ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಪಕ್ಷದಿಂದ ಅಹಿಂದ ಸಮಾವೇಶ ಮಾಡಲಿ: ಸಚಿವ ರಮೇಶ್ ಜಾರಕಿಹೊಳಿ ಸವಾಲ್​ - ಸಿದ್ದರಾಮಯ್ಯ

ಜಲಸಂಪನ್ಮೂಲ ಇಲಾಖೆ ಹಲವು ಪ್ರಸ್ತಾವನೆ ಕೊಟ್ಟಿದ್ದೇವೆ. ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಕೊಡುವ ನಿರೀಕ್ಷೆ ಇದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮಾಡಿಕೊಡ್ತೇನೆ ಅಂತ ಸಿಎಂ ಹೇಳಿದ್ದಾರೆ. ನೀರಾವರಿಗೆ ಆದ್ಯತೆ ನೀಡಿದ್ರೆ ಎಲ್ಲ ಸಮಸ್ಯೆಗಳೂ ಪರಿಹಾರ ಆಗುತ್ತವೆ ಎಂದಿದ್ದಾರೆ.

ರಮೇಶ್ ಜಾರಕಿಹೊಳಿ& ಸಿದ್ದರಾಮಯ್ಯ
ರಮೇಶ್ ಜಾರಕಿಹೊಳಿ& ಸಿದ್ದರಾಮಯ್ಯ

By

Published : Feb 11, 2021, 4:07 PM IST

ಬೆಂಗಳೂರು: ಪಕ್ಷದಿಂದ ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡುತ್ತಿದ್ದೇವೆ ಅಂತ ಹೇಳಲಿ, ಆಗ ಗೊತ್ತಾಗುತ್ತೆ ಕಾಂಗ್ರೆಸ್ ಅಹಿಂದಕ್ಕೆ ಸೇರಿರೋದು ಅಂತ ಎಂದು ಸಚಿವ ರಮೇಶ್ ಜಾರಕಿಹೊಳಿ ಸವಾಲು ಹಾಕಿದರು.

ಸಿಎಂ ಜೊತೆಗಿನ ಬಜೆಟ್ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಂದ ಅಹಿಂದ ಸಮಾವೇಶ ಆರಂಭ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅಹಿಂದ ಸಮಾವೇಶವನ್ನು ಪಕ್ಷಾತೀತವಾಗಿ ಅವರು ಮಾಡುತ್ತಿದ್ದಾರೆ. ಈಗ ಜಾತಿ, ಅಹಿಂದ ಏನೂ ಇಲ್ಲ. ಈಗ ಏನಿದ್ದರೂ ಹಿಂದುತ್ವ ಮಾತ್ರ ಎಂದು ತಿಳಿಸಿದರು.

ಸಿದ್ದರಾಮಯ್ಯ ಪಕ್ಷದಿಂದ ಅಹಿಂದ ಸಮಾವೇಶ ಮಾಡಲಿ: ಸಚಿವ ರಮೇಶ್ ಜಾರಕಿಹೊಳಿ ಸವಾಲ್​

ಬಿಜೆಪಿಯಲ್ಲಿ ಅನುದಾನ ಸಂಬಂಧ ಹೊಂದಾಣಿಕೆ ಪಾಲಿಟಿಕ್ಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಾಪ, ವಿಪಕ್ಷದವರ ಕ್ಷೇತ್ರಗಳೂ ಅಭಿವೃದ್ಧಿಯಾಗಲಿ. ಅವರ ಕ್ಷೇತ್ರಗಳಿಗೂ ಒಳ್ಳೆಯದು ಮಾಡಲಿ. ಅನುದಾನ, ಅಭಿವೃದ್ಧಿ ವಿಚಾರದಲ್ಲಿ ಪಕ್ಷ ನೋಡಬಾರದು. ಅದು ಒಳ್ಳೆಯ ಸಂಪ್ರದಾಯ. ಈ ಸಂಪ್ರದಾಯ ಮುಂದುವರೆಯಲಿ ಎಂದು ತಿಳಿಸಿದರು.

ಜಲಸಂಪನ್ಮೂಲ ಇಲಾಖೆ ಹಲವು ಪ್ರಸ್ತಾವನೆ ಕೊಟ್ಟಿದ್ದೇವೆ. ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಕೊಡುವ ನಿರೀಕ್ಷೆ ಇದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮಾಡಿಕೊಡ್ತೇನೆ ಅಂತ ಸಿಎಂ ಹೇಳಿದ್ದಾರೆ. ನೀರಾವರಿಗೆ ಆದ್ಯತೆ ನೀಡಿದ್ರೆ ಎಲ್ಲ ಸಮಸ್ಯೆಗಳೂ ಪರಿಹಾರ ಆಗುತ್ತವೆ. ಕೋವಿಡ್ ಸಂದರ್ಭದಲ್ಲಿ ನೀರಾವರಿ ಇಲಾಖೆ ಕಾಮಗಾರಿಗಳು ನಡೆಯಲಿಲ್ಲ. ಹೊಸ ಯೋಜನೆಗಳನ್ನೂ ಕೇಳಿದ್ದೇವೆ. ನೋಡೋಣ ಕೊಡ್ತಾರಾ ಇಲ್ವಾ ಅಂತ. ಇಷ್ಟೇ ಅಂತ ಕೇಳಿಲ್ಲ, ಹೆಚ್ಚು ಅನುದಾನ ಕೇಳಿದ್ದೇವೆ ಎಂದರು.

ಸಿಎಂ ಮೀಸಲಾತಿ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸ್ತಾರೆ

ವಾಲ್ಮೀಕಿ ಸಮುದಾಯದಿಂದ ಮೀಸಲಾತಿಗೆ ಗಡುವು ವಿಚಾರವಾಗಿ ಮಾತನಾಡಿದ ಅವರು, ಬಿಎಸ್​​​ವೈ ಹುಟ್ಟು ಹೋರಾಟಗಾರರು. ಇದನ್ನು ಸಿಎಂ ಸಮರ್ಥವಾಗಿ ನಿಭಾಯಿಸ್ತಾರೆ. ಸ್ವಾಮೀಜಿಗಳು ಗಡುವು ಕೊಟ್ಟಿರಬಹುದು. ಆದರೆ ಅದನ್ನು ಸಿಎಂ ಸಮರ್ಥವಾಗಿ ನಿಭಾಯಿಸಿ ಸರಿ ಪಡಿಸ್ತಾರೆ ಎಂದರು.

ಇದನ್ನೂ ಓದಿ:ಬಡಜನರ ಜೇಬಿಗೆ ಬೀಳುತ್ತಿದೆ ಕತ್ತರಿ: ತಾಳೆ ಎಣ್ಣೆ ಮೇಲಿನ ಸೆಸ್ ತೆಗೆಯಲು ಆಗ್ರಹ

ABOUT THE AUTHOR

...view details