ ಆಧಾರಿತ ಸಾಲ ವಿತರಣೆಯಲ್ಲಿ ಸಮಸ್ಯೆ ಇರುವ ಬ್ಯಾಂಕ್ಗಳು ಯಾವುದಾದರೂ ಇದೆಯೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.
ಇದರ ಜೊತೆಗೆ ಬ್ಯಾಂಕ್ಗಳ ಆಡಳಿತ ಮಂಡಳಿ ಅವ್ಯವಹಾರ, ಹಗರಣಗಳ ಬಗ್ಗೆಯೂ ತಿಳಿದುಕೊಂಡು, ಬ್ಯಾಂಕ್ ಹಾಗೂ ಸರ್ಕಾರಕ್ಕೆ ಬರಬೇಕಾದ ಹಣ ವಸೂಲಾತಿ ಬಗ್ಗೆಯೂ ಕ್ರಮವಹಿಸಲು ಅನುಕೂಲವಾಗುತ್ತದೆ. ಅಲ್ಲದೇ, ಬ್ಯಾಂಕ್ಗಳಲ್ಲಿ ಬಾಕಿ ಇರುವ ಕೇಸ್ಗಳೆಷ್ಟು? ಬಾಕಿ ಉಳಿದಿರಲು ಕಾರಣಗಳೇನು ಎಂಬಿತ್ಯಾದಿ ವಿಷಯಗಳ ಬಗ್ಗೆಯೂ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸಚಿವರು ನಿರ್ದೇಶಿಸಿದರು.
ಆಸ್ತಿ ಹರಾಜಿಗೆ ಅಧಿಕಾರಿ ನೇಮಿಸಲು ಸೂಚನೆ: