ಕರ್ನಾಟಕ

karnataka

ETV Bharat / state

ರಾಜಕಾಲುವೆ ಒತ್ತುವರಿ ಮಾಡಿದ್ದರೆ ಶೀಘ್ರವೇ ತೆರವು: ಸಚಿವ ಅಶೋಕ್ - ಮಳೆ ಪರಿಹಾರ ಕಾರ್ಯ

ಮಳೆಯಿಂದ ಬೆಂಗಳೂರಿನಲ್ಲಿ ಹಾನಿ ಸಂಭವಿಸಿದ್ದು ಈ ಸಂಬಂಧ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿದ್ದರೆ ಯಾವುದೇ ಮುಲಾಜಿಲ್ಲದೇ ಶೀಘ್ರವೇ ತೆರವು ಮಾಡಿಸಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.

Minister R Ashok
ಸಚಿವ ಆರ್​ ಅಶೋಕ್

By

Published : Sep 1, 2022, 7:13 AM IST

ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿದ್ದರೆ ಅವರೆಷ್ಟೇ ಪ್ರಭಾವಿ ಆಗಿದ್ದರೂ ಮುಲಾಜಿಲ್ಲದೇ ತೆರವು ಮಾಡಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಹಿರಿಯ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಡಿಜಾಸ್ಟರ್ ಮ್ಯಾನೇಜ್​ಮೆಂಟ್​ನಡಿ ನೋಟಿಸ್ ನೀಡುವ ಅವಶ್ಯಕತೆಯಿಲ್ಲ. ಎಷ್ಟೇ ಪ್ರಭಾವಿ ಇದ್ದರೂ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆಂದು ತಿಳಿಸಿದರು.

ಮಾಹಿತಿ ಹಂಚಿಕೊಂಡ ಸಚಿವ ಆರ್​ ಅಶೋಕ್

ಮಳೆ, ಪ್ರವಾಹ ಪರಿಸ್ಥಿತಿ, ಪರಿಹಾರ ಕಾರ್ಯ ಸಂಬಂಧ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಕಳೆದ ಸಲ ಭೇಟಿ ನೀಡಿದ್ದ ಸ್ಥಳಗಳಲ್ಲಿ ಪರಿಹಾರ ಕೆಲಸ ನಡೆಯುತ್ತಿದೆ. ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲಿ ಹೆಚ್ಚಿನ ಅನಾಹುತವಾಗಿದೆ. ಹೊಸ ಕಾಲುವೆಗಳ ನಿರ್ಮಾಣ ಮಾಡಿ, ನೀರು ಆಚೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕೆರೆಗಳು ತುಂಬಿವೆ. ಯಾರ ಮನೆಗೆ ನೀರು ನುಗ್ಗಿದೆಯೋ, ತೊಂದರೆ ಆಗಿದೆಯೋ ಅಂಥವರಿಗೆ ಸರ್ಕಾರ ಪರಿಹಾರ ನೀಡಲಿದೆ. ಬೆಳೆ ಪರಿಹಾರ ಕೂಡ ನೀಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಬೆಂಗಳೂರು ಪ್ರವಾಹ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಿಎಂ: ಇಂದು ಖುದ್ದು ಪರಿಶೀಲನೆ

ನೊಂದವರಿಗೆ ಸರ್ಕಾರ ಸಹಾಯ ಮಾಡಲಿದೆ. ಈಗಾಗಲೇ ಮಳೆ ಪರಿಹಾರ ಕಾರ್ಯ, ಸುವ್ಯವಸ್ಥೆಗೆ ಟೆಂಡರ್ ಆಗಿದೆ. ಮಳೆ ನಿಲ್ಲುತ್ತಿಲ್ಲ.‌ ಎಂಟು ಸಾವಿರ ಕೋಟಿ ರೂ. ಹಣ ಬಿಡುಗಡೆಯಾಗಿದೆ.‌ ಸಾರ್ವಜನಿಕರಲ್ಲಿ ವಿನಂತಿ ಮಾಡುತ್ತೇನೆ.‌ ಗುರುವಾರ ಮುಖ್ಯಮಂತ್ರಿಗಳು ನೆರೆ ಬಂದು ಹಾನಿಯಾಗಿರುವ ಪ್ರದೇಶಗಳ ಸಿಟಿ ರೌಂಡ್ಸ್ ಮಾಡುತ್ತಾರೆ ಎಂದರು. ಇನ್ನೂ ಸೆ. 3ರಂದು ಹಾಸನ, ತುಮಕೂರು, ಮಂಗಳೂರು ಭಾಗದಲ್ಲಿ ಪ್ರವಾಸ ಮಾಡುತ್ತೇನೆಂದು ತಿಳಿಸಿದರು.

ABOUT THE AUTHOR

...view details