ಬೆಂಗಳೂರು : ಕೆಆರ್ಎಸ್ ಡ್ಯಾಂ ವಿಚಾರದಲ್ಲಿ ಪದೇಪದೆ ಬಿರುಕು ಅನ್ನೋ ಹೇಳಿಕೆ ನೀಡಬಾರದು. ಆ ತರದ ಯಾವುದೇ ಸಮಸ್ಯೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಮಾಹಿತಿ ರವಾನೆ ಆಗಬಾರದು.
ಅದಕ್ಕೆ ನೀರಾವರಿ ತಜ್ಞರು, ಕಾವೇರಿ ನೀರಾವರಿ ನಿಗಮ ಇದೆ. ಕೆಳಭಾಗದ ರೈತರಿಗೆ ತಪ್ಪು ಸಂದೇಶ ಮಾಹಿತಿ ರವಾನೆಯಾಗಬಾರದು. ಲಕ್ಷಾಂತರ ಮಂದಿ ರೈತರ ಜತೆಗೆ ಆಟವಾಡಬಾರದು. ಈ ಬಗ್ಗೆ ಸಂಸದರು ಹಾಗೂ ಕುಮಾರಸ್ವಾಮಿಯವರೂ ಕೂಡ ಹೇಳಿಕೆ ನೀಡಬಾರದು ಎಂದರು.
ಸಂಸದೆ ಸುಮಲತಾ ಅವರದ್ದು ವೈಯಕ್ತಿಕ ಅಭಿಪ್ರಾಯ ಇರಬಹುದು. ಆದರೆ, ಅಧಿಕೃತವಾಗಿ ತಜ್ಞರು ಪರಿಶೀಲನೆ ಮಾಡ್ತಾರೆ. ಕೆಆರ್ಎಸ್ನಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲ. ಇದು ಸರ್ಕಾರದ ನಿಲುವು ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.
ಬಿಎಸ್‌ವೈ ಪ್ರಶ್ನಾತೀತ ನಾಯಕ :ಸಿಎಂ ಯಡಿಯೂರಪ್ಪ ವಿರುದ್ಧ ಸಿ ಪಿ ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಎರಡು ಸೀಟ್ ಇದ್ದಾಗಿನಿಂದ 110 ಸ್ಥಾನವರೆಗೂ ಯಡಿಯೂರಪ್ಪರೇ ನಮ್ಮ ನಾಯಕರಾಗಿದ್ದಾರೆ. ಅವರು ಪ್ರಶ್ನಾತೀತ ನಾಯಕರಾಗಿದ್ದಾರೆ.