ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ತಮ್ಮ ತಾಯಿ ಸೀತಮ್ಮ ತಿಮ್ಮೇಗೌಡ ಅವರ ಹುಟ್ಟುಹಬ್ಬವನ್ನು ಕಳೆದ ವಾರವಷ್ಟೇ ಆಚರಿಸಿದ್ದರು. ಈ ವೇಳೆ ಪುತ್ರನಿಗೆ ತಾಯಿ ಬೇಡಿಕೆಯೊಂದನ್ನು ಇಟ್ಟಿದ್ದು, ಅದನ್ನು ಈಡೇರಿಸುವಲ್ಲಿ ಎಸ್ಟಿಎಸ್ ಯಶಸ್ವಿಯಾಗಿದ್ದಾರೆ.
ಹೌದು, ಕಳೆದ ವಾರ ನಡೆದ ಸೀತಮ್ಮ ತಿಮ್ಮೇಗೌಡರ (94) ಹುಟ್ಟುಹಬ್ಬದ ವೇಳೆ, 'ನಿನಗೆ ಏನು ಕೊಡಬೇಕು' ಎಂದು ಎಸ್.ಟಿ.ಸೋಮಶೇಖರ್ ತಾಯಿಯ ಬಳಿ ಕೇಳಿದ್ದರಂತೆ. ಆಗ ಸೀತಮ್ಮ, 'ನನಗೆ ವಯಸ್ಸಾಗುತ್ತಿದೆ. ನನ್ನ ಎಲ್ಲಾ ಅವಶ್ಯಕತೆಗಳನ್ನು ನೀನು ಪೂರೈಸಿದ್ದೀಯ. ಅದರೆ, ನಾನು ರಾಜಕೀಯ ನಾಯಕರಾದ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಭಿಮಾನಿ. ಅವರನ್ನು ಒಮ್ಮೆ ಭೇಟಿ ಮಾಡಬೇಕು' ಎಂದು ಕೇಳಿಕೊಂಡಿದ್ದರು.
ಎಸ್.ಟಿ. ಸೋಮಶೇಖರ್ ನಿವಾಸಕ್ಕೆ ಎಸ್ .ಎಂ. ಕೃಷ್ಣ ಭೇಟಿ ಈ ವಿಷಯ ಕೇಳಿದ ಸಚಿವರಿಗೆ ಆಶ್ಚರ್ಯದ ಜೊತೆಗೆ ಆನಂದವಾಗಿತ್ತಂತೆ. ತಕ್ಷಣ ಸಚಿವರು ವಿಷಯವನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡಗೆ ತಿಳಿಸಿ, ತಾಯಿಯ ಬೇಡಿಕೆಯ ಕುರಿತು ಎಸ್.ಎಂ.ಕೃಷ್ಣ ಅವರಿಗೆ ತಿಳಿಸುವಂತೆ ಹೇಳಿದ್ದರು.
ಅದರಂತೆಯೇ ತಮ್ಮ ಮನೆಗೆ ಯಾವಾಗ?, ಯಾವ ಸಮಯಕ್ಕೆ ಸಚಿವರ ತಾಯಿಯನ್ನು ಕರೆದುಕೊಂಡು ಬರಬೇಕೆಂಬುದನ್ನು ದಿನೇಶ್ ಗೂಳಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಎಂ.ಕೃಷ್ಣ, 'ಸಚಿವರ ತಾಯಿ ನನಗಿಂತ ಹಿರಿಯರು. ಹಾಗಾಗಿ ಅವರು ನಮ್ಮ ಮನೆಗೆ ಬರುವುದು ಉಚಿತವಲ್ಲ. ನಾನೇ ಅವರ ಮನೆಗೆ ಬಂದು ಭೇಟಿ ಮಾಡುತ್ತೇನೆ' ಎಂದು ಸಂತಸದಿಂದಲೇ ಭರವಸೆ ನೀಡಿದ್ದರು.
ಎಸ್.ಟಿ. ಸೋಮಶೇಖರ್ ನಿವಾಸಕ್ಕೆ ಎಸ್ .ಎಂ. ಕೃಷ್ಣ ಭೇಟಿ ಸಚಿವರ ನಿವಾಸಕ್ಕೆ ಎಸ್.ಎಂ.ಕೃಷ್ಣ ಭೇಟಿ:
ಕೊಟ್ಟ ಮಾತಿನಂತೆ ನಿನ್ನೆ ರಾತ್ರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭೇಟಿ ನೀಡಿ, ಸಚಿವರ ಮಾತೃಶ್ರೀ ಜೊತೆ ಕೆಲಕಾಲ ಮಾತನಾಡುವ ಮೂಲಕ ಅವರ ಕೋರಿಕೆ ಈಡೇರಿಸಿದರು. ಈ ಸಂದರ್ಭದಲ್ಲಿ ಸಚಿವರ ಪತ್ನಿ ರಾಧಾ ಸೋಮಶೇಖರ್ ಹಾಗೂ ಪುತ್ರ ನಿಶಾಂತ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಎಸ್.ಟಿ.ಸೋಮಶೇಖರ್ ನಿವಾಸಕ್ಕೆ ಎಸ್.ಎಂ.ಕೃಷ್ಣ ಭೇಟಿ ಇತ್ತ ತಮ್ಮ ತಾಯಿಯ ಕೋರಿಕೆಯನ್ನು ನೆರವೇರಿಸಲು ಕೃಷ್ಣ ಅವರೇ ತಮ್ಮ ಮನೆಗೆ ಆಗಮಿಸಿದ್ದಕ್ಕೆ ಸಚಿವ ಸೋಮಶೇಖರ್ ಸಹ ಸಂತಸ ವ್ಯಕ್ತಪಡಿಸಿದ್ದಾರೆ.