ಬೆಂಗಳೂರು:ವಕ್ಫ್ ಆಸ್ತಿಗಳ ಸಮೀಕ್ಷೆ ಕೈಗೊಂಡಿದ್ದು 1,05,855 ಎಕರೆ ವಕ್ಫ್ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ಒಟ್ಟು 8,480 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದೆ ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, 1964-75ರಲ್ಲಿ ಮಾಡಿದ ಮೊದಲ ಸಮೀಕ್ಷೆಯಲ್ಲಿ 1,02,120 ಎಕರೆ ಜಮೀನನ್ನು ವಕ್ಫ್ ಕಾಯ್ದೆಯಡಿ ನೋಂದಾಯಿಸಲಾಗಿದೆ. 2ನೇ ಸಮೀಕ್ಷೆಯಲ್ಲಿ 3,735 ಎಕರೆಯ 12,054 ಸ್ಥಿರಾಸ್ತಿಯನ್ನು ನೋಂದಾಯಿಸಲಾಗಿದೆ. ಒಟ್ಟು 8,480 ಎಕರೆ ವಕ್ಫ್ ಜಮೀನು ಒತ್ತುವರಿಯಾಗಿದೆ. ಈ ಪೈಕಿ 1,189 ಪ್ರಕರಣಗಳು ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದರು.
8,480 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದೆ: ಸಚಿವೆ ಶಶಿಕಲಾ ಜೊಲ್ಲೆ ಹಜ್ ವಕ್ಫ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಹಜ್ ಯಾತ್ರೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಹಿಂದೂ ದೇಗುಲಗಳ ಬಗ್ಗೆಯೂ ಚರ್ಚೆಯಾಗಿದೆ. ಭಕ್ತರಿಗೆ ಉತ್ತಮ ದರ್ಶನಕ್ಕೆ ವ್ಯವಸ್ಥೆ ಮಾಡುವುದು. ಮೂಲಸೌಕರ್ಯ ಒದಗಿಸುವ ಬಗ್ಗೆ ಚರ್ಚಿಸಿದ್ದೇವೆ. ದೇಗುಲದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ. ಯಾತ್ರಿ ನಿವಾಸಗಳ ಕೊರತೆ ಬಗ್ಗೆ ಗಮನಹರಿಸಿದ್ದೇವೆ.
ಸಪ್ತಪದಿ ಕಾರ್ಯಕ್ರಮ ಮುಂದುವರಿಯಲಿದೆ. ಕೋವಿಡ್ನಿಂದಾಗಿ 2 ವರ್ಷದಿಂದ ಯಶಸ್ವಿಯಾಗಿಲ್ಲ. ಈ ಸಪ್ತಪದಿ ಯೋಜನೆ ಬಗ್ಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಅರಿವು ಇಲ್ಲ. ಹಾಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತೇನೆ ಎಂದು ಸಚಿವೆ ಹೇಳಿದರು.
ಇದನ್ನೂ ಓದಿ:ಸಿಕ್ಕ ಅಧಿಕಾರ ಸರಿಯಾಗಿ ಬಳಸದಿದ್ದರೆ ಅಯೋಗ್ಯನಾಗುವೆ: ಸಚಿವ ಈಶ್ವರಪ್ಪ