ಬೆಂಗಳೂರು :ದೈವ ಭಕ್ತರಾಗಿರುವ ಸಚಿವ ಹೆಚ್ ಡಿ ರೇವಣ್ಣನವರು ಮೈತ್ರಿ ಸರ್ಕಾರ ಉಳಿವಿಗಾಗಿ ದೇವರ ಮೊರೆ ಹೋಗಿದ್ದಾರೆ.
ಮೈತ್ರಿ ಸರ್ಕಾರ ಉಳಿಯಲೆಂದು ಗಣಪತಿಗೆ ಮೃತ್ಯುಂಜಯ ಹೋಮ ಮಾಡಿಸಿದ ಸಚಿವ ರೇವಣ್ಣ.. - Kannada news
ಕಳೆದ ಐದು ದಿನಗಳಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ ಹೆಚ್.ಡಿ ರೇವಣ್ಣ, ಮೊನ್ನೆ ತಿರುಪತಿಗೆ ಹೋಗಿ ವಿಶೇಷ ಪೂಜೆ ಮಾಡಿಸಿ ಬಂದಿದ್ದಾರೆ. ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಲು ಸ್ಪೀಕರ್ ಅವರನ್ನು ಕೋರಿದ್ದು, ಗೆಲುವಿಗಾಗಿ ಈ ಹೋಮ ಮಾಡಿಸಲಾಗುತ್ತಿದೆಯಂತೆ.
ಸಚಿವ ರೇವಣ್ಣ
ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿರುವ ಗಣಪತಿ ದೇವಾಲಯದಲ್ಲಿ ಹೆಚ್ ಡಿ ರೇವಣ್ಣ ಮೃತ್ಯುಂಜಯ ಹೋಮ ಮಾಡಿಸುತ್ತಿದ್ದಾರೆನ್ನಲಾಗಿದೆ. ಸರ್ಕಾರ ಸುಭದ್ರವಾಗಿರಲು ಎಂಟು ಅರ್ಚಕರಿಂದ ಮೃತ್ಯುಂಜಯ ಹೋಮ, ಗಣ ಹೋಮ ಮಾಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಐದು ದಿನಗಳಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ ಹೆಚ್ ಡಿ ರೇವಣ್ಣ, ಮೊನ್ನೆ ತಿರುಪತಿಗೆ ಹೋಗಿ ವಿಶೇಷ ಪೂಜೆ ಮಾಡಿಸಿ ಬಂದಿದ್ದಾರೆ. ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಲು ಸ್ಪೀಕರ್ ಅವರನ್ನು ಕೋರಿದ್ದು, ಗೆಲುವಿಗಾಗಿ ಈ ಹೋಮ ಮಾಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.