ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯನವರ ಬುಡ ಅಲ್ಲಾಡತೊಡಗಿದೆ; ಆರ್​. ಅಶೋಕ್

ಈ ಚುನಾವಣೆಯಲ್ಲಿ ತಮ್ಮ ಹಾಗೂ ವಿಜಯೇಂದ್ರ ಅವರ ಪಾತ್ರದ ಬಗ್ಗೆ ಮಾತನಾಡಿರುವ ಅಶೋಕ್, ಯಡಿಯೂರಪ್ಪನವರು ನನ್ನ ಮೇಲೆ ನಂಬಿಕೆ ಇಟ್ಟು ಕೊಟ್ಟ ಜವಾಬ್ದಾರಿಯನ್ನು ನಾನು ಸರಿಯಾಗಿ ನಿರ್ವಹಿಸಿದ್ದೇನೆ. ನಾನು ಆಗಲೆ ಹೇಳಿದ್ದೆ, ಐವತ್ತು ಸಾವಿರ ಅಂತರದಿಂದ ಗೆಲ್ಲುತ್ತೇವೆ ಎಂದು. ಅದರಂತೆ ಪ್ರಚಂಡ ಬಹುಮತದಿಂದ ಗೆದ್ದಿದ್ದೇವೆ ಎಂದರು.

minister-r-ashok-talk-about-rr-nagara-by-election-news
ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ ಆರ್​​ ಅಶೋಕ್

By

Published : Nov 10, 2020, 5:36 PM IST

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಖದರ್ ಏನು... ರಾಜಾ ಹುಲಿ ರಿಯಲ್ ರಾಜಾ ಹುಲಿ ಅನ್ನೋದನ್ನು ಈ ಉಪ ಚುನಾವಣೆ ತೋರಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ ಆರ್​​ ಅಶೋಕ್

ಸಿಎಂ ನಿವಾಸ ಕಾವೇರಿಯಲ್ಲಿ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಬೀಟ್ ಮಾಡಲು ಇವರಿಬ್ಬರೂ (ಸಿದ್ದರಾಮಯ್ಯ, ಡಿಕೆ ಶಿವಕುಮಾರ್) ಬಂದರೂ ಏನೂ ಮಾಡಕ್ಕಾಗಲ್ಲ. ರಾಜಾ ಹುಲಿ ರಾಜಾ ಹುಲಿನೇ ಎಂದು ಘರ್ಜಿಸಿದರು. ಉಪ ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿ ಸ್ಥಾನ ಬದಲಾಗುತ್ತದೆಂದು, ಯಡಿಯೂರಪ್ಪ ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ ಹೇಳಿದ್ದರು. ಆದರೆ, ಇಂದು ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿದ್ದೇವೆ. ಅವರ ಭವಿಷ್ಯದ ಅಂಗಡಿ ಮುಚ್ಚಿದೆ. ಸಿದ್ದರಾಮಯ್ಯ ಅವರ ಬುಡ ಅಲ್ಲಾಡತೊಡಗಿದೆ ಎಂದು ವ್ಯಂಗ್ಯವಾಡಿದರು.

ಈ ಉಪಚುನಾವಣೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅವರ ನಾಯಕತ್ವ ಬದಲಾವಣೆ ಇಲ್ಲ. ಕರ್ನಾಟಕದ ಜನ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಶಬ್ಬಾಶ್ ಗಿರಿ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರು ಇನ್ನು ಎರಡು ವರ್ಷ ತಮ್ಮ ಸ್ಥಾನದಲ್ಲಿ ಇರಲಿದ್ದಾರೆ ಎಂದರು. ಇನ್ನು ಈ ಚುನಾವಣೆಯಲ್ಲಿ ತಮ್ಮ ಹಾಗೂ ವಿಜಯೇಂದ್ರ ಅವರ ಪಾತ್ರದ ಬಗ್ಗೆ ಮಾತನಾಡಿರುವ ಅಶೋಕ್, ಯಡಿಯೂರಪ್ಪನವರು ನನ್ನ ಮೇಲೆ ನಂಬಿಕೆ ಇಟ್ಟು ಕೊಟ್ಟ ಜವಾಬ್ದಾರಿಯನ್ನು ನಾನು ಸರಿಯಾಗಿ ನಿರ್ವಹಿಸಿದ್ದೇನೆ. ನಾನು ಆಗಲೆ ಹೇಳಿದ್ದೆ, ಐವತ್ತು ಸಾವಿರ ಅಂತರದಿಂದ ಗೆಲ್ಲುತ್ತೇವೆ ಎಂದು. ಅದರಂತೆ ಪ್ರಚಂಡ ಬಹುಮತದಿಂದ ಗೆದ್ದಿದ್ದೇವೆ. ಇಲ್ಲಿ ವಿಜಯೇಂದ್ರ ಅಥವಾ ಅಶೋಕ್ ಪಕ್ಷವಲ್ಲ. ಬದಲಿಗೆ ಪಕ್ಷವೇ ತಾಯಿ ನಾವು ಮಕ್ಕಳಿದ್ದಂತೆ. ವಿಜಯೇಂದ್ರ ಸಹ ಶಿರಾದಲ್ಲಿ ಕುಳಿತು ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದು ಹೇಳಿದರು.

ಮುಂದಿನ ಎಲ್ಲಾ ಚುನಾವಣೆಗಳನ್ನು ನಾವು ಗೆಲ್ಲುತ್ತೇವೆ. ಮುಂದಿನ ಬಿಬಿಎಂಪಿ ಚುನಾವಣೆಗೆ ಆರ್​ಆರ್ ನಗರದ ಚುನಾವಣೆ ರೆಡ್ ಕಾರ್ಪೆಟ್ ಇದ್ದಂತೆ. ಅದೇ ರೀತಿ ಶಿರಾ ಉಪಚುನಾವಣೆ ಇನ್ನು ಎರಡು ಕ್ಷೇತ್ರಗಳ ಉಪಚುನಾವಣೆಗೆ ರತ್ನಗಂಬಳಿ ಇದ್ದಂತೆ ಎಂದು ಅಶೋಕ್ ಅಭಿಪ್ರಾಯಪಟ್ಟರು. ಮುಂದಿನ ಚುನಾವಣೆಗಳಿಗೆ ಉಸ್ತುವಾರಿಗಳು ಯಾರಾಗಬೇಕು ಅಂತಾ ಪಕ್ಷ ತೀರ್ಮಾನ ಮಾಡುತ್ತದೆ ಎಂದ ಅವರು, ಈ ಚುನಾವಣೆಯಿಂದ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಪ್ರಬಲರೋ, ಶಿವಕುಮಾರ್ ಪ್ರಬಲರೋ, ಅಶೋಕ್ ಪ್ರಬಲರೋ ಅಂತಾ ತೋರಿಸಿದೆ. ವಿಪಕ್ಷ ನಾಯಕರು ಬದಲಾಗಲು ಈ ಚುನಾವಣೆ ದಿಕ್ಸೂಚಿ ಎಂದರು.

ABOUT THE AUTHOR

...view details