ಕರ್ನಾಟಕ

karnataka

ETV Bharat / state

ಮಂಗಲಾ ಅಂಗಡಿ ಜಯದ ಹಿಂದೆ ಕೆಲಸ ಮಾಡಿತೇ ಸಚಿವ ಶೆಟ್ಟರ್‌ ಸೂತ್ರ? - ಮಂಗಳಾ ಅಂಗಡಿ,

ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ದಿ.ಸುರೇಶ್​ ಅಂಗಡಿ ಪತ್ನಿ ಮಂಗಲಾ ಅಂಗಡಿ ಜಯದ ಹಿಂದೆ ಸಚಿವ ಜಗದೀಶ್​ ಶೆಟ್ಟರ್​ ಹೆಣೆದ ರಾಜಕೀಯ ಸೂತ್ರ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ.

Minister Shetter formula, Minister Shetter formula is behind of mangala angadi victory, mangala angadi victory in Belagavi, mangala angadi, mangala angadi news, ಸಚಿವ ಶೆಟ್ಟರ್‌ ಸೂತ್ರ, ಮಂಗಳಾ ಅಂಗಡಿ ಜಯದ ಹಿಂದೆ ಸಚಿವ ಶೆಟ್ಟರ್‌ ಸೂತ್ರ, ಬೆಳಗಾವಿಯಲ್ಲಿ ಮಂಗಳಾ ಅಂಗಡಿ ಗೆಲುವು, ಮಂಗಳಾ ಅಂಗಡಿ, ಮಂಗಳಾ ಅಂಗಡಿ ಸುದ್ದಿ,
ಮಂಗಳಾ ಅಂಗಡಿ ಜಯದ ಹಿಂದೆ ಸಚಿವ ಶೆಟ್ಟರ್‌ ಸೂತ್ರ

By

Published : May 3, 2021, 7:23 AM IST

ಬೆಂಗಳೂರು: ಟಿ-20 ಕ್ರಿಕೆಟ್ ಮ್ಯಾಚ್‌ನಂತೆ ಎಲ್ಲರೂ ಉಸಿರು ಬಿಗಿಹಿಡಿದು ಫಲಿತಾಂಶಕ್ಕೆ ಕಾಯುವಂತೆ ಮಾಡಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ರೋಚಕ ಜಯದ ಹಿಂದೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಂತ್ರಗಾರಿಕೆ ಭಾಗವಾಗಿ ಹೆಣೆದ ರಾಜಕೀಯ ಸಮೀಕರಣದ ಸೂತ್ರ ಯಶಸ್ವಿಯಾಗಿದೆ ಎನ್ನುವ ಮಾತು ರಾಜಕೀಯ ಮೊಗಸಾಲೆಯಲ್ಲಿ ಕೇಳಿ ಬರುತ್ತಿದೆ.

ಚುನಾವಣೆ ಘೋಷಣೆ ಆದ ದಿನದಿಂದ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದ ಶೆಟ್ಟರ್‌, ಕ್ಷೇತ್ರದ ಬಿಜೆಪಿ ಜನಪ್ರತಿನಿಧಿಗಳನ್ನು ಒಗ್ಗೂಡಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುವಲ್ಲಿ ಯಶಸ್ವಿಯಾದರು. ರಮೇಶ್‌ ಜಾರಕಿಹೊಳಿ ಪ್ರಕರಣ ಚುನಾವಣೆ ಮೇಲೆ ಪ್ರಭಾವ ಬೀರದಂತೆ ಇನ್ನಷ್ಟು ರಾಜಕೀಯ ತಂತ್ರಗಾರಿಕೆಯನ್ನು ಶೆಟ್ಟರು ಹೆಣೆದರು ಎಂಬ ವಿಶ್ಲೇಷಣೆ ನಡೆಯುತ್ತಿದೆ.

