ಬೆಂಗಳೂರು:ದೇವಸ್ಥಾನ, ಮಸೀದಿಗಳಿಗೆ ನಿರ್ದಿಷ್ಟ ಶಬ್ದ ಮಾಡುವ ಸ್ಪೀಕರ್ ಬಳಕೆಗೆ ಸೂಚನೆ ನೀಡಿದ್ದು, ಎಲ್ಲರೂ ಆ ನಿಯಮ ಪಾಲನೆ ಮಾಡಬೇಕು. ಮಂದಿರ ಇರಬಹುದು, ಮಸೀದಿ ಇರಬಹುದು ಎಲ್ಲ ಕಡೆ ಸರ್ಕಾರದ ಆದೇಶ ಪಾಲನೆ ಕಡ್ಡಾಯ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಈಗಾಗಲೇ ಆದೇಶ ಇದ್ದರೂ ನಿಯಮ ಪಾಲನೆ ಆಗಿರಲಿಲ್ಲ. ಈಗ ನೋಟಿಸ್ ಜಾರಿ ಮಾಡಿದ ಬಳಿಕ ದೇವಸ್ಥಾನಗಳಿಗೂ ಅನ್ವಯ ಆಗಲಿದೆ. ಈವರೆಗೂ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ. ಆಜಾನ್ ಹಾಗೂ ಸುಪ್ರಭಾತ ನಿರ್ಧಿಷ್ಟ ಸಮಯದಲ್ಲೇ ನಡೆಯಬೇಕಿದೆ ಎಂದರು.
ರಾತ್ರಿ, ಹಗಲು ನಿರ್ದಿಷ್ಟ ಅವಧಿಯಲ್ಲಿ ಮೈಕ್ ಹಾಕಬೇಕು. ಒಂದು ವೇಳೆ ಪಾಲನೆ ಆಗಿಲ್ಲವೆಂದರೆ ತಪ್ಪಾಗುತ್ತದೆ. 2002ರಲ್ಲಿ ಮಂದಿರ, ಮಸೀದಿ ಎಷ್ಟು ಡೆಸಿಬಲ್ ಮೈಕ್ ಹಾಕಬೇಕೆಂದು ಕೋರ್ಟ್ ಹೇಳಿದೆ. ಸುತ್ತೋಲೆ ಹೊರಡಿಸಿರುವುದು ನಮಗೆ ಅನ್ವಯ ಆಗುತ್ತದೆ. ಪೊಲೀಸ್ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಬೆಳಗ್ಗೆ ಸುಪ್ರಭಾತ, ಮಸೀದಿಯಲ್ಲಿ ಅಜಾನ್ ನಡೆಯುತ್ತದೆ. ಸಮಯ ಮಿತಿಗೆ ಅನುಗುಣವಾಗಿ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ನಿರ್ಧಾರ