ಬೆಂಗಳೂರು :ಇನ್ನೂ ಮೂರು ದಿನಗಳು ಹೆಚ್ಚು ಮಳೆಯಾಗಬಹುದು. ಹೀಗಾಗಿ, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಇರುವಂತೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಳಜಿ ಕೇಂದ್ರಗಳನ್ನು ತೆರೆದು ವ್ಯವಸ್ಥೆ ಮಾಡುತ್ತಿದ್ದೇವೆ. ವಾಸ್ತವಿಕ ಮಳೆಗಿಂತ 10 ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಿದೆ. ಕಾಣೆಯಾದವರನ್ನು ಪತ್ತೆ ಹಚ್ಚುವುದಕ್ಕೆ ತಂಡಗಳನ್ನು ಕಳುಹಿಸಲಾಗಿದೆ. ಹೆಚ್ಚುವರಿಯಾಗಿ ಕೃಷ್ಣ ನದಿಯಿಂದ ಮತ್ತಷ್ಟು ನೀರು ಹೊರ ಹರಿವು ಜಾಸ್ತಿ ಆಗುವ ಸಾಧ್ಯತೆ ಇದೆ.
ನಾಲ್ಕು ಎನ್ಡಿಆರ್ಎಫ್ ತಂಡಗಳನ್ನು ನಾಲ್ಕು ವಲಯಗಳಿಗೆ ಕಳುಹಿಸಿದ್ದೇವೆ ಎಂದರು. ಉತ್ತರಕನ್ನಡದಲ್ಲಿ ಇಬ್ಬರು ಕಾಣೆಯಾಗಿದ್ದು, ನದಿ ನೀರಲ್ಲಿ ಮುಳುಗಿದ್ದಾರೆ. 18 ತಾಲೂಕುಗಳಿಗೆ ಮಳೆಯಿಂದ ಎಫೆಕ್ಟ್ ಆಗಿದೆ.