ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದಾಗ ಬಿಜೆಪಿಗರು ಕೈಕಟ್ಟಿ ಕೂರುವುದಕ್ಕಾಗುತ್ತಾ: ರೇಣುಕಾಚಾರ್ಯ ಪ್ರಶ್ನೆ - minister Renukacharya spoke against siddaramaiah

ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದಾಗ ಬಿಜೆಪಿ ಶಾಸಕರು ಕೈಕಟ್ಟಿ ಕೂರುವುದಕ್ಕಾಗುತ್ತಾ?, ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರ ಬಾಯಲ್ಲಿ ಇಂತಹ ಪದಗಳು ಬರಬಾರದು. ನಾಲಿಗೆ ಇದೆ ಎಂದು ಹಗುರವಾಗಿ ಮಾತನಾಡಿದರೆ, ಜನ ನಿಮ್ಮನ್ನು ಒಪ್ಪಲ್ಲ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

minister-renukacharya-statement-against-siddaramaiah
ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದಾಗ ಬಿಜೆಪಿ ಶಾಸಕರು ಕೈಕಟ್ಟಿ ಕೂರುವುದಕ್ಕಾಗತ್ತಾ ? : ರೇಣುಕಾಚಾರ್ಯ

By

Published : Jun 9, 2022, 3:41 PM IST

ಬೆಂಗಳೂರು : ಆರ್ ಎಸ್ ಎಸ್ ಬಗ್ಗೆ ಲಘುವಾಗಿ ಮಾತನಾಡಿ ಸೋನಿಯಾ ಗಾಂಧಿಯನ್ನು ಮೆಚ್ಚಿಸಹುದೆಂದು ಸಿದ್ದರಾಮಯ್ಯ ಅಂದುಕೊಂಡಿದ್ದಾರೆ. ಸೀಳುನಾಯಿಗಳು ಎಂದು ಹೇಳ್ತಾರೆ. ನಾಯಿಗೆ ಇರುವ ನಿಯತ್ತು ಬೇರೆಯವರಿಗೆ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದಾಗ ಬಿಜೆಪಿ ಶಾಸಕರು ಕೈಕಟ್ಟಿ ಕೂರುವುದಕ್ಕಾಗುತ್ತಾ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದಾಗ ಬಿಜೆಪಿ ಶಾಸಕರು ಕೈಕಟ್ಟಿ ಕೂರುವುದಕ್ಕಾಗತ್ತಾ? ರೇಣುಕಾಚಾರ್ಯ ಪ್ರಶ್ನೆ

ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರ ಬಾಯಲ್ಲಿ ಇಂತಹ ಪದಗಳು ಬರಬಾರದು. ಸಂಘ ಪರಿವಾರ ಭಾರತ ಮಾತೆಯ ಗೌರವ ಉಳಿಸುತ್ತಿರುವ ಸಂಸ್ಥೆ, ನಾಲಿಗೆ ಇದೆ ಎಂದು ಹಗುರವಾಗಿ ಮಾತನಾಡಿದರೆ ಜನ ನಿಮ್ಮನ್ನು ಒಪ್ಪಲ್ಲ ಎಂದು ಕಿಡಿಕಾರಿದರು.ಲೋಕಸಭೆಯಲ್ಲಿ ನಿಮಗೆ ಸ್ಥಾನವೇ ಇಲ್ಲ. ಈ ದೇಶದ ಜನ ಸ್ಪಷ್ಟವಾಗಿ ಬಿಜೆಪಿಗೆ ಬಹುಮತ ನೀಡಿದ್ದಾರೆ. 2023 ರ ಚುನಾವಣೆ ವೇಳೆಗೆ ಚಡ್ಡಿ ಬಗ್ಗೆ ಮಾತನಾಡಿದರೆ ಏನಾಗುತ್ತದೆಂದು ನಿಮಗೆ ಅರ್ಥ ಆಗುತ್ತದೆ. ಹಗುರವಾಗಿ ನಾಲಿಗೆ ಹರಿಬಿಟ್ಟರೆ ಜನರೇ ನಿಮಗೇ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಏಕಾಂಗಿಯಾಗಿದ್ದೇನೆಂದು ಹತಾಶೆಯಿಂದ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂದು ಒಂದು ಗುಂಪು, ಪರಮೇಶ್ವರ್ ಸಿಎಂ ಆಗಬೇಕು ಎಂದು ಇನ್ನೊಂದು ಗುಂಪು, ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಮತ್ತೊಂದು ಗುಂಪಿನವರು ಹೇಳ್ತಾರೆ. ನಮ್ಮಲ್ಲಿ ಯಾವುದೇ ಗುಂಪಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿ ನಿಮ್ಮನ್ನು ಸೋಲಿಸುತ್ತೇವೆ. ಸಿದ್ದರಾಮಯ್ಯ ಬೆಂಬಲಕ್ಕೆ ಒಬ್ಬರೇ ಒಬ್ಬ ಶಾಸಕರು ಇಲ್ಲ. ರಾಜಕೀಯವಾಗಿ ನಿಮ್ಮನ್ನು ಮುಗಿಸುತ್ತಾರೆ. ಚಡ್ಡಿ ಚಡ್ಡಿ ಅಂತ ಹೇಳ್ತೀರಲ್ಲ, ಚಡ್ಡಿ ಹಾಕಿಕೊಂಡು ಸಂಘಕ್ಕೆ ಬನ್ನಿ. ಇಲ್ಲಿ ಬಂದು ನಮಸ್ತೆ ಸದಾ ವತ್ಸಲೆ ಅಂತ ಹೇಳಲಿ.. ಆಗ ಆರ್ ಎಸ್ ಎಸ್ ಏನು ಅನ್ನೋದು ಗೊತ್ತಾಗುತ್ತದೆ ಎಂದು ಹೇಳಿದರು.

ಪಠ್ಯಪುಸ್ತಕ ಪರಿಷ್ಕರಣೆ ರದ್ದು ಮಾಡಬೇಕೆಂದು ಕಾಂಗ್ರೆಸ್ ಹೋರಾಟ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಅನೇಕ ಸಂಘಟನೆಗಳು, ಮಠಾಧೀಶರು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಕೇಸರಿಕರಣ ಮಾಡಿದರೆ ತಪ್ಪೇನು?. ನೀವು ಮಠಗಳಿಗೆ ಹೋಗಲ್ಲವಾ, ನೀವೇ ಮಾಡಿದ ಸಮಿತಿಗಳು ತಪ್ಪು ಮಾಡಿವೆ. ಅದರ ಬಗ್ಗೆ ಧ್ವನಿ ಎತ್ತಲಿಲ್ಲ. ಈಗಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details