ಅರಭಾವಿ ಕ್ಷೇತ್ರದಲ್ಲಿ ಮತ ವಿಭಜನೆ ಆಗದಂತೆ ತಡೆಯುವಲ್ಲಿ ಶೆಟ್ಟರ್​ ಯಶಸ್ವಿಯಾಗಿದ್ದು, ಜಾರಕಿಹೊಳಿ ಸಹೋದರರನ್ನು ಜೊತೆಯಾಗಿಟ್ಟುಕೊಂಡು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹೋಗದಂತೆ ಎಚ್ಚರವಹಿಸಿದ್ದಾರೆ. ಮಂಗಲಾ ಅಂಗಡಿಗೆ ಟಿಕೆಟ್‌ ನೀಡುವಂತೆ ಹೈಕಮಾಂಡ್‌ ಮನವೊಲಿಸುವ ಮೂಲಕ ಕ್ಷೇತ್ರದ ಬಿಜೆಪಿ ನಾಯಕರಲ್ಲಿ ಒಡಕು ಮೂಡದಂತೆ ತಡೆಯುವಲ್ಲಿ ಯಶಸ್ವಿಯಾದರು. ಎಲ್ಲಾ ಜನಪ್ರತಿನಿಧಿಗಳನ್ನು ಒಗ್ಗಟ್ಟಾಗಿ ಶ್ರಮಿಸುವಂತೆ ಮಾಡಿದ್ದು ಸಚಿವ ಜಗದೀಶ್‌ ಶೆಟ್ಟರ್‌ ಎನ್ನುವ ಮಾತು ಬಿ.ಜೆ.ಪಿ ಮೂಲಗಳಿಂದ ತಿಳಿದು ಬಂದಿದೆ.

ಉಪಚುನಾವಣೆ ಘೋಷಣೆ ಆದ ನಂತರ ಕ್ಷೇತ್ರದಲ್ಲೇ ಇದ್ದ ಶೆಟ್ಟರ್‌, ರಾಜ್ಯದ ಪ್ರತಿಯೊಬ್ಬ ಪ್ರಮುಖ ನಾಯಕರಿಂದ ಪ್ರಚಾರ ಮಾಡಿಸುವಲ್ಲಿ ಯಶ ಕಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪರನ್ನು ಎರಡು ಬಾರಿ ಪ್ರಚಾರಕ್ಕೆ ಕರೆಸಿಕೊಳ್ಳುವ ಮೂಲಕ ಕ್ಷೇತ್ರದ ಲಿಂಗಾಯತ ಮತಗಳನ್ನು ಸೆಳೆಯುವ ಕಾರ್ಯ ಮಾಡಿದ್ದರು. ಸುರೇಶ್‌ ಅಂಗಡಿ ಒಬ್ಬ ಅಜಾತ ಶತ್ರು, ಈ ಗುಣವನ್ನಿಟ್ಟುಕೊಂಡು ಶೆಟ್ಟರ್ ಒಗ್ಗಟ್ಟಿನ ಸೂತ್ರವನ್ನು ಹೆಣೆದರು. ಈ ಮೂಲಕ ರೋಚಕ ವಿಜಯಕ್ಕೆ ಕಾರಣರಾಗಿದ್ದಾರೆ ಎನ್ನುವ ಮಾತುಗಳು ಕೂಡಾ ಹರಿದಾಡುತ್ತಿವೆ.

ಅಥಣಿ ಹಾಗೂ ಕಾಗವಾಡ ಉಪಚುನಾವಣೆಯ ಉಸ್ತುವಾರಿ ವಹಿಸಿದ್ದ ಶೆಟ್ಟರ್‌, ಲಿಂಗಾಯತ ಸಮುದಾಯದ ವೋಟ್‌ಗಳನ್ನು ಕೇಂದ್ರೀಕರಿಸುವ ಮೂಲಕ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವಂತೆ ಮಾಡುವಲ್ಲಿ ಯಶಸ್ವಿಯಾದರು ಎನ್ನಲಾಗುತ್ತಿದೆ.

ABOUT THE AUTHOR

...view details