ಕರ್ನಾಟಕ

karnataka

ETV Bharat / state

ಕರಾವಳಿ ತೀರದಲ್ಲಿ 40 ಕಡೆ ಸೈಕ್ಲೋನ್ ಮುನ್ಸೂಚನಾ ಕೇಂದ್ರ ಅಳವಡಿಕೆ: ಸಚಿವ ಆರ್ ಅಶೋಕ್ - Minister R Ashok talk about cyclone forecasting center

ರಾಜ್ಯದಲ್ಲಿ ಸಿಡಿಲು ಹೊಡೆದು ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಸಂಬಂಧ ಸರ್ಕಾರ ಒಂದು ತಿಂಗಳಲ್ಲಿ ಸಿಡಿಲು ಹಾವಳಿ ಹೆಚ್ಚಿರುವ ಗ್ರಾಮಗಳಲ್ಲಿ ಮುನ್ಸೂಚನಾ ಸಿಸ್ಟಂನ್ನು ಅಳವಡಿಕೆ ಮಾಡಲಾಗುವುದು. ಈ ವ್ಯವಸ್ಥೆಯಿಂದ ಒಂದೂವರೆ ಕಿ.ಮೀ.ವರೆಗೆ ಕೇಳಿಸುವಷ್ಟು ಮೈಕ್ ಸಿಸ್ಟಂ ಮೂಲಕ ಅಲರ್ಟ್ ಮಾಡಲಾಗುತ್ತದೆ..

minister-r-ashok
ಕಂದಾಯ ಸಚಿವ ಆರ್. ಅಶೋಕ್

By

Published : Aug 17, 2021, 4:35 PM IST

ಬೆಂಗಳೂರು :ಮೀನುಗಾರರಿಗೆ ಹಾಗೂ ಸಮುದ್ರ ತೀರ ಪ್ರದೇಶದ ನಿವಾಸಿಗಳಿಗೆ ಚಂಡಮಾರುತದ ಸಂಬಂಧ ಮುನ್ಸೂಚನೆ ನೀಡುವ ಅಲರ್ಟ್ ಅಲರಾಂ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ‌ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಚಂಡಮಾರುತ ಮುನ್ಸೂಚನೆ ನೀಡುವ ಕೇಂದ್ರಗಳ ಸ್ಥಾಪನೆ ಕುರಿತಂತೆ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ..

ಈ ಕುರಿತು ವಿಧಾನಸೌಧದಲ್ಲಿ ಅವರು ಮಾತನಾಡಿದರು. ಚಂಡಮಾರುತ ಪೀಡಿತ ಕರಾವಳಿ ಪ್ರದೇಶದ ಒಟ್ಟು 40 ಕಡೆಗಳಲ್ಲಿ ಮುನ್ಸೂಚನೆ ನೀಡುವ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದನ್ನು 60ಕ್ಕೆ ಏರಿಕೆ ಮಾಡಲು ಚಿಂತನೆ ನಡೆದಿದೆ.

ಸಮುದ್ರ ತೀರದಲ್ಲಿ 6 ಕಿ.ಮೀ. ವ್ಯಾಪ್ತಿವರೆಗೆ ಸೈರನ್ ನೀಡುವ ವ್ಯವಸ್ಥೆ ಇದಾಗಿದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಅನುದಾನ ಬರಲಿದೆ. ಒಂದೊಂದು ಕೇಂದ್ರಕ್ಕೆ ₹12 ಕೋಟಿ ಖರ್ಚಾಗುತ್ತದೆ ಎಂದರು.

ಈ ಮೂಲಕ ತೀರ ಪ್ರದೇಶದ ಜನರಿಗೆ, ಮೀನುಗಾರಿಕೆಗೆ ಚಂಡಮಾರುತಗಳ ಸುಳಿವನ್ನ ನೀಡಲಾಗುವುದು. ‌ಇದರಿಂದ ಕರಾವಳಿ ಭಾಗದ ಜನರಿಗೆ ಅನುಕೂಲವಾಗಲಿದೆ. ಅದರಲ್ಲೂ ಮೀನುಗಾರರಿಗೆ ಇದು ಹೆಚ್ಚು ಉಪಯೋಗವಾಗಲಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ಗಳಲ್ಲಿ ಸಿಡಿಲು ಮುನ್ಸೂಚನಾ ವ್ಯವಸ್ಥೆ : ರಾಜ್ಯದಲ್ಲಿ ಸಿಡಿಲು ಹೊಡೆದು ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಸಂಬಂಧ ಸರ್ಕಾರ ಒಂದು ತಿಂಗಳಲ್ಲಿ ಸಿಡಿಲು ಹಾವಳಿ ಹೆಚ್ಚಿರುವ ಗ್ರಾಮಗಳಲ್ಲಿ ಮುನ್ಸೂಚನಾ ಸಿಸ್ಟಂನ್ನು ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.

ಈ ವ್ಯವಸ್ಥೆಯಿಂದ ಒಂದೂವರೆ ಕಿ.ಮೀ.ವರೆಗೆ ಕೇಳಿಸುವಷ್ಟು ಮೈಕ್ ಸಿಸ್ಟಂ ಮೂಲಕ ಅಲರ್ಟ್ ಮಾಡಲಾಗುತ್ತದೆ. ಬೆಂಗಳೂರಿನಿಂದ ಕೇಂದ್ರೀಕೃತ ವ್ಯವಸ್ಥೆಯೊಂದಿಗೆ ಸಿಡಿಲು ಬಗ್ಗೆ ಮುನ್ಸೂಚನೆ ನೀಡಲಾಗುತ್ತದೆ. ಪ್ರತಿ ಅಲರ್ಟ್ ಸಿಸ್ಟಂಗೆ ₹1.50ಲಕ್ಷ ವೆಚ್ಚ ತಗುಲಲಿದೆ. ಇದು ಗ್ರಾಮ ಪಂಚಾಯತ್‌ಗಳಲ್ಲಿ ಅಲರ್ಟ್ ಆಗಲಿದೆ ಎಂದು ತಿಳಿಸಿದರು.

ಓದಿ:ಆಗಸ್ಟ್ 19 ರಿಂದ ಶುರುವಾಗಲಿದೆ ದ್ವಿತೀಯ ಪಿಯುಸಿ ಪರೀಕ್ಷೆ; ಆ ಭಾಗದಿಂದ ಬರೋರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ..‌

ABOUT THE AUTHOR

...view details