ಬೆಂಗಳೂರು: ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಪಾದಾರ್ಪಣೆ ಮಾಡಿದ್ದು ಎಟಿಎಂ ಮಾಡಿಕೊಳ್ಳುವುದಕ್ಕೆ ಎಂದು ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರೇಸ್ ಕೋಸ್ನ ಸಿಎಂ ನಿವಾಸದಲ್ಲಿ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇಡೀ ದೇಶದಲ್ಲಿ ಕಾಂಗ್ರೆಸ್ ನಡೆಸಲು ಯಾವುದೇ ಹಣಕಾಸು ಇಲ್ಲ. ಅದಕ್ಕಾಗಿ ಕರ್ನಾಟಕವನ್ನು ಎಟಿಎಂ ಮಾಡಲು ರಾಹುಲ್ ಗಾಂಧಿ ಇಲ್ಲಿಗೆ ಬಂದಿದ್ದಾರೆ. ಹೀಗಾಗಿ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್ನ ರಕ್ತದಲ್ಲಿಯೇ ಭಾರತವನ್ನು ಚೂರು ಚೂರು ಮಾಡುವ ಪ್ರವೃತ್ತಿ ಇದೆ. ಕಾಂಗ್ರೆಸ್ ಭಾರತ್ ಜೋಡೋ ಅಲ್ಲ ತೋಡೋ ಎಂದು ಕಿಡಿಕಾರಿದರು.
ಮುಸ್ಲಿಂ ಲೀಗ್ ಇತ್ತು. ಅದರ ಬಿ ಟೀಮ್ ಇದು. ಪಿಎಫ್ಐ ಬ್ಯಾನ್ ಆಗಿದೆ. ಆದರೆ ಸಿದ್ದರಾಮಯ್ಯ ಸಮರ್ಥನೆ ಮಾಡುವ ಬದಲು ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾರೆ. ಮುಸ್ಲಿಂನ ಬಿ ಟೀಮ್ ಆಗಿ ಕೆಲಸ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಮೂಲೆ ಗುಂಪಾಗಿರುವುದಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
ಈಗಾಗಲೇ ರಾಹುಲ್, ಸೋನಿಯಾ ಸೇರಿ ಹಲವು ನಾಯಕರು ಬೇಲ್ ಮೇಲೆ ಇದ್ದಾರೆ. ಬೇಲ್ ಮೇಲಿರುವ ನಾಯಕರು ಕರ್ನಾಟಕದ ಬಗ್ಗೆ ಮಾತನಾಡುವುದು ಬಹಳ ಹಾಸ್ಯಾಸ್ಪದ. ಅವರ ಮೇಲೆ ಕ್ರಿಮಿನಲ್ ಕೇಸ್ ಇದೆ. ಇವರ ಬೇಳೆ ಕರ್ನಾಟಕದಲ್ಲಿ ಬೇಯಲ್ಲ. ಬಂದ ಸಿದ್ಧ ಹೋದ ಸಿದ್ಧ ಹೇಳಿ ರಾಹುಲ್ ಗಾಂಧಿ ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ರಾಗಾ ಜೊತೆ 1.5 ಕಿ.ಮೀ ನಡೆದ ಮೆಡಿಕಲ್ ವಿದ್ಯಾರ್ಥಿನಿ: ಫಿಟ್ನೆಸ್, ಆಯುರ್ವೇದದ ಬಗ್ಗೆ ಚರ್ಚೆ