ಕರ್ನಾಟಕ

karnataka

ETV Bharat / state

ಕೋಟ್ಯಂತರ ರೂಪಾಯಿ ವಸೂಲಿ ಆರೋಪ: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಅರೆಸ್ಟ್‌ - minister sriramulu pa raju arrest news

ಸಚಿವ ಶ್ರೀರಾಮುಲು ಹೆಸರಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅವರ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

sriramulu
ಸಚಿವ ಶ್ರೀರಾಮುಲು ಪಿಎ ರಾಜು

By

Published : Jul 1, 2021, 9:28 PM IST

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೆಸರಿ‌ನಲ್ಲಿ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರುವ ಗಂಭೀರ ಆರೋಪದ ಮೇಲೆ ಸಚಿವರ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಚಿವ ಶ್ರೀರಾಮುಲು ಪಿಎ ರಾಜು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ನೀಡಿದ ದೂರಿನ ಮೇರೆಗೆ ಸಚಿವರ ಪಿಎ ರಾಜು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಸಚಿವರು ಹಾಗೂ ಸಿಎಂ ಕಚೇರಿ ಹೆಸರಿನಲ್ಲಿ ಅಕ್ರಮ ಹಣ ವಸೂಲಿ ಆರೋಪ ಸಂಬಂಧ ಸಿಸಿಬಿಗೆ ದೂರುಗಳು ಬಂದಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿಗಳನ್ನು ಕಲೆ ಹಾಕಿದ್ದು, ಇಂದು ಸಂಜೆ ಸಚಿವ ಶ್ರೀರಾಮುಲು ಮನೆಯ ಬಳಿಯೇ ರಾಜುನನ್ನು ಅರೆಸ್ಟ್‌ ಮಾಡಿದ್ದಾರೆ.

ಹಲವು ವರ್ಷಗಳಿಂದ‌ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜೊತೆ ರಾಜು ಗುರುತಿಸಿಕೊಂಡಿದ್ದರು.

ABOUT THE AUTHOR

...view details