ಬೆಂಗಳೂರು:ಶಿವರಾಮ್ ಚಿತ್ರರಂಗದ ಬಹಳ ಹಿರಿಯ ನಟರು. ನಾಗರಹಾವು ಸಿನಿಮಾದಿಂದ ಇದುವರೆಗೂ ನೂರಾರು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ತುಂಬಾ ಸಂಭಾವಿತ ಕಲಾವಿದರು ಶಿವರಾಮ್ ಎಂದು ಸಚಿವ ಆರ್ ಅಶೋಕ್ ನೆನಪು ಮಾಡಿಕೊಂಡರು.
ಹಿರಿಯ ನಟ ಶಿವರಾಮ್ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಅವರು, ಸಾಂಸಾರಿಕ ಚಿತ್ರದಲ್ಲಿ ಹೆಚ್ಚು ನಟನೆ ಮಾಡಿದ್ದರು. ಡಾ. ರಾಜಕುಮಾರ್ ಜೊತೆ ಮಾಲೆ ಹಾಕಿ ಅಯ್ಯಪ್ಪ ದರ್ಶನ ಮಾಡಿದವರು. ನಮ್ಮ ಆಫೀಸ್ ಗೆ ಯಾವಾಗಲು ಬರುತ್ತಿದ್ದರು. ಜನರಿಗೆ ಅನುಕೂಲವಾಗಲಿ ಎಂದು ಸ್ವಂತ ಲೈಬ್ರರಿ ಸ್ಥಾಪನೆ ಮಾಡಿದ್ದರು ಎಂದು ಕೆಲವು ನೆನಪುಗಳನ್ನ ಮೇಲಕು ಹಾಕಿದರು.
ಮೊನ್ನೆ ಪುನೀತ್ ಅವರನ್ನ ಕಳ್ಕೊಂಡಿದ್ದೇವೆ, ಅವರ ಫ್ಯಾಮಿಲಿ ಕೂಡ ಇಲ್ಲಿಗೆ ಬಂದಿದೆ. ಮೈಸೂರು ಆಶ್ರಮದಲ್ಲಿ ಅನಾಥ ಮಕ್ಕಳಿದ್ದಾರೆ. ಅಲ್ಲಿ ಸಾವಿರ ಮಕ್ಕಳಿಗೆ ಅವಕಾಶ ಕಲ್ಪಿಸಬೇಕು. ಪುನೀತ್ ಅವರು ನಮ್ಮೊಂದಿಗಿಲ್ಲ. ಇವಾಗ ಇನ್ನೊಂದು ನೋವು, ಇನ್ನೊಂದು ಆಘಾತ. ನಿನ್ನೆ ಆಸ್ಪತ್ರೆಗೆ ಹೋಗಿದ್ದೆ. ಅವರನ್ನ ನೋಡಿ ದುಃಖ ಆಯ್ತು. ಕರ್ನಾಟಕದ ಜನತೆ ಅವರ ಸಿನಿಮಾಗಳನ್ನ ನೋಡಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ನೀಡಲಿ ಎಂದರು.
ನಮ್ಮ ಕ್ಷೇತ್ರದಲ್ಲಿ ಅವರ ಹೆಸರು ಯಾವಾಗಲೂ ಇರುತ್ತೆ. ಅವರ ನೆನಪು ಉಳಿಯೋ ಕೆಲಸವನ್ನ ಮಾಡುತ್ತೇವೆ. ಯಾವುದಾದರೂ ಕಟ್ಟಡಕ್ಕೆ ಅಥವಾ ರಸ್ತೆಗೆ ಅವರ ಹೆಸರು ಇಡುತ್ತೇವೆ. ನಾಳೆ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ಗಂಟೆ ಚಿತ್ರರಂಗದ ಕಡೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಅವಕಾಶ ಕಲ್ಪಿಸಲಾಗಿದೆ. ನಾಳೆ ಬೆಳಗ್ಗೆ ಮೃತದೇಹ ಕೊಂಡೊಯ್ಯಲಾಗುತ್ತದೆ. ಬಳಿಕ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಮಾಡಲಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಇದನ್ನೂ ಓದಿ : ಚಂದನವನದ ಹಿರಿಯ ನಟ ಶಿವರಾಮ್ ನಿಧನ.. ಕಂಬನಿ ಮಿಡಿದ ಸಿಎಂ, ಬಿಎಸ್ವೈ