ಕರ್ನಾಟಕ

karnataka

ETV Bharat / state

ನಮ್ಮ ತಂಟೆಗೆ ಬಂದರೆ ರಾಮನ ಭಂಟ ಆಂಜನೇಯನ ಅವತಾರ ತಾಳಬೇಕಾಗುತ್ತೆ: ಸಚಿವ ಅಶೋಕ್ ಎಚ್ಚರಿಕೆ - belgavi issue latest updates

ನಮ್ಮ ತಂಟೆಗೆ ಬರಬೇಡಿ. ಬಂದರೆ ರಾಮನ ಭಂಟ ಆಂಜನೇಯನ ಅವತಾರ ತಾಳಬೇಕಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಸಚಿವ ಆರ್.ಅಶೋಕ್ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಗೆ ಎಚ್ಚರಿಕೆ ನೀಡಿದ್ದಾರೆ.

minister r ashok warns maharastra cm Uddhav  Thackeray
ಸಚಿವ ಆರ್.ಅಶೋಕ್ ಎಚ್ಚರಿಕೆ

By

Published : Jan 18, 2021, 2:12 PM IST

ಬೆಂಗಳೂರು: ಮಹಾರಾಷ್ಟ್ರ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಹೇಳಿಕೆ ನೀಡ್ತಾ ಇದ್ದಾರೆ ಎಂದು ಆರ್.ಅಶೋಕ್ ಕಿಡಿ ಕಾರಿದರು.

ಸಚಿವ ಆರ್.ಅಶೋಕ್ ಎಚ್ಚರಿಕೆ
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರಕ್ಕೆ ಜನಬೆಂಬಲ ಇಲ್ಲ‌. ಚುನಾವಣಾ ಪೂರ್ವದಲ್ಲಿ ಆದ ಮೈತ್ರಿ ಪ್ರಕಾರ ಸರ್ಕಾರ ಆಗ್ಲಿಲ್ಲ. ಜನ ಕೊಟ್ಟ ತೀರ್ಪು ಬೇರೆ ಆಗಿತ್ತು. ಜನರ ಬೆಂಬಲ ಕಳೆದುಕೊಂಡು ಠಾಕ್ರೆ ಭಾವನಾತ್ಮಕವಾದ ವಿಚಾರ ಮಾತಾಡ್ತಾರೆ. ‌ಪಾಕಿಸ್ತಾನದಲ್ಲಿ ರಾಜಕೀಯ ಅತಂತ್ರ ಆದಾಗ ಅಲ್ಲಿನ ಪ್ರಧಾನಿ ಹೀಗೆ ಹೇಳಿಕೆ ಕೊಡ್ತಾರೆ. ಈಗ ಮಹಾರಾಷ್ಟ್ರದಲ್ಲೂ ಹಾಗೆ. ಠಾಕ್ರೆ ಕೇವಲ ತೆವಲಿಗೆ ಮಾತಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜನರು ಸರ್ಕಾರವನ್ನು ನಂಬುತ್ತಿಲ್ಲ. ಕೋವಿಡ್ ನಿರ್ವಹಣೆ ಸೇರಿ ಬೇರೆ ಬೇರೆ ವಿಚಾರಗಳಲ್ಲಿ ಠಾಕ್ರೆ ಜನಬೆಂಬಲ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ನಾವು ಸೊಪ್ಪು ಹಾಕುವುದಿಲ್ಲ. ನಮ್ಮ ತಂಟೆಗೆ ಬರಬೇಡಿ. ಬಂದರೆ ರಾಮನ ಭಂಟ ಆಂಜನೇಯನ ಅವತಾರ ತಾಳಬೇಕಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಎಚ್ಚರಿಸಿದರು. ಸ್ವಾರ್ಥಕ್ಕಾಗಿ ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ಕಿಚ್ಚು ಹಚ್ಚುವ ಹೀನ ಕೆಲಸವನ್ನು ಮಹಾ ಸಿಎಂ ಮಾಡಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಮಹಾಜನ್ ವರದಿಯಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ತೀಟೆಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅದರ ಬಗ್ಗೆ ಮಾತನಾಡುವ ಯಾವ ನೈತಿಕತೆ ಮಹಾರಾಷ್ಟ್ರ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details