ಕರ್ನಾಟಕ

karnataka

ETV Bharat / state

ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿರೋದು ನಾಚಿಕೆಗೇಡು: ಸಚಿವ ಆರ್.ಅಶೋಕ್ - ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿರೋದು ನಾಚಿಕೆಗೇಡು

ಫೋನ್ ಟ್ಯಾಪ್ ಮಾಡಿರುವುದು‌ ನಿಜ. ನೂರಕ್ಕೆ‌ ನೂರು ಫೋನ್‌ ಟ್ಯಾಪ್‌ ಆಗಿದೆ.‌ ನಾನು ಈ‌ ಮುಂಚೆ ಈ ಬಗ್ಗೆ ಹೇಳಿದ್ದೆ. ತನಿಖೆಯಲ್ಲಿ ಈಗ ಅದೆಲ್ಲ ಹೊರ ಬರುತ್ತಿದೆ ಎಂದು ಆರ್​ ಅಶೋಕ್​ ಕಿಡಿಕಾರಿದರು.

ಸಚಿವ ಆರ್.ಅಶೋಕ್

By

Published : Sep 27, 2019, 4:59 PM IST

ಬೆಂಗಳೂರು: ಸ್ವಾಮಿಜಿಗಳ ಫೋನ್‌‌ ಟ್ಯಾಪ್ ಮಾಡಿಸಿರುವುದು ನಾಚಿಗೇಡಿನ ವಿಚಾರ ಎಂದು ಕಂದಾಯ‌ ಸಚಿವ ಆರ್.ಅಶೋಕ್ ಕಿಡಿ‌ಕಾರಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳ ಫೋನ್ ಟ್ಯಾಪ್ ಏಕೆ‌ ಮಾಡಿದ್ದಾರೆ?. ತನಿಖೆಯಲ್ಲಿ ಎಲ್ಲವೂ ಹೊರ ಬರಲಿ. ಸ್ವಾಮೀಜಿಗಳನ್ನು ರಾಜಕೀಯ ವ್ಯವಸ್ಥೆಗೆ ತರುವುದು ಎಷ್ಟು ಸರಿ?. ದೇಶ ದ್ರೋಹಿ ಸಂಘಟನೆಗಳ, ಭಯೋತ್ಪಾದಕರ ಫೋನ್ ಟ್ಯಾಪಿಂಗ್ ಮಾಡಲು‌ ಅವಕಾಶ ಇದೆ‌. ಸ್ವಾಮಿಜಿಗಳದ್ದು ಫೋನ್ ಟ್ಯಾಪ್ ಏಕೆ‌ ಮಾಡಲಾಗಿದೆ? ಎಂದು ಕಿಡಿ ಕಾರಿದರು.

ಅಧಿಕಾರಿಗಳು, ರಾಜಕಾರಣಿಗಳ ಫೋನ್ ಟ್ಯಾಪ್ ಮಾಡುವುದು ಸಹಜ. ಆದರೆ ನಿರ್ಮಲಾನಂದ ಸ್ವಾಮಿಗಳ ದೂರವಾಣಿ ಕದ್ದಾಲಿಕೆ ಮಾಡಲು ಎಷ್ಟು ಧೈರ್ಯ ಇರಬೇಕು. ಮಾಡಿದವರಿಗೆ ನಾಚಿಕೆಯಗಬೇಕು. ಆ ಸಂಬಂಧ ಕಠಿಣ ಶಿಕ್ಷೆ ಯಾಗಬೇಕು. ತನಿಖೆಯಿಂದ ಎಲ್ಲ ಸತ್ಯಾಸತ್ಯತೆ ಹೊರಬರಲಿ.‌ ಯಾರದ್ದು ಪೋನ್ ಟ್ಯಾಪ್ ಮಾಡಲಾಗಿದೆ ಅವರ ಕ್ಷಮಾಪಣೆ ಕೇಳುತ್ತೇನೆ. ತನಿಖೆಯಿಂದ ಎಲ್ಲವೂ ಹೊರ ಬಂದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಫೋನ್​ ಟ್ಯಾಪ್​ ವಿರುದ್ಧ ಸಚಿವ ಆರ್.ಅಶೋಕ್ ಆಕ್ರೋಶ

ಉಪ್ಪು ತಿಂದವರು ನೀರು ಕುಡಿಯಲೇ‌ಬೇಕು.‌ ಫೋನ್ ಟ್ಯಾಪ್ ಸಂಬಂಧದ ಕಾನೂನು ಪ್ರಸ್ತುತದ್ದಲ್ಲ. ಅದು ಬ್ರಿಟಿಷರು ಮಾಡಿದ ಕಾನೂನು‌.‌ ಫೋನ್ ಟ್ಯಾಪ್ ಮಾಡಿರುವುದು‌ ನಿಜ. ನೂರಕ್ಕೆ‌ ನೂರು ಫೋನ್‌ ಟ್ಯಾಪ್‌ ಆಗಿದೆ.‌ ನಾನು ಈ‌ ಮುಂಚೆ ಈ ಬಗ್ಗೆ ಹೇಳಿದ್ದೆ. ತನಿಖೆಯಲ್ಲಿ ಈಗ ಅದೆಲ್ಲ ಹೊರ ಬರುತ್ತಿದೆ ಎಂದರು.

ನಮ್ಮ ಮೇಲೆ ಗೂಬೆ ಏಕೆ‌ ಕೂರಿಸಬೇಕು ಎಂಬ ಹೆಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರ ತಲೆ ಮೇಲೆ, ಕಾರಿನ ಮೇಲೆ ಕಾಗೆ ಕೂರುತ್ತದೆ ಎಂಬುದು‌ ಗೊತ್ತಾಗುತ್ತದೆ. ಎರಡು ದಿನ ಕಾಯಿರಿ ಎಂದು ಇದೇ ವೇಳೆ ಸೂಚ್ಯ ವಾಗಿ ತಿಳಿಸಿದರು.

ABOUT THE AUTHOR

...view details