ಕರ್ನಾಟಕ

karnataka

ETV Bharat / state

ಚಾಮರಾಜಪೇಟೆಯ ಈದ್ಗಾ ಗೋಡೆ ಕೆಡವಲು ಯಾವುದೇ ಅವಕಾಶವಿಲ್ಲ: ಕಂದಾಯ ಸಚಿವ ಅಶೋಕ್ - Etv Bharat Kannada

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡುವುದು ಯಾರದ್ದೋ ವೈಯಕ್ತಿಕ ಸಮಸ್ಯೆ ಅಲ್ಲ. ದೇಶದ ಘನೆತಯ ಪ್ರಶ್ನೆ. ಎಲ್ಲರೂ ಕೂಡ ಭಾಗಿಯಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವಯನ್ನು ಸಂಭ್ರಮದಿಂದ ಮಾಡಬೇಕಾಗಿದೆ ಎಂದು ಸಚಿವ ಅಶೋಕ್​ ತಿಳಿಸಿದರು.

minister-r-ashok-visits-idgah-maidan-in-chamarajpet-bengaluru
ಚಾಮರಾಜಪೇಟೆಯ ಈದ್ಗಾ ಗೋಡೆ ಕೆಡವಲು ಯಾವುದೇ ಅವಕಾಶವಿಲ್ಲ: ಕಂದಾಯ ಸಚಿವ ಅಶೋಕ್

By

Published : Aug 13, 2022, 8:23 PM IST

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದ ಒಳಗಡೆ ಬಿಬಿಎಂಪಿ ಕಟ್ಟಡ ಇದೆ. ಅಶ್ವಥ ಕಟ್ಟೆ ಇದೆ, ಸಾಕಷ್ಟು ಮರಗಳಿವೆ. ಅದ್ಯಾವುದು ಬದಲಾವಣೆ ಆಗಲ್ಲ. ಹಾಗೆಯೇ ಮೈದಾನದ ಒಳಗಡೆ ಇರುವ ಈದ್ಗಾ ಕಟ್ಟಡ ಕೂಡ ಬದಲಾವಣೆ ಆಗುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ಮಾಡಲಾಗುತ್ತಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಿದ್ಧತೆ ಕುರಿತು ಸಚಿವ ಆರ್.ಅಶೋಕ್ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂತರ, ಭದ್ರತೆ, ಅಗತ್ಯ ಕ್ರಮಗಳ‌ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡುವುದು ಯಾರದ್ದೋ ವೈಯಕ್ತಿಕ ಸಮಸ್ಯೆ ಅಲ್ಲ. ದೇಶದ ಘನೆತಯ ಪ್ರಶ್ನೆ. ಎಲ್ಲರೂ ಕೂಡ ಭಾಗಿಯಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯನ್ನು ಸಂಭ್ರಮದಿಂದ ಮಾಡಬೇಕಾಗಿದೆ ಎಂದರು‌.

ಚಾಮರಾಜಪೇಟೆಯ ಈದ್ಗಾ ಗೋಡೆ ಕೆಡವಲು ಯಾವುದೇ ಅವಕಾಶವಿಲ್ಲ: ಕಂದಾಯ ಸಚಿವ ಅಶೋಕ್

ಎಲ್ಲ ಸಮುದಾಯವೂ ಸೇರಿಕೊಂಡು ಸ್ವಾತಂತ್ರ್ಯ ದಿನಾಚರಣೆ ಮಾಡಬೇಕು. ಹಿಂದೆ ಯಾಕೆ ಮಾಡಿಲ್ಲ ಅಂತ ಪ್ರಶ್ನೆ ಕೇಳಿದ್ದಾರೆ. ನಾನು ಈಗ ಕಂದಾಯ ಸಚಿವ ಆಗಿದ್ದೇನೆ.‌ ಇದೇ ವರ್ಷ 75ನೇ ವರ್ಷ ಆಚರಣೆ ಇದೆ. ಹೀಗಾಗಿ ನಾನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದೇನೆ ಎಂದು ವಿವರಿಸಿದರು.

ಪಾಕಿಸ್ತಾನ ಭಯೋತ್ಪಾದಕರ ಬೆದರಿಕೆ ಇರುವ ಕಾಶ್ಮೀರದಲ್ಲೇ ನಾವು ಧ್ವಜಾರೋಹಣ ಮಾಡಿದ್ದೇವೆ. ಇಲ್ಲೂ ಕೂಡ ಮಾಡುತ್ತೇವೆ. ಎಲ್ಲ ಸಮುದಾಯದವರು ಸೇರಿಕೊಂಡು ಆಚರಣೆ ಮಾಡೋಣ. ಇದು ಸಂಪೂರ್ಣ ಸರ್ಕಾರದ ಕಾರ್ಯಕ್ರಮ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಸಂಸದ ಪಿ‌.ಸಿ. ಮೋಹನ್ ವೇದಿಕೆ ಮೇಲೆ ಹಾಜರಾಗುತ್ತಾರೆ. ಮೊದಲು ಧ್ವಜಾರೋಹಣ ಆದ ಮೇಲೆ ರಾಷ್ಟ್ರಗೀತೆ, ನಂತರ ನಾಡಗೀತೆ ಹಾಡಿ ದೇಶ ಭಕ್ತಿ ಮೆರೆಯೋಣ ಎಂದು ಸಚಿವ ಅಶೋಕ ಕರೆ ನೀಡಿದರು.

ಇದೇ ವೇಳೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಚಾಮರಾಜಪೇಟೆ ಈದ್ಗಾ ಮೈದಾನ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚಿಸಿದ್ದೇವೆ. ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಆ.15ಕ್ಕೆ ಸಚಿವರಿಂದ ಧ್ವಜಾರೋಹಣ:ಕಂದಾಯ ಸಚಿವ ಆರ್.ಅಶೋಕ್ ಆ.15ರಂದು ಧ್ವಜಾರೋಹಣ ಮಾಡಲಿದ್ದು, ಸಂಸದ ಪಿ.ಸಿ. ಮೋಹನ್, ಶಾಸಕ ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ತರ ವಿಭಾಗದ ಎಸಿ‌‌ ಡಾ.ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ‌ ಜೊತೆಗೆ ಪೊಲೀಸ್ ಪಥಸಂಚಲನ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಿಂದಲೂ ವಿವಿಧ ಪ್ರದರ್ಶನ ನಡೆಯಲಿದೆ.

ಇದನ್ನೂ ಓದಿ:ಹಿಂದೂ ಮತ್ತು ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿಯಾದ ವಿಭಜನೆಯ ದುರಂತದ ಸ್ಮರಣೆಯ ದಿನ

ABOUT THE AUTHOR

...view details