ಬೆಂಗಳೂರು:ಇಂದು ಆರೋಗ್ಯ ಸಚಿವ ಶ್ರೀರಾಮುಲು ಶಾಲಾ ಕಾಲೇಜು ಆರಂಭಿಸುವುದರ ಬಗ್ಗೆ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು.
ರಾಜ್ಯದಲ್ಲಿ ಶಾಲೆ ಪ್ರಾರಂಭ ವಿಚಾರ: ತಜ್ಞರೊಂದಿಗೆ ಸಚಿವ ಶ್ರೀರಾಮುಲು ಮಹತ್ವದ ಸಭೆ - ಮಕ್ಕಳಿಗೆ ಕೌನ್ಸಲಿಂಗ್
ಕೇಂದ್ರ ಸರ್ಕಾರ ಅಕ್ಟೋಬರ್ 15ಕ್ಕೆ ಶಾಲಾ - ಕಾಲೇಜು ಪ್ರಾರಂಭ ಮಾಡಲು ಅಧಿಸೂಚನೆ ನೀಡಿದ ಹಿನ್ನೆಲೆ ಇಂದು ಸಚಿವ ಶ್ರೀರಾಮುಲು ಶಾಲಾ-ಕಾಲೇಜು ಆರಂಭ ಕುರಿತಂತೆ ತಜ್ಞರ ಜೊತೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಆರ್ಭಟದಿಂದಾಗಿ ಶಾಲಾ - ಕಾಲೇಜು ಆರಂಭಕ್ಕೆ ಸಂಕಷ್ಟ ಎದುರಾಗಿದೆ. ಕೇಂದ್ರ ಸರ್ಕಾರ ಅಕ್ಟೋಬರ್ 15ಕ್ಕೆ ಶಾಲಾ-ಕಾಲೇಜು ಪ್ರಾರಂಭ ಮಾಡಲು ಅಧಿಸೂಚನೆ ನೀಡಿದೆ.. ಆದರೆ, ರಾಜ್ಯದಲ್ಲಿ ಕೊರೊನಾ ನಿತ್ಯ 10ಸಾವಿರ ಗಡಿದಾಟುತ್ತಿದ್ದು, ಶಾಲೆ ಆರಂಭದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಯ್ತು.
ಈ ಸಂಬಂಧ ಮಾತಾನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಮಕ್ಕಳು ಹಾಗೂ ಪೋಷಕರು ತೊಂದರೆಗೆ ಒಳಗಾಗಬಾರದು ಎಂಬ ಕಾರಣಕ್ಕೆ ನಾವು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ಟೆಕ್ನಿಕಲ್ ಎಕ್ಸ್ಪರ್ಟ್ ಡಾ. ಸುದರ್ಶನ್, ಶಿಕ್ಷಸ ಸಚಿವ ಸುರೇಶ್ ಕುಮಾರ್ ರೊಂದಿಗೆ ಚರ್ಚೆ ಮಾಡಿದ್ದೇವೆ.. ಮಕ್ಕಳ ಮಾನಸಿಕ ಸಮತೋಲನ ಹಾಳಾಗದಂತೆ ಕ್ರಮ ಕೈಗೊಳ್ಳಲಾಗುತ್ತೆ.. ಈ ಬಗ್ಗೆ ಮಕ್ಕಳ ತಜ್ಞರ ಬಳಿಯೂ ಮಾಹಿತಿ ಕೇಳಿದ್ದೇವೆ. ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿ, ಅವರಲ್ಲಿ ಕಾನ್ಫಿಡೆನ್ಸ್ ಮೂಡಿಸಿ ನಂತರವಷ್ಟೇ ಶಾಲಾ - ಕಾಲೇಜು ತೆರೆಯಲು ಚಿಂತನೆ ಮಾಡಲಾಗುತ್ತೆ.
ಕೇಂದ್ರ ಸರ್ಕಾರ ಆಗಲೇ ಅನುಮತಿ ಕೊಟ್ಟಿದೆ. ಆದರೆ, ಪೋಷಕರು ಮತ್ತು ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂತರ ನಿರ್ಧಾರ ಮಾಡಲಾಗುತ್ತೆ. ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಅವರ ಪ್ರಕಾರ, ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಮಾಡಿದ್ದ ಎಸ್. ಒ. ಪಿ.ಯನ್ನೇ ಇಲ್ಲಿಯೂ ಮಾಡಬೇಕಾಗಿದೆ. ಅದನ್ನೇ ಶಿಕ್ಷಣ ಇಲಾಖೆಗೆ ಕೊಡುವಂತಹ ಕೆಲಸ ಮಾಡುತ್ತೇವೆ.
ಈ ಹಂತದಲ್ಲಿ ಶಾಲೆ ಕಾಲೇಜು ಪ್ರಾರಂಭ ಮಾಡಬೇಕಾ- ಬೇಡ್ವಾ ಎಂಬುದನ್ನು ತೀರ್ಮಾನ ಮಾಡಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದೆ. ತಜ್ಞರ ಜೊತೆ ಅಭಿಪ್ರಾಯ ಹಂಚಿಕೊಳ್ಳಬೇಕಾಗಿದೆ. ನಂತರ ಶಿಕ್ಷಣ ಇಲಾಖೆಗೆ ಈ ಬಗ್ಗೆ ವರದಿ ನೀಡಲಾಗುತ್ತೆ ಎಂದು ತಿಳಿಸಿದರು